ETV Bharat / state

ಡಿಕೆಶಿ ವಿಚಾರ.. ಕುಮಾರಸ್ವಾಮಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಚಲುವರಾಯಸ್ವಾಮಿ - DK shivakumar

ಡಿ.ಕೆ.ಶಿವಕುಮಾರ್ ಮಾಡಬಾರದ  ತಪ್ಪು ಮಾಡಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲು ಡಿಕೆಶಿ ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ರು. ಈ ಸಿಟ್ಟು ಬಿಜೆಪಿ ನಾಯಕರಿಗೆ ಇತ್ತು. ಈ ಹಿಂದೆ ದೇವೇಗೌಡ್ರ ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು ಎಂದು ಪರೋಕ್ಷವಾಗಿ ಡಿಕೆಶಿ ಬಂಧನಕ್ಕೆ ದೇವೇಗೌಡರ ಕುಟುಂಬ ಕಾರಣ ಎಂದು ಎನ್. ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಚಲುವರಾಯಸ್ವಾಮಿ
author img

By

Published : Sep 16, 2019, 11:51 AM IST

ಮಂಡ್ಯ: ಡಿಕೆಶಿಗೆ ದರೋಡೆ ಮಾಡೋದಕ್ಕೆ ನಾವು ಹೇಳಿದ್ವಾ? ಇದಕ್ಕೆಲ್ಲ ನಾನು ಹೊಣೆಯಾ? ಹೀಗಂತಾ ಮೈಸೂರಿನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರಂತೆ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಬಗ್ಗೆ ನನಗೆ ಸತ್ಯ ಗೊತ್ತಿಲ್ಲ. ಸತ್ಯಗೊತ್ತಿಲ್ಲದೇ ನಾನು ಮಾತನಾಡೋದು ತಪ್ಪು. ಹೆಚ್​ಡಿಕೆಯ ಆ ಹೇಳಿಕೆ ಬಗ್ಗೆ ಯಾರೋ ಆ ರೀತಿ ಹೇಳುತ್ತಿದ್ದರು ಎಂದು ತಮ್ಮ ಮಾತಿನಿಂದ ಜಾರಿಗೊಂಡರು.

ಹೆಚ್​ಡಿಕೆಯ ಸಿಎಂ ಪಟ್ಟ ಉಳಿಸಲು ಡಿಕೆಶಿ ಎಲ್ಲರನ್ನೂ ಎದುರು ಹಾಕಿಕೊಂಡರು. ಇವತ್ತು ಡಿಕೆಶಿ ಜೊತೆಯಲ್ಲಿ ಕುಮಾರಸ್ವಾಮಿ ನಿಲ್ಲಲಿಲ್ಲ. ಕುಮಾರಸ್ವಾಮಿ ಅವರಿಗೆ ಇಂತಹ ಕಷ್ಟ ಬಂದಿದ್ರೆ ಡಿಕೆಶಿ ಠಾಣೆ ಹತ್ತಿರಾನೇ ಕೂರುತ್ತಿದ್ರು. ಆದ್ರೆ, ಹೆಚ್​ಡಿಕೆ ಮಾಡಿದ್ದು ಏನು? ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟಕ್ಕೂ ಬೆಂಬಲ ಮಾಡಲಿಲ್ಲ ಎಂದು ಹರಿಹಾಯ್ದರು.

ಚಲುವರಾಯಸ್ವಾಮಿ, ಮಾಜಿ ಸಚಿವ

ಡಿ.ಕೆ.ಶಿವಕುಮಾರ್ ಮಾಡಬಾರದ ತಪ್ಪು ಮಾಡಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲು ಡಿಕೆಶಿ ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ರು. ಈ ಸಿಟ್ಟು ಬಿಜೆಪಿ ನಾಯಕರಿಗೆ ಇತ್ತು. ಈ ಹಿಂದೆ ದೇವೇಗೌಡ್ರ ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು ಎಂದು ಪರೋಕ್ಷವಾಗಿ ಡಿಕೆಶಿ ಬಂಧನಕ್ಕೆ ದೇವೇಗೌಡರ ಕುಟುಂಬ ಕಾರಣ ಎಂದರು.

