ETV Bharat / state

ಮಂಡ್ಯ: ಕೆಆರ್​ಎಸ್​ ಅಣೆಕಟ್ಟೆ ವೀಕ್ಷಿಸಿದ ಬಿಜೆಪಿ ನಿಯೋಗ

author img

By ETV Bharat Karnataka Team

Published : Sep 8, 2023, 10:48 PM IST

Updated : Sep 8, 2023, 11:01 PM IST

ಬಿಜೆಪಿ ಸೆಪ್ಟೆಂಬರ್ 12ರ ನಂತರ ಕಾವೇರಿ ಯಾತ್ರೆ ಮೂಲಕ ಜನ ಜಾಗೃತಿ ಹಮ್ಮಿಕೊಳ್ಳಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

bjp-delegation-visited-krs-dam-in-mandya
ಮಂಡ್ಯ: ಕೆಆರ್​ಎಸ್​ ಅಣೆಕಟ್ಟೆ ವೀಕ್ಷಿಸಿದ ಬಿಜೆಪಿ ನಿಯೋಗ

ಕೆಆರ್​ಎಸ್​ ಅಣೆಕಟ್ಟೆ ವೀಕ್ಷಿಸಿದ ಬಿಜೆಪಿ ನಿಯೋಗ

ಮಂಡ್ಯ: ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರನ್ನು ಹರಿಸುತ್ತಿರುವ ಕುರಿತು ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಕೆಆರ್‌ಎಸ್‌ ಅಣೆಕಟ್ಟೆಗೆ ಬಿಜೆಪಿ ಮುಖಂಡರ ನಿಯೋಗ ಶುಕ್ರವಾರ ಭೇಟಿ ನೀಡಿ ಜಲಾಶಯ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೆಆರ್​ಎಸ್ ವೀಕ್ಷಣೆಗೆ ಆಗಮಿಸಿದ ಮಾಜಿ ಸಿಎಂ ನೇತೃತ್ವದ ಬಿಜೆಪಿ ನಿಯೋಗಕ್ಕೆ ಆರಂಭದಲ್ಲೇ ಪೊಲೀಸರು ಅಡ್ಡಿಪಡಿಸಿದರು. ಮುಖ್ಯ ದ್ವಾರದ ಬಳಿಯೇ ಬ್ಯಾರಿಕೇಡ್​ಗಳನ್ನ ಹಾಕಿ ತಡೆಯೊಡ್ಡಿದ ಪೊಲೀಸರು ಪೂರ್ವಾನುಮತಿ ಇರುವ ಕೆಲವರಿಗಷ್ಟೇ ಡ್ಯಾಂ ವೀಕ್ಷಣೆಗೆ ಅವಕಾಶ ಎಂದು ಹೇಳಿದರು.

ಈ ವೇಳೆ ಮಾದ್ಯಮಗಳನ್ನು ನಮ್ಮ ಜೊತೆ ಬಿಡುವಂತೆ ಕೇಳಿದಾಗ ಪೊಲೀಸರು ಮತ್ತು ಅಧಿಕಾರಿಗಳು ನಿರಾಕರಿಸಿದರು. ಇದೇ ಸಂದರ್ಭ ಪೊಲೀಸರು ಮತ್ತು ಬಿಜೆಪಿ ಕಾರ್ತಕರ್ತರ ನಡುವೆ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆಯಿತು. ಬಳಿಕ ನಿಯೋಗದಲ್ಲಿದ್ದ ಪ್ರಮುಖರಿಗಷ್ಟೇ ಡ್ಯಾಂ ವೀಕ್ಷಣೆಗೆ ಅನುಮತಿ ನೀಡಿದರು. ಡ್ಯಾಂ ಮುಖ್ಯದ್ವಾರದ ಎಡ ಭಾಗದಲ್ಲಿ ಡ್ಯಾ ಪರಿಸ್ಥಿತಿ ವೀಕ್ಷಿಸಿದ ನಿಯೋಗ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ತಮಿಳುನಾಡು 1.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲು ಅನುಮತಿ ಪಡೆದು, ಕಾನೂನು ಬಾಹಿರವಾಗಿ ಸುಪ್ರೀಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಉಲ್ಲಂಘಿಸಿ ಅಕ್ರಮವಾಗಿ 4 ಲಕ್ಷ ಹೆಕ್ಟೇರ್ ಬೆಳೆಗೆ ನೀರು ಬಳಕೆ ಮಾಡಿಕೊಳ್ಳುತ್ತಿದೆ. ಈ ಎಲ್ಲದರ ಬಗ್ಗೆ ಸಮರ್ಥವಾಗಿ ವಾದ ಮಂಡಿಸಬೇಕಾದ ರಾಜ್ಯ ಸರ್ಕಾರದ ವೈಪಲ್ಯವೇ ಇಂದಿನ ಸಂಕಷ್ಟಕ್ಕೆ ಕಾರಣ. ಹೀಗಾಗಿ ಬಿಜೆಪಿ ಸೆಪ್ಟೆಂಬರ್ 12ರ ನಂತರ ಕಾವೇರಿ ಯಾತ್ರೆ ಮೂಲಕ ಜನ ಜಾಗೃತಿ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ನಿಯೋಗದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಅಶ್ವತ್ಥನಾರಾಯಣ, ಕೆ. ಗೋಪಾಲಯ್ಯ, ಸಂಸದರಾದ ಪ್ರತಾಪ್​ ಸಿಂಹ, ಸುಮಲತಾ ಅಂಬರೀಷ್, ಶಾಸಕ ಶ್ರೀವತ್ಸ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಇದ್ದರು.

