ETV Bharat / state

ಮಂಡ್ಯದಲ್ಲಿ ಮತ್ತೆ ಮುಂದುವರೆದ ದೇವಾಲಯಗಳ ಹುಂಡಿ ಕಳ್ಳತನ - mandya temple money stolen

ಕಳೆದ ವಾರವಷ್ಟೇ ಮಂಡ್ಯದಲ್ಲಿ ಅರ್ಚಕರನ್ನು ಕೊಂದು ದೇಗುಲ ಕಳ್ಳತನ ಮಾಡಲಾಗಿತ್ತು. ಇದೀಗ ಮತ್ತೆ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇಗುಲದ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.

anjaneya temple money stolen in mandya
ಮಂಡ್ಯದಲ್ಲಿ ಮತ್ತೆ ಮುಂದುವರೆದ ದೇವಾಲಗಳ ಹುಂಡಿ ಕಳ್ಳತನ
author img

By

Published : Sep 18, 2020, 12:45 PM IST

ಮಂಡ್ಯ: ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ತಡರಾತ್ರಿ ಆಂಜನೇಯ ಸ್ವಾಮಿ ದೇಗುಲದ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.

ದೇಗುಲದ ಗ್ರಿಲ್ ಬಾಗಿಲು ಮುರಿದಿರುವ ದುಷ್ಕರ್ಮಿಗಳು ಹುಂಡಿ ಹೊತ್ತೊಯ್ದಿದಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚಿನ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ.

ಮಂಡ್ಯದಲ್ಲಿ ಮತ್ತೆ ಮುಂದುವರೆದ ದೇವಾಲಯಗಳ ಹುಂಡಿ ಕಳ್ಳತನ

ದುಷ್ಕರ್ಮಿಗಳ ದರೋಡೆ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾಲ್ಕೈದು ಜನರ ತಂಡದಿಂದ ಕೃತ್ಯ ನಡೆದಿದೆ. ಕಳೆದ ವಾರವಷ್ಟೇ ಮಂಡ್ಯದಲ್ಲಿ ಅರ್ಚಕರನ್ನು ಕೊಂದು ದೇಗುಲ ಕಳ್ಳತನ ಮಾಡಲಾಗಿತ್ತು. ಹೀಗಾಗಿ ದರೋಡೆಕೋರರ ತಂಡ ಜಿಲ್ಲೆಯಲ್ಲಿ ಬೀಡು ಬಿಟ್ಟಿರೋ ಶಂಕೆ ವ್ಯಕ್ತವಾಗಿದೆ.

ಘಟನೆ ನಂತರ ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ಕುರಿತು ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.