ಮಂಡ್ಯ: ಮುಂಬೈ ಸೋಂಕು ಕಡಿಮೆ ಆಗುತ್ತಿದ್ದಂತೆ, ಅಂತರ್ ಜಿಲ್ಲಾ ಸೋಂಕು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಇಂದು 19 ಮಂದಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಇವರಲ್ಲಿ ಬಹುತೇಕರು ಅಂತರ ಜಿಲ್ಲಾ ಪ್ರವಾಸ ಮಾಡಿದವರೇ ಆಗಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 440ಕ್ಕೆ ಏರಿಕೆಯಾಗಿದೆ. ಇವರಲ್ಲಿ 352 ಮಂದಿ ಗುಣಮುಖರಾಗಿದ್ದು, 88 ಪ್ರಕರಣಗಳು ಸಕ್ರಿಯವಾಗಿವೆ. ಇಂದು 12 ಮಂದಿ ಪುರುಷರು ಹಾಗೂ 7 ಮಂದಿ ಮಹಿಳೆಯರಿಗೆ ಸೋಂಕು ಕಂಡು ಬಂದಿದೆ.