ದೇವೇಗೌಡ್ರು ಹೇಳೋದೆಲ್ಲ ಸುಳ್ಳು. ಅವರಿಂದ ಅನೇಕರಿಗೆ ನೋವಾಗಿದೆ. ಜನರಿಗೆ ಮನವರಿಕೆ ಆಗುವ ವರೆಗೂ ಇದು ನಡೆಯುತ್ತಲೇ ಇರುತ್ತೆ. ಜನರಿಗೆ ಅರ್ಥವಾದಾಗ ಎಲ್ಲವೂ ಸರಿಹೋಗುತ್ತೆ. ಆ ದಿನ ಬೇಗ ಬರುತ್ತೆ ಎಂದ ಅವರು, ಜಿ.ಟಿ.ದೇವೇಗೌಡ್ರು ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶ್ರೀನಿವಾಸ್ ಕೂಡ ಸಿಡಿದೆದ್ದು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜೆಡಿಎಸ್ ವರಿಷ್ಠರು ಯಾರೇ ಹೋದ್ರೂ, ಬಂದ್ರೂ ತೆಲೆಕೆಡಿಸಿಕೊಳ್ಳಲ್ಲ ಎಂದರು.

Intro:ಡಿಕೆಶಿಗೆ ದರೋಡೆ ಮಾಡೋದಕ್ಕೆ ನಾವು ಹೇಳಿದ್ವಾ.. ಇದಕ್ಕೆಲ್ಲ ನಾನು ಹೊಣೆಯಾ. ಹೀಗಂತಾ ಮೈಸೂರಿನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೀಗೆಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರಂತೆ ಅಂತ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಡಿಕೆಶಿ ಪರ ಹೋರಾಟದ ಸಭೆಗೆ ಹೋಗಲಿಲ್ಲ ಎಂದು ದೂಷಣೆ ಮಾಡ್ತಿದ್ದಾರೆ. ಇಂತಹ ದರೋಡೆ ಮಾಡೋದಕ್ಕೆ ಹೇಳಿದ್ವ ನಾವು. ದರೋಡೆ ಮಾಡಿ ಸಾರ್ವಜನಿಕವಾಗಿ ಹಂಚುತ್ತಿದ್ದಾರಾ. ಇದಕ್ಕೆ ನಾನು ಹೊಣೆನಾ. ನಾನು ಸಭೆಗೆ ಯಾಕೆ ಹೋಗಬೇಕಿತ್ತು ಎಂದು ಸಭೆಯಲ್ಲಿ ಮಾತನಾಡಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.
ಇದರ ಬಗ್ಗೆ ಸತ್ಯ ನನಗೆ ಗೊತ್ತಿಲ್ಲ. ಸತ್ಯಗೊತ್ತಿಲ್ಲದೆ ನಾನು ಮಾತನಾಡೋದು ತಪ್ಪು. ಯಾರೋ ಹೇಳ್ತಿದ್ದಾರೆಂದು ಮಾತಿನಿಂದ ಜಾರಿಗೊಂಡರು.
ಎಚ್ಡಿಕೆ ಸಿಎಂ ಪಟ್ಟ ಉಳಿಸಲು ಎಲ್ಲರನ್ನೂ ಹೆದುರಾಕಿಕೊಂಡ್ರು. ಇವತ್ತು ಡಿಕೆಶಿ ಜೊತೆಯಲ್ಲಿ ಕುಮಾರಸ್ವಾಮಿ ನಿಲ್ಲಲಿಲ್ಲ. ಕುಮಾರಸ್ವಾಮಿ ಅವ್ರಿಗೆ ಇಂತ ಕಷ್ಟ ಬಂದಿದ್ರೆ ಡಿಕೆಶಿ ಸ್ಟೇಷನ್ ಹತ್ತಿರನಾ ಕೂರುತ್ತಿದ್ರು. ಆದ್ರೆ ಡಿಕೆಶಿಗೆ ಮಾನಸಿಕವಾಗಿ ಧೈರ್ಯತುಂಬ ಬಹುತಿತ್ತು. ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟಕ್ಕೂ ಸಪೋರ್ಟ್ ಮಾಡಲಿಲ್ಲ. ಅದನ್ನು ಬಿಟ್ಟು ಅಂದು ಚನ್ನಪಟ್ಟಣದಲ್ಲಿ ಕಾರ್ಯಕ್ರಮಕ ಹಾಕಿಕೊಂಡ್ರು. ಉದ್ದೇಶ ಪೂರ್ವಕವಾಗಿ ಚನ್ನಪಟ್ಟಣಕ್ಕೆ ಹೋಗಿದ್ರಾ ಎಂದು ಪ್ರಶ್ನೆ ಮಾಡಿದರು.
