ETV Bharat / state

ನೆನಪಾಯಿತು ಮಂಡ್ಯ... ಮೃತ ರೈತನ ಮನೆಗೆ ಇಂದು ಸಿಎಂ ಕುಮಾರಸ್ವಾಮಿ ಭೇಟಿ - kannadanews

ಸಾಲಬಾಧೆ ತಡೆಯಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಸಿಎಂ ಸಾಂತ್ವನ ಹೇಳಲು ಭೇಟಿ ನೀಡುತ್ತಿದ್ದಾರೆ.

ಮೃತ ರೈತನ ಕುಟುಂಬಕ್ಕೆ ಸಿಎಂ ಹೆಚ್​ಡಿಕೆ ಸಾಂತ್ವನ
author img

By

Published : Jun 18, 2019, 10:31 AM IST

ಮಂಡ್ಯ: ಸಾಲಬಾಧೆ, ನಿಖಿಲ್ ಸೋಲಿನ ಖಿನ್ನತೆ, ಕೆರೆ ತುಂಬದೇ ಹತಾಶೆ ಈ ಎಲ್ಲಾ ಕಾರಣಗಳಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬ ಸಿಎಂ ಕುಮಾರಸ್ವಾಮಿ ಅವರ ಸಹಾಯದ ನಿರೀಕ್ಷೆಯಲ್ಲಿದೆ.

ಮೃತ ರೈತನ ಕುಟುಂಬಕ್ಕೆ ಸಿಎಂ ಹೆಚ್​ಡಿಕೆ ಸಾಂತ್ವನ

ಇಂದು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಸಿಎಂ ಕುಮಾರಸ್ವಾಮಿ ರೈತ ಸುರೇಶ್ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ತಮ್ಮ ಕುಟುಂಬದ ಸದಸ್ಯರಿಗೆ ನೌಕರಿಯ ಬೇಡಿಕೆ ಇಡಲು ಮೃತನ ಕುಟುಂಬಸ್ಥರು ಮುಂದಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಆಘಲಯ ಗ್ರಾಮದ ಸುರೇಶ್ ಎರಡು ದಿನಗಳ ಹಿಂದೆ ಸೆಲ್ಫಿ ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸೆಲ್ಫಿಯಲ್ಲಿ ಸಾಲದ ಸಮಸ್ಯೆ, ಕೆರೆ ತುಂಬಿಸಬೇಕು ಎಂದು ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದರು. ಇದರ ಜೊತೆಗೆ ಸಹಾಯಕ್ಕೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಮುಂದಾಗಬೇಕು. ಸರ್ಕಾರ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು‌. ಹೀಗಾಗಿ ಸಿಎಂ ಕುಮಾರಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯ ಮಾಡಲು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.

ಈ ಕುರಿತು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಾಲ ಮಾಡಿ 6ರಿಂದ 7 ಕೊಳವೆ ಬಾವಿ ತೋಡಿಸಿದ್ದರು. ನೀರು ಬಂದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಪತ್ನಿ ಜಯಶೀಲ ಹೇಳಿದ್ದಾರೆ. ಇನ್ನು ಪುತ್ರಿ ಸುವರ್ಣ ಪ್ರತಿಕ್ರಿಯೆ ನೀಡಿ, ನಮಗೆ ಎರಡು ಎಕರೆ ಜಮೀನು ಇದೆ. ಸಾಲ ಇದೆ ಅಂದಿದ್ದರೆ ಶಿಕ್ಷಣ ನಿಲ್ಲಿಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೆ ಎಂದು ಕಣ್ಣೀರು ಹಾಕಿದರು. ವಯಸ್ಸಾದ ತಂದೆ, ತಾಯಿ ಹಾಗೂ ಪುತ್ರ, ಪುತ್ರಿಯರ ಹೊಣೆ ಸುರೇಶ್ ಮೇಲೆ ಇತ್ತು. ವ್ಯವಸಾಯ ಮಾಡಿಕೊಂಡೇ ಇಡೀ ಕುಟುಂಬ ಜೀವನ ನಡೆಸುತ್ತಿತ್ತು.

