ಮಂಡ್ಯ : ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಫೆ-02ರಂದು ಮಹಿಳೆಯೊಬ್ಬಳ ಕೊಲೆಯಾಗಿತ್ತು. ಮಹಿಳೆ ಮೇಲೆ ಅತ್ಯಾಚಾರ ಎಸಗಿ ಮಂಚಕ್ಕೆ ಕೈ ಕಾಲು ಕಟ್ಟಿ ಹಾಕಿ ಉಸಿರು ಕಟ್ಟಿಸಿ ಬರ್ಬರವಾಗಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ರು. ಆ ದಿನ ನಡೆದ ಈ ಘಟನೆಗೆ ಇಡೀ ಮದ್ದೂರು ಪಟ್ಟಣದ ಜನ ಬೆಚ್ಚಿ ಬಿದ್ದಿದ್ರು.
ಕೊಲೆ ಮಾಡಿದ ಆರೋಪಿಗಳು ಯಾವುದೇ ಸುಳಿವು ಕೂಡ ಬಿಡದೆ ಕೊಲೆಗೈದು ಪರಾರಿಯಾಗಿದ್ರು. ಪ್ರಕರಣ ದಾಖಲಿಸಿಕೊಂಡಿದ್ದ ಮದ್ದೂರು ಪೊಲೀಸರು ಕಡೆಗೂ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತ್ಯ ಎಸಗಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೆಚ್ಚಿನ ಓದಿಗೆ: ಮಹಿಳೆಯ ಕೈಕಾಲು ಕಟ್ಟಿ ಅತ್ಯಾಚಾರ, ಕೊಲೆ... ಮದ್ದೂರಿನಲ್ಲಿ ಆತಂಕ!
ಮದ್ದೂರು ಪಟ್ಟಣದಲ್ಲಿ ಫೆ-2ರ ರಾತ್ರಿ ಈ ದುರಂತ ನಡೆದಿತ್ತು. ಪ್ರಕರಣದಿಂದ ಇಡೀ ಮದ್ದೂರಿನ ಜನ ಬೆಚ್ಚಿದ್ರು. ಯಾಕೆಂದರೆ, ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೈ-ಕಾಲು ಕಟ್ಟಿಹಾಕಿ ಹತ್ಯೆ ಮಾಡಿದ್ದು ಎಲ್ಲರಲ್ಲೂ ಭಯದ ವಾತಾವರಣ ನಿರ್ಮಾಣ ಮಾಡಿತ್ತು.
ಆರೋಪಿಗಳು ಹತ್ಯೆಗೈದ ನಂತರ ಮಹಿಳೆಯ ಕತ್ತು ಹಾಗೂ ಕೈನಲ್ಲಿದ್ದ ಚಿನ್ನದ ಆಭರಣದ ಜೊತೆ ಮನೆಯಲ್ಲಿದ್ದ ನಗದನ್ನ ಕೂಡ ಕದ್ದು ಪರಾರಿಯಾಗಿದ್ರು.
ಆ ದಿನ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ ಪೊಲೀಸರು, ಶ್ವಾನದಳ ಮತ್ತು FSL ತಜ್ಞರಿಂದ ಶೋಧ ನಡೆಸಿ ಸಿಕ್ಕ ಕೆಲ ಮಾಹಿತಿಗಳಿಂದ ಕೃತ್ಯ ಎಸಗಿದ ಆರೋಪಿಗಳ ಪತ್ತೆಗಾಗಿ 3 ತಂಡ ರಚಿಸಿದ್ದರು. ಈಗ ಕೊನೆಗೂ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಬ್ಬರು ಆರೋಪಿಗಳು ರಾಮನಗರ ಜಿಲ್ಲೆಯವರಾಗಿದ್ದಾರೆ. ಮನು ಕುಮಾರ್ ಮತ್ತು ರಮೇಶ್ ಎಂಬ ಇಬ್ಬರು ಯುವಕರು ಈ ಕೃತ್ಯ ಎಸಗಿ ತಲೆ ಮರೆಸಿಕೊಂಡಿದ್ರು.
ಕೊಲೆಯಾದ ಮಹಿಳೆಯ ಮೊಬೈಲ್ ಕರೆಗಳ ಆಧಾರದ ಮೇಲೆ ರಾಮನಗರದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮದ್ದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಪೊಲೀಸರ ಮುಂದೆ ಆರೋಪಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾರೆ. ಕೊಲೆಯಾದ ಮಹಿಳೆ ದೈಹಿಕ ಸುಖಕ್ಕೆ ನಮ್ಮ ಬಳಿ ಹೆಚ್ಚಿನ ಹಣ ಕೇಳಿದ್ದ ಕಾರಣಕ್ಕೆ ದೈಹಿಕ ಸಂಭೋಗದ ಬಳಿಕ ಕೈ-ಕಾಲು ಕಟ್ಟಿ ಹಾಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.
ಕೈ ಮತ್ತು ಕತ್ತಿನಲ್ಲಿದ್ದ ಸರ ಹಾಗೂ ಬಳೆ ಸೇರಿ ಮನೆಯಲ್ಲಿದ್ದ ಸ್ವಲ್ಪ ನಗದು ಹಣ ತೆಗೆದುಕೊಂಡು ಹೋಗಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಸತ್ಯ ಒಪ್ಪಿಕೊಂಡಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿ 2 ಮೊಬೈಲ್ ಹಾಗೂ ಬಳಿ ಇದ್ದ 4 ಸಾವಿರ ನಗದನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ. ಶೀಘ್ರವಾಗಿ ಪ್ರಕರಣ ಭೇಧಿಸಿ ಆರೋಪಿಗಳನ್ನ ಬಂಧಿಸಿರೋ ಮದ್ದೂರು ಪೊಲೀಸರ ಕಾರ್ಯಾಚರಣೆನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಶ್ಲಾಘಿಸಿದ್ದು, ನಗದು ಬಹುಮಾನವನ್ನು ಕೂಡ ಘೋಷಿಸಿದ್ದಾರೆ.