ಮಂಡ್ಯ: ಬೆಳಗ್ಗೆ 15 ಪ್ರಕರಣ, ಸಂಜೆ 18 ಕೊರೊನಾ ಪಾಸಿಟಿವ್ ಪ್ರಕರಣ ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿ ದಾಟಿದೆ. ಮುಂಬೈ ಸೋಂಕು ಜಿಲ್ಲೆಯನ್ನು ತಲ್ಲಣಗೊಳಿಸಿದ್ದು, ಸದ್ಯ 201 ಪ್ರಕರಣ ದಾಖಲಾಗಿದೆ.
ಇಂದು ಒಂದೇ ದಿನ ಒಟ್ಟು 33 ಪ್ರಕರಣ ದೃಢಪಟ್ಟಿದೆ. ಇಂದು ದಾಖಲಾದ ಪ್ರಕರಣಗಳಲ್ಲಿ 11 ಮಹಿಳೆಯರು, 16 ಪುರುಷರು ಹಾಗೂ 6 ಮಂದಿ ಮಕ್ಕಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 183 ಪ್ರಕರಣ ದಾಖಲಾಗಿದೆ.
P-1471ರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಇವರು ಮಳವಳ್ಳಿ ಮೂಲದ ಅಧಿಕಾರಿ ಎನ್ನಲಾಗಿದ್ದು, ಅಧಿಕಾರಿ ಜೊತೆ ಸಂಪರ್ಕ ಹೊಂದಿದ್ದವರ ಪತ್ತೆ ಕಾರ್ಯ ನಡೆಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಇಂದು ಓರ್ವ ಸೋಂಕಿತ ಗುಣಮುಖವಾಗಿದ್ದರೆ, ಒಟ್ಟು 176 ಸಕ್ರಿಯ ಪ್ರಕರಣಗಳು ಇವೆ.
ಇಲ್ಲಿವರೆಗೂ 25 ಮಂದಿಯಷ್ಟೇ ಗುಣ ಹೊಂದಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ ಜಿಲ್ಲೆ ಬೆಂಗಳೂರನ್ನೂ ಮೀರಿಸಿ ಪ್ರಥಮ ಸ್ಥಾನದಲ್ಲಿದೆ.