ETV Bharat / state

ಗಣಿ ಮಾಲೀಕರಿಂದ ಒಂದು ರೂಪಾಯಿಯನ್ನೂ ಮುಟ್ಟಿಲ್ಲ: ದೇವಸ್ಥಾನದ ಮುಂದೆ ಸಿಎಂ ಪುತ್ರ ವಿಜಯೇಂದ್ರ ಪ್ರಮಾಣ - ಮಂಡ್ಯ

ಸಾಸಲು ಸೋಮೇಶ್ವರ ದೇವಾಲಯದ ಎದುರು ವಿಜಯೇಂದ್ರ ಪ್ರಮಾಣ ಮಾಡಿದ್ದಾರೆ. ಬೇಬಿ ಬೆಟ್ಟ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೆಆರ್​ಎಸ್​ಗೆ ಅಪಾಯವಾಗುತ್ತಿದೆ. ಗಣಿ ಮಾಲೀಕರು ತಮಗೆ ದುಡ್ಡು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಂತೆ ವಿಜಯೇಂದ್ರ ಹೀಗೆ ಕಾರಿನಲ್ಲೇ ಕುಳಿತು ಪ್ರಮಾಣ ಮಾಡಿದ್ದಾರೆ.

Vijayendra
ವಿಜಯೇಂದ್ರ
author img

By

Published : Jun 23, 2020, 12:55 PM IST

Updated : Jun 23, 2020, 1:00 PM IST

ಮಂಡ್ಯ: ಒಂದು ರೂಪಾಯಿಯನ್ನೂ ಮುಟ್ಟಿಲ್ಲ ನಾನು, ದೇವಸ್ಥಾನದ ಎದುರು ನಿಂತಿದ್ದೀನಿ. ಹೀಗಂತ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಗ್ರಾಮಸ್ಥರ ಎದುರು ಪ್ರಮಾಣ ಮಾಡಿದ ಘಟನೆ ನಡೆದಿದೆ.

ಸಾಸಲು ಸೋಮೇಶ್ವರ ದೇವಾಲಯದ ಎದುರು ವಿಜಯೇಂದ್ರ ಪ್ರಮಾಣ ಮಾಡಿದ್ದಾರೆ. ಬೇಬಿ ಬೆಟ್ಟ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೆಆರ್​ಎಸ್​ಗೆ ಅಪಾಯವಾಗುತ್ತಿದೆ. ಗಣಿ ಮಾಲೀಕರು ತಮಗೆ ದುಡ್ಡು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಂತೆ ವಿಜಯೇಂದ್ರ ಹೀಗೆ ಕಾರಿನಲ್ಲೇ ಕುಳಿತು ಪ್ರಮಾಣ ಮಾಡಿದರು.

ಪ್ರಮಾಣ ಮಾಡಿದ ಸಿಎಂ ಪುತ್ರ ವಿಜಯೇಂದ್ರ

ಕಲ್ಲು ಗಣಿಗಾರಿಕೆ ನಿಷೇಧಿಸಿ ಸರ್ಕಾರ ಹಾಗೂ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ನಿಷೇಧಾಜ್ಞೆ ತೆರವುಗೊಳಿಸಲು ಲಂಚ ಕೊಟ್ಟಿರುವ ಆರೋಪವನ್ನು ಗ್ರಾಮಸ್ಥರು ವಿಜಯೇಂದ್ರ ಮೇಲೆ ಮಾಡಿದ್ದು, ವಿಜಯೇಂದ್ರಗೆ 8 ರಿಂದ 10 ಕೋಟಿ ರೂ. ಲಂಚ ನೀಡಿರೋದಾಗಿ ಗಣಿ ಮಾಲೀಕರು ತಮ್ಮ ಮೇಲೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಆ ಮೂಲಕ ನಿಮ್ಮ ಹೆಸರಿಗೆ ಕಪ್ಪು ಚುಕ್ಕೆ ತರುತ್ತಿದ್ದಾರೆ ಎಂದು ಎಚ್ಚರಿಸಿದರು.

ಆರೋಪದ ಬಗ್ಗೆ ವಿಜಯೇಂದ್ರರ ಗಮನ ಸೆಳೆದ ಗ್ರಾಮಸ್ಥರು, ನಿಮ್ಮ ಡಾಲರ್ಸ್ ಕಾಲೋನಿ ನಿವಾಸಕ್ಕೂ ನಾವು ಬಂದಿದ್ದೆವು. ಅಪ್ಪಾಜಿ ಅವರಿಗೂ ಮನವಿ ಕೊಟ್ಟಿದ್ದೆವು. ನಿಮ್ಮ ತಂದೆ ಗಣಿಗಾರಿಕೆ ನಿಲ್ಲಿಸಿದ್ದಾರೆ. ಆದರೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೀತಿದೆ. ಪಾಂಡವಪುರ ಉಪ ವಿಭಾಗಾಧಿಕಾರಿ ವಿ.ಆರ್. ಶೈಲಜಾ, ಸಿಪಿಐ ರವೀಂದ್ರ ಜೆಡಿಎಸ್ ಏಜೆಂಟ್ ರೀತಿ ವರ್ತನೆ ಮಾಡ್ತಿದ್ದಾರೆ ಎಂದು ಜನ ದೂರು ನೀಡಿದರು.

Last Updated : Jun 23, 2020, 1:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.