ಮಂಡ್ಯ: ಕೊರೊನಾ ವಾರಿಯರ್ಸ್ ಸಾಮಾಜಿಕ ಅಂತರ ಮರೆತು, ಕುರ್ಚಿಗಾಗಿ ಮುಗಿಬಿದ್ದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಬಾಬು ಆಯೋಜಿಸಿರುವ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ವೇದಿಕೆ ಮುಂಭಾಗ ಕುಳಿತುಕೊಳ್ಳಲು ಕುರ್ಚಿಗಳ ಅಭಾವ ಎದುರಾಗಿತ್ತು. ಈ ವೇಳೆ ಆಗಮಿಸಿದ್ದ ನೂರಾರು ಕೊರೊನಾ ವಾರಿಯರ್ಸ್ ಕುರ್ಚಿಗಾಗಿ ಮುಗಿಬಿದ್ರು.
ಇದನ್ನು ಗಮನಿಸಿದ ಕಾರ್ಯಕ್ರಮ ಆಯೋಜಕರು ಮತ್ತಷ್ಟು ಕುರ್ಚಿಗಳನ್ನು ತಂದು ಹಾಕಿದರು. ಇದನ್ನು ಕಂಡ ಪುರುಷರು-ಮಹಿಳೆಯರು ಕುರ್ಚಿಗಾಗಿ ನೂಕುನುಗ್ಗಲು ನಡೆಸಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಮರೆತು ಕೋವಿಡ್ ನಿಯಮವನ್ನು ಗಾಳಿಗೆ ತೂರಿದರು.
ಇದನ್ನೂ ಓದಿ: ಜಿಲ್ಲೆಯ ಹೊರಗಡೆ ಇರುವ ಶಿಕ್ಷಕರಿಗೆ ಶಾಲೆ ಹಾಜರಾತಿಯಿಂದ ವಿನಾಯಿತಿ