ಹೋರಾಟಕ್ಕೆ ಹೋಗುವ ಜನರನ್ನ ಅವೈಡ್ ಮಾಡೋದಕ್ಕೆ ಹೋಗಿದ್ರಾ. ಡಿ.ಕೆ.ಶಿವಕುಮಾರ್ ಮಾಡಬಾರದ ಕ್ರೈಮ್ ಮಾಡಿಲ್ಲ. ಬಿಜೆಪಿ ಹೊತೆ ಜೆಡಿಎಸ್ ಹೊಂದಾಣಿಕೆಗೆ ಮಾಡಿಕೊಳ್ಳಲು ಡಿಕೆಶಿ ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ರು. ಈ ಸಿಟ್ಟು ಡಿಕೆಶಿ ಬಿಜೆಪಿ ನಾಯಕರಿಗೆ ಇತ್ತು. ಹಿಂದೆ ದೇವೇಗೌಡ್ರು ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು. ಹೀಗೆ ಇಲ್ಲದೆಲ್ಲ ಚರ್ಚೆ ನಡೆಯುತ್ತಿದೆ. ಒಂದಲ್ಲೊಂದು ದಿನ ಸತ್ಯ ಹೊರಗಡೆ ಬರುತ್ತೆ ಎಂದು ಜಾಣ್ಮೆಯಿಂದಲೇ, ಪರೋಕ್ಷವಾಗಿ ಡಿಕೆಶಿ ಬಂಧನಕ್ಕೆ ದೇವೇಗೌಡ್ರ ಕುಟುಂಬ ಕಾರಣ ಎಂದರು.
ದೇವೇಗೌಡ್ರು ಹೇಳೋದೆಲ್ಲ ಸುಳ್ಳ, ಅವ್ರಿಂದ ಅನೇಕರಿಗೆ ನೋವಾಗಿದೆ. ಜನರಿಗೆ ಮನವರಿಕೆ ಆಗುವರೆಗೂ ಇದು ನಡೆಯುತ್ತಲೇ ಇರುತ್ತೆ. ಜನರಿಗೆ ಅರ್ಥವಾದಾಗ ಎಲ್ಲವೂ ಸರಿಹೋಗುತ್ತೆ. ಆ ದಿನ ಬೇಗ ಬರುತ್ತೆ. ಜಿ.ಟಿ.ದೇವೇಗೌಡ್ರು ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶ್ರೀನಿವಾಸ್ ಕೂಡ ಸಿಡಿದೆದ್ದು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜೆಡಿಎಸ್ ವರಿಷ್ಟರಿಗೆ ಯಾರೇ ಹೋದ್ರೂ, ಬಂದ್ರೂ ತೆಲೆಕೆಡಿಸಿಕೊಳ್ಳಲ್ಲ ಎಂದರು.
ಈ ಭಾಗದ ಜನ ತಮ್ಮನ್ನು ನಂಬುತ್ತಾರೆ, ಯಾವುದೇ ಸರ್ಕಾರಗಳಲ್ಲಿ ಕಿಂಗ್ ಮೇಕರ್ ಆಗುತ್ತೇವೆ ಅಂದುಕೊಂಡಿದ್ದಾರೆ. ಅಂತಿಮವಾಗಿ ಮತದಾರರೇ ತೀರ್ಮಾನ ಮಾಡಬೇಕು ಎಂದರು.
ಒಕ್ಕಲಿಗರನ್ನು ಬೆಳೆಯಲು ದೇವೇಗೌಡ ರು ಬಿಡಲ್ಲ ಎಂಬ ಮಾತಿಗೆ ಇಂದು ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಬಹಳಷ್ಟು ಒಕ್ಕಲಿಗರು ಪರಿಸ್ಥಿತಿ ಎದುರಿಸಿದ್ದಾರೆ. ಮಾಜಿ ಮಂತ್ರಿಯಾಗಿ ಸ್ವಲ್ಪ ಗುರುತಿಸಿಕೊಂಡ್ರೆ ಜೆಡಿಎಸ್ ನಲ್ಲಿ ಉಳಿದಿಲ್ಲ. ಜೆಡಿಎಸ್ ಅನ್ನು ಸಾರ್ವತ್ರಿಕ ಪಕ್ಷವಾಗಿ, ರಾಜಕೀಯ ಪಕ್ಷವಾಗಿ ಬೆಳೆಸಲಿಲ್ಲ. ಪಕ್ಷವನ್ನು ಕೇವಲ ಕುಟುಂಬದ ಹಿಡಿತಕ್ಕೆ ಸೀಮಿತಗೊಳಿಸಿದ್ರು. ಅದ್ರಿಂದ ಯಾರೂ ಬೆಳೆಯಲು ಸಾಧ್ಯವಾಗಲಿಲ್ಲ ಎಂದರು.Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.