ಮಂಡ್ಯ: ಇದೀಗ ಎಲ್ಲ ವ್ಯವಹಾರಗಳು ಆನ್‌ಲೈನ್ ಮಯವಾಗಿದೆ. ವ್ಯಾಪಾರ ವಹಿವಾಟು ಎಲ್ಲವೂ ಬೆರಳ ತುದಿಗೆ ಬಂದು ನಿಂತಿದೆ. ಆದರೆ, ಆ ಉತ್ಪನ್ನ ಯಾವ ದೇಶದ್ದು ಎಂಬುದು ಮಾತ್ರ ಗ್ರಾಹಕರಿಗೆ ಗೊತ್ತಾಗುವುದಿಲ್ಲ. ಹೀಗಾಗಿ ಯಾವ ಉತ್ಪನ್ನ ಯಾವ ದೇಶದಲ್ಲಿ ಉತ್ಪಾದನೆ ಆಗಿದೆ ಎಂಬ ಮಾಹಿತಿ ತಿಳಿಯಲು ಮೂವರು ಯುವ ಟೆಕ್ಕಿಗಳು ಹೊಸ ಸಾಫ್ಟ್‌ವೇರ್ ಶೋಧಿಸಿದ್ದಾರೆ.
ಶ್ರೀರಂಗಪಟ್ಟಣದ ಮಹಮದ್ ಸುಹೇಲ್ ಹಾಗೂ ಈತನ ಸಹಪಾಠಿಗಳಾದ ಮಂಗಳೂರಿನ ಸ್ವಸ್ತಿಕ್ ಪದ್ಮ, ಬೆಂಗಳೂರಿನ ಪ್ರಣವ್ ಶಿಖರ್ ಪುರ್ ಶೋಚ್ ಸ್ವದೇಶಿ ಸಾಫ್ಟ್‌ವೇರ್ ಬರೆದಿದ್ದಾರೆ. ನಿಮ್ಮ ಕ್ರೋಮ್ ಇಂಟರ್‌ನೆಟ್ ಬ್ರೌಸರ್ನಿಂದ ಈ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಿಕೊಂಡರೆ ನೀವು ಯಾವುದೇ ಆನ್‌ಲೈನ್ ಸ್ಟೋರ್‌ಗೆ ಹೋಗಿ ವಸ್ತು ಖರೀದಿ ಮಾಡಲು ಮುಂದಾದಾಗ ಈ ಬಗ್ಗೆ ಸರ್ಚ್ ಮಾಡಿದರೆ ಸಾಕು ಅದರ ಸಂಪೂರ್ಣ ವಿವರವನ್ನು ನೀಡಲಿದೆ. ಆ ವಸ್ತು ಎಲ್ಲಿ ಉತ್ಪಾದನೆ ಆಗಿದೆ. ಭಾರತದಲ್ಲಿ ಕೇವಲ ಅಸೆಂಬಲ್ ಮಾಡಲಾಗಿದೆಯಾ ಅಥವಾ ಅದು ಮೇಡ್ ಇನ್ ಇಂಡಿಯಾದ ವಸ್ತುವೇ ಎಂಬುದು ನಿಮಗೆ ಡಿಸ್‌ಪ್ಲೇ ಆಗಲಿದೆ.
ಆತ್ಮ ನಿರ್ಭರ್ ಯೋಜನೆಗೆ ಅನುಕೂಲವಾಗುವ ದೃಷ್ಟಿಯಿಂದ ಈ ಆಪ್ ಬರೆಯಲಾಗಿದೆ. ಇದನ್ನು ಕಂಪ್ಯೂಟರ್ ಅಥವಾ ಮೊಬೈಲ್‌ಗೆ ಅಳವಡಿಸಿಕೊಂಡರೆ ಉತ್ಪನ್ನ ಎಲ್ಲಿ ತಯಾರಾಗಿದೆ ಎಂಬುದನ್ನ ಕಂಡು ಹಿಡಿಯಲು ಸಹಕಾರಿಯಾಗಲಿದೆ. ದೇಶದಲ್ಲಿ ಈಗ ಚೀನಾ ಉತ್ಪನ್ನ ಬಾಯ್ಕಾಟ್ ಅಭಿಯಾನ ನಡೆಯುತ್ತಿದ್ದು, ಈ ಆ್ಯಪ್ಗಳ ಬಾಯ್ಕಾಟ್ ಚಳವಳಿಗೆ ಸಹಕಾರಿಯಾಗಲಿದೆ. ಮಗನ ಈ ಸಾಧನೆಗೆ ಪೋಷಕರು ಬೆನ್ನೆಲುಬಾಗಿ ನಿಂತಿದ್ದಾರೆ.
ಯುವ ಸಂಶೋಧನಾ ಪಡೆಯ ಹೊಸ ಪ್ರಯತ್ನಕ್ಕೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚೀನಾ ಬಾಯ್ಕಾಟ್ ಚಳವಳಿಗೆ ಹೊಸ ಮಾರ್ಗ ಕಂಡು ಕೊಳ್ಳಲಾಗಿದೆ. ಆ ಮೂಲಕ ಮೇಕ್ ಇನ್ ಇಂಡಿಯಾಗೂ ಬೆಂಬಲ ಸಿಕ್ಕಂತಾಗಿದೆ.