Intro:ಮಂಡ್ಯ: ಒಂದೆಡೆ ಸಾಲ ಬಾಧೆ, ಮತ್ತೊಂದು ಕಡೆ ನಿಖಿಲ್ ಸೋಲಿನ ಖಿನ್ನತೆ, ಕೆರೆ ತುಂಬದೇ ಹತಾಸೆಗೊಂಡಿದ್ದ ರೈತ ಸಿಎಂಗೆ ಮನವಿ ಮನವಿ ಮಾಡಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬ ಸಿಎಂ ಕುಮಾರಸ್ವಾಮಿ ಅವರ ಸಹಾಯದ ನಿರೀಕ್ಷೆಯಲ್ಲಿದೆ. ಕುಟುಂಬಕ್ಕೆ ಸಾಂತ್ವಾನ ಹೇಳಲು ಸಿಎಂ ಆಗಮಿಸುತ್ತಿದ್ದು, ತಮ್ಮ ಕುಟುಂಬದ ಸದಸ್ಯರಿಗೆ ನೌಕರಿಯ ಬೇಡಿಕೆ ಇರಿಸಲು ಮುಂದಾಗಿದ್ದಾರೆ.

Body:ಕೆ.ಆರ್.ಪೇಟೆ ತಾಲ್ಲೂಕಿನ ಆಘಲಯ ಗ್ರಾಮದ ಸುರೇಶ್ ಎರಡು ದಿನಗಳ ಹಿಂದೆ ಸೆಲ್ಫಿ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸೆಲ್ಫಿಯಲ್ಲಿ ಸಾಲದ ಸಮಸ್ಯೆ, ಕೆರೆ ತುಂಬಿಸಬೇಕು ಎಂದು ಸಿಎಂ ಕುಮಾರಸ್ವಾಮಿ ಗೆ ಮನವಿ ಮಾಡಿದ್ದರು.
ಇದರ ಜೊತೆಗೆ ಕುಮಾರಸ್ವಾಮಿ ಸಹಾಯಕ್ಕೆ ಸಚಿವ ಡಿ.ಕೆ ಶಿವಕುಮಾರ್ ಮುಂದಾಗಬೇಕು. ಸರ್ಕಾರ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು‌. ಹೀಗಾಗಿ ಸಿಎಂ ಕುಮಾರಸ್ವಾಮಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಸಹಾಯ ಮಾಡಲು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.
ಸಿಎಂಗೆ ಕುಟುಂಬ ಸಹಾಯ ಕೇಳಲು ಮುಂದಾಗಿದೆ. ಗ್ರಾಮದ ಕೆರೆ ತುಂಬಬೇಕು. ಸಾಲ ಮನ್ನಾ ಆಗಬೇಕು ಹಾಗೂ ಪುತ್ರನಿಗೆ ನೌಕರಿ ಬಯಸಿ ಮನವಿ ಸಲ್ಲಿಸಲಿದೆ.
ಕುಟುಂಬ ಸದಸ್ಯರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, 6 ರಿಂದ 7 ಕೊಳವೆ ಬಾವಿ ತೋಡಿಸಿದ್ದರು. ಇದು ಸಾಲಕ್ಕೆ ಕಾರಣವಾಗಿದೆ. ನೀರು ಬಂದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಪತ್ನಿ ಜಯಶೀಲ ತಿಳಿಸಿದರು.
ಇನ್ನು ಪುತ್ರಿ ಸುವರ್ಣ ಪ್ರತಿಕ್ರಿಯೆ ನೀಡಿ, ನಮಗೆ ಎರಡು ಎಕರೆ ಜಮೀನು ಇದೆ. ಸಾಲ ಇದೆ ಅಂದಿದ್ದರೆ ಶಿಕ್ಷಣ ನಿಲ್ಲಿಸಿ ಕುಟುಂಬ ನಿರ್ವಣೆ ಮಾಡುತ್ತಿದ್ದೆ. ಧರ್ಮಸ್ಥಳ ಹೋಗಿದ್ದರಿಂದ ನಮ್ಮ ತಂದೆ ಆತ್ಮಹತ್ಯೆ ಮುಂದೂಡಿದ್ದರು. ಈ ವಿಚಾರ ಗೊತ್ತಿದ್ದರೆ ತಡೆಯುತ್ತಿದ್ದೆವು ಎಂದು ಕಣ್ಣೀರು ಹಾಕಿದರು.
ವಯಸ್ಸಾದ ತಂದೆ, ತಾಯಿ ಹಾಗೂ ಪುತ್ರ, ಪುತ್ರಿಯರ ಹೊಣೆ ಸುರೇಶ್ ಮೇಲೆ ಇತ್ತು. ವ್ಯವಸಾಯ ಮಾಡಿಕೊಂಡೇ ಇಡೀ ಕುಟುಂಬ ಜೀವನ ನಡೆಸುತ್ತಿತ್ತು. ಇತ್ತೀಚೆಗಷ್ಟೇ 76 ಸಾವಿರ ಸಾಲ ಮನ್ನಾ ಆಗಿತ್ತು. ಆದರೆ 9 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.