ETV Bharat / state

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯನ್ನೂ ಪರಿಶೀಲಿಸಲು ಹಿಂದೂ ಸಂಘಟನೆ ಒತ್ತಾಯ - Gyanvapi row

ಒಂದೆಡೆ ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ಸರ್ವೇ ಕಾರ್ಯ ಸದ್ದು ಮಾಡಿದ್ದರೆ, ಇತ್ತ ರಾಜ್ಯದ ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿಯಲ್ಲಿ ಹಿಂದೂ ದೇವಾಲಯದ ಕುರುಹುಗಳಿವೆ ಎಂಬ ವಾದ ಮುನ್ನೆಲೆಗೆ ಬಂದಿದೆ.

Srirangapatna Jamia Masjid
ಶ್ರೀರಂಗಪಟ್ಟಣ ಜಾಮಿಯಾ ಮಸೀದಿ
author img

By

Published : May 16, 2022, 10:37 PM IST

ಮಂಡ್ಯ.. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ರೀತಿ ಶ್ರೀರಂಗಪಟ್ಟಣ ಜಾಮಿಯಾ ಮಸೀದಿಯ ಸರ್ವೇ ಮತ್ತು ಪರಿಶೀಲನೆ ನಡೆಸಬೇಕು. ಹಿಂದೂ ದೇವಾಲಯದ ಕುರುಹುಗಳಿರುವ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂದು ನರೇಂದ್ರ ವಿಚಾರ ಮಂಚ್ ಪದಾಧಿಕಾರಿಗಳು ಮಂಡ್ಯ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿದಿದ್ರೆ ಜ್ಞಾನವಾಪಿ ಪ್ರಕರಣ ರೀತಿ ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ ನೀಡಿದ್ದಾರೆ.

ಮಸೀದಿಯಲ್ಲ ದೇವಾಲಯ: ಜಿಲ್ಲಾಧಿಕಾರಿ ಎಸ್ ಅಶ್ವಥಿ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು, ಮಸೀದಿ ಕುರಿತು ಒಂದಷ್ಟು ಅಂಶಗಳನ್ನ ಉಲ್ಲೇಖಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟದ ಜಾಮಿಯಾ ಮಸೀದಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಮೇಲೆ ನಿರ್ಮಾಣವಾಗಿದೆ ಆರೋಪಿಸಿದ್ದಾರೆ. ಟಿಪ್ಪು ಸುಲ್ತಾನ್ ಆಡಳಿತ ಅವಧಿಯಲ್ಲಿ ದೇವಾಲಯ ಕೆಡವಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾರೆ. ದೇವಾಲಯದ ಕುರುಹುಗಳು ಅಲ್ಲಿ ಈಗಲೂ ಇವೆ. ಕೊಳ, ದೇವರ ಕೆತ್ತನೆಗಳು ಕಣ್ಣಿಗೆ ಕಾಣಿಸುತ್ತವೆ. ಹೀಗಾಗಿ ಮಸೀದಿಯನ್ನು ತೆರವುಗೊಳಿಸಿ ಮತ್ತೆ ಮೂಡಲಬಾಗಿಲು ಆಂಜನೇಯ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು ಒತ್ತಾಯಿಸಿದ್ದಾರೆ.

Srirangapatna Jamia Masjid
ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಪರಿಶೀಲನೆಗೆ ಒತ್ತಾಯ

ಇತಿಹಾಸದಲ್ಲೂ ದೇವಾಲಯವಿದ್ದ ಬಗ್ಗೆ ಉಲ್ಲೇಖ?: 1784ರಲ್ಲಿ ಟಿಪ್ಪು ಸುಲ್ತಾನ್ ಅವಧಿಯಲ್ಲಿ ಜಾಮಿಯಾ ಮಸೀದಿ ನಿರ್ಮಾಣವಾಗಿದೆ. ಆದರೆ ಅದಕ್ಕೂ ಮೊದಲು ಆ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನವಿತ್ತು ಎಂಬ ವಾದವಿದೆ. ಜಾಮಿಯಾ ಮಸೀದಿಯ ಒಳ ಭಾಗದಲ್ಲಿ ಹಿಂದೂ ದೇವಸ್ಥಾನಗಳಲ್ಲಿರುವ ರೀತಿ ಕಲ್ಯಾಣಿ, ಬಾವಿಗಳು ಇವೆ. ಮಸೀದಿಯ ಮಿನಾರ್‌‌ಗಳ ಮೇಲೆ ಕಳಸಗಳನ್ನ ಇಡಲಾಗಿದೆ. ಸುತ್ತಲೂ ಇರುವ ಕಂಬಗಳ ಮೇಲೆ ಹಿಂದೂ ದೇವರುಗಳ ಕೆತ್ತನೆಗಳಿವೆ. ಮುಂದುವರೆದಂತೆ ಲೂಯಿಸ್ ರೈಸ್ ಬರೆದಿರುವ ಮೈಸೂರು ಗೆಜೆಟ್‍ನಲ್ಲಿ, ಟಿಪ್ಪು ಸುಲ್ತಾನ್ ಪರ್ಷಿಯಾದ ಖಲೀಫನಿಗೆ ಬರೆದಿರುವ ಪತ್ರಗಳಲ್ಲೂ ಹಿಂದೂ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಬರೆಯಲಾಗಿದೆಯಂತೆ. ಹಾಗಾಗಿ ಮಸೀದಿ ವಾಪಸ್ ಪಡೆಯಬೇಕು, ಅಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ಆರಾಧನೆಗೆ ಅವಕಾಶ ನೀಡಬೇಕು ಎಂದು ನರೇಂದ್ರ ಮೋದಿ ವಿಚಾರ ಮಂಚ್‍ನ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ..