ಮಂಡ್ಯ: ಇಂದು ಜಿಲ್ಲೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದರು. ಈ ವೇಳೆ ರೈತ ಮಹಿಳೆಯರ ಜೊತೆ ನಾಟಿ ಮಾಡಿ ಗಮನ ಸೆಳೆದರು.
ಜಿಲ್ಲೆಗೆ ಆಗಮಿಸಿದ ಸಚಿವೆಗೆ ವಿವಿಧ ಕಲಾತಂಡಗಳು ಸೇರಿದಂತೆ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ಬಳಿಕ ತಾಲೂಕಿನ ಹೊನಗನಹಳ್ಳಿ ಗ್ರಾಮದ ಭತ್ತದ ಗದ್ದೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ರೈತರೊಂದಿಗೆ ಸಚಿವೆ ಭತ್ತದ ಗದ್ದೆಗೆ ವಿಶೇಷ ಪೂಜೆ ಸಲ್ಲಿಸಿ ಗದ್ದೆಗಿಳಿದು ಭತ್ತ ನಾಟಿ ಮಾಡಿದರು.
ನೆರೆ ಹೊರೆಯ ಗ್ರಾಮಗಳ ಸಾರ್ವಜನಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶೋಭಾ ಕರಂದ್ಲಾಜೆ ಭತ್ತ ನಾಟಿ ಮಾಡುವುದನ್ನು ವೀಕ್ಷಿಸಿದರು. ರೈತ ಮಹಿಳೆಯರ ಜೊತೆ ನಾಟಿ ಮಾಡಿ ಶೋಭಾ ಕರಂದ್ಲಾಜೆ ಸಂತಸಪಟ್ಟರು.
ಓದಿ: 'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ': ಕೋವಿಡ್ ನಿಯಂತ್ರಣಕ್ಕೆ ಬಿಬಿಎಂಪಿ ಹೊಸ ಯೋಜನೆ
ಇದೇ ವೇಳೆ, ಸಚಿವ ಕೆ.ಸಿ.ನಾರಾಯಣಗೌಡ ಕೂಡ ಭತ್ತ ನಾಟಿ ಮಾಡಿ ಜಿಲ್ಲೆಯ ಜನರ ಮನಗೆದ್ದರು.