ಇದನ್ನೂ ಓದಿ: ಕಾಂಗ್ರೆಸ್​ ಅಧಿಕಾರ ಕಳೆದುಕೊಂಡು ಮನೆಗೆ‌ ಹೋಗುವವರೆಗೂ ಹೋರಾಟ: ಬಿ ಎಸ್ ಯಡಿಯೂರಪ್ಪ

ರೈತರು ಮತ್ತು ಕರ್ನಾಟಕದ ಪರ ಸದಾಕಾಲ ಬಿಜೆಪಿ ನಾಯಕರು ನಿಲ್ಲಲಿದ್ದಾರೆ: ಮತ್ತೊಂದೆಡೆ, ತಮಿಳುನಾಡಿಗೆ ಹರಿಯುತ್ತಿದ್ದ ನೀರನ್ನು ಸದ್ಯಕ್ಕೆ ನಿಲ್ಲಿಸಿರುವ ರಾಜ್ಯ ಸರ್ಕಾರ ನೀರು ಬಿಡುವುದಿಲ್ಲ ಎಂಬ ನಿಲುವಿಗೆ ಬದ್ಧರಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಸರ್​ ಎಂ ವಿ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಸೆ.12 ರಿಂದ ನೀರು ಹರಿಸಲು ಸಾಧ್ಯ ಇಲ್ಲ ಎಂದು ಪ್ರಾಧಿಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದು, ಆ ನಿಲುವಿಗೆ ಸರ್ಕಾರ ಸಂಪೂರ್ಣ ಬದ್ಧ ವಾಗಿರಬೇಕು. ಕಾವೇರಿ ವಿಚಾರವಾಗಿ ಸಂಸತ್ತಿನಲ್ಲಿ ದನಿ ಎತ್ತುವಂತೆ ಬಿಜೆಪಿ ಸಂಸದರಿಗೆ ಸೂಚಿಸಲಾಗಿದೆ. ಅವರು ರಾಜ್ಯದ ರೈತರ ಹಿತ ಕಾಪಾಡಲು ಮುಂದಾಗಲಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ನಿರಂತರ ಹೋರಾಟ ನಡೆಸಲು ಬಿಜೆಪಿ ಸಿದ್ಧವಿದೆ. ಕಾವೇರಿ ಅನ್ಯಾಯದ ವಿರುದ್ಧ ಹೋರಾಟ ಮಾಡಿ ಮುನ್ನಡೆಯುತ್ತಿರುವ ರೈತ ಹಿತ ರಕ್ಷಣಾ ಸಮಿತಿ ಚಳವಳಿಗೆ ಹಳೆ ಜೀವಂತಿಕೆ ತಂದು ಕೊಡಲಿ, ರೈತರು ಮತ್ತು ಕರ್ನಾಟಕದ ಪರ ಸದಾಕಾಲ ಬಿಜೆಪಿ ನಾಯಕರು ನಿಲ್ಲಲಿದ್ದಾರೆ ಎಂದರು.

Last Updated : Sep 8, 2023, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.