ETV Bharat / state

ತರಬೇತಿ ನಿರತ ಕಾನ್​ಸ್ಟೇಬಲ್​ಗಳನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದಾರಂತೆ ಮಂಡ್ಯ ಎಸ್​ಪಿ? - ಮಂಡ್ಯ ಎಸ್​ಪಿ

ಮಂಡ್ಯ ಎಸ್​ಪಿ, ಅನುಮತಿ ಪಡೆಯದೇ ಮರಗಳನ್ನು ಕಟಾವು ಮಾಡಿಸಿದ್ದಲ್ಲದೆ, ತರಬೇತಿ ನಿರತ ಸಿಬ್ಬಂದಿಯಿಂದಲೂ ದುಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ
author img

By

Published : Sep 14, 2021, 10:46 AM IST

ಮಂಡ್ಯ: ಕಾನೂನು ಪಾಲಿಸುವವರಿಂದಲೇ ಕಾನೂನು ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ಯಾವುದೇ ಅನುಮತಿ ಪಡೆಯದೆ ಸರ್ಕಾರಿ ನಿವಾಸದ ಬಳಿಯಿದ್ದ 10 ಕ್ಕೂ ಹೆಚ್ಚು ಮರಗಳನ್ನು ಕಟಾವು ಮಾಡಿಸಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರ ಪ್ರತಿಕ್ರಿಯೆ

ಅಲ್ಲದೆ, ಎಸ್​ಪಿ ರಕ್ಷಣೆಗೆಂದು ನೇಮಿಸಿದ್ದ ತರಬೇತಿ ನಿರತ ಕಾನ್​ಸ್ಟೇಬಲ್​ಗಳನ್ನೂ ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದಾರೆ. ಮರ ಕಡಿದು ಸಾಗಿಸಲು ಪೊಲೀಸ್ ವಾಹನ, ತರಬೇತಿ ನಿರತ ಪೊಲೀಸರನ್ನು ಬಳಸಿಕೊಂಡಿದ್ದಾರೆ ಎಂಬ ದೂರು ಕೇಳಿ ಬಂದಿದೆ. ತಿಂಗಳ ಹಿಂದೆಯೂ 50 ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಣೆ ಮಾಡಿದ್ದರು ಎಂಬ ಆರೋಪವೂ ಇದೆ.

ಇದನ್ನೂ ಓದಿ: ಟ್ರಿನಿಟಿ ಹೋಟೆಲ್​ನಲ್ಲಿ ಅಗ್ನಿ ಅವಘಡ: ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಂಡ ಇಬ್ಬರು, 7 ಜನರ ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.