ETV Bharat / state

ಕಾವೇರಿ ಒಡಲಲ್ಲಿ ಹೆಣ್ಣಿನ ವಶೀಕರಣ?.. ಅನೈತಿಕ ಚಟುವಟಿಕೆ ತಾಣವಾಗ್ತಿದೆ ರಾಷ್ಟ್ರಪಿತನ ಅಸ್ಥಿ ವಿಸರ್ಜನಾ ಸ್ಥಳ! - ಕಾವೇರಿ ಒಡಲಲ್ಲಿ ಹೆಣ್ಣಿನ ವಶೀಕರಣ

ಕಾವೇರಿ ಮಡಿಲಲ್ಲಿ ಸಂಪ್ರದಾಯದ ಹೆಸರಲ್ಲಿ ವಶೀಕರಣ, ವಾಮಾಚಾರದಂತಹ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಹಾಡಹಗಲೇ ನಿರ್ಭಯವಾಗಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಗಳಿಗೆ ಹದಿಹರೆಯದ ಯುವತಿಯರು ಬಲಿ ಪಶುಗಳಾಗುತ್ತಿದ್ದಾರೆ ಎಂದು ಹೇಳಲಾಗ್ತಿದೆ.

black-magic-and-illegal-activities-happening-in-shore-of-kaveri
ವಶೀಕರಣ
author img

By

Published : Oct 1, 2020, 4:47 PM IST

Updated : Oct 1, 2020, 5:05 PM IST

ಮಂಡ್ಯ: ದಕ್ಷಿಣ ಗಂಗೆ ಎಂದು ಪ್ರಸಿದ್ಧಿ ಪಡೆದಿರುವ ಕಾವೇರಿ ಮಡಿಲಲ್ಲಿ ಸಂಪ್ರದಾಯದ ಹೆಸರಲ್ಲಿ ವಶೀಕರಣ, ವಾಮಾಚಾರದಂತಹ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಹದಿಹರೆಯದ ಹೆಣ್ಣು ಮಕ್ಕಳೇ ಇದಕ್ಕೆ ಬಲಿಯಾಗುತ್ತಿದ್ದು, ಕಾವೇರಮ್ಮನ ತೀರ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಸ್ಥಿ ವಿಸರ್ಜನೆ ಮಾಡಿದ್ದ ಸ್ಥಳ ಸದ್ಯ ಮಾಟ, ಮಂತ್ರ ಹಾಗೂ ವಾಮಾಚಾರ ಚಟುವಟಿಕೆ ಮೂಲಕ ಅಪವಿತ್ರವಾಗುತ್ತಿದೆ. ಯುವತಿಯರನ್ನೇ ಟಾರ್ಗೆಟ್ ಮಾಡಿ ವಶೀಕರಣ ಮೂಲಕ ಕಾವೇರಿ ಪಾವಿತ್ರ್ಯತೆಗೆ ಧಕ್ಕೆ ತರಲಾಗುತ್ತಿದೆ. ಇದಕ್ಕೆ ಸಾಕ್ಷಿಗಳು ಸಾಕಷ್ಟು ಸಿಕ್ಕಿವೆ. ಕಾವೇರಿ ಒಡಲಲ್ಲಿ ಹೆಣ್ಣು ಮಕ್ಕಳನ್ನು ಕೂರಿಸಿಕೊಂಡು ನಿರ್ಭಯವಾಗಿ ವಶೀಕರಣದಂತಹ ಪೂಜೆ ಮಾಡಲಾಗುತ್ತಿದೆ. ಬೆಳಗಿನ ಸಮಯದಲ್ಲೇ ಬ್ಲಾಕ್ ಮ್ಯಾಜಿಕ್‌ನಂತಹ ಪೂಜೆಗಳು ನೆರವೇರುತ್ತಿವೆ ಎನ್ನಲಾಗ್ತಿದೆ.

ಅನೈತಿಕ ಚಟುವಟಿಕೆ ತಾಣವಾಯ್ತೆ ರಾಷ್ಟ್ರಪಿತ ಅಸ್ಥಿ ವಿಸರ್ಜನಾ ಸ್ಥಳ?

ಅಮಾವಾಸ್ಯೆ-ಹುಣ್ಣಿಮೆಯಲ್ಲಿ ಹೆಚ್ಚಿನ‌ ಸಂಖ್ಯೆಯಲ್ಲಿ ವಾಮಾಚಾರಗಳು ನಡೆಯುತ್ತಿವೆ. ಕೊಳ್ಳೇಗಾಲ, ಚಾಮರಾಜನಗರ, ಮೈಸೂರು ಸೇರಿದಂತೆ ಬೇರೆ ಬೇರೆ ಭಾಗದ ಮಾಂತ್ರಿಕರು ಈ ಪಶ್ಚಿಮವಾಹಿನಿಯಲ್ಲಿ ಹಾಡಹಗಲೇ ವಾಮಾಚಾರ ಶುರು ಮಾಡಿದ್ದಾರೆ. ಈ ಮೂಲಕ ಜನರಲ್ಲಿ ಭೀತಿ ಹುಟ್ಟು ಹಾಕಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಈ ಪವಿತ್ರ ಕಾವೇರಿ ತೀರದಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆಗಳಿಗೆ ಬ್ರೇಕ್​ ಹಾಕಬೇಕಿದೆ.

Last Updated : Oct 1, 2020, 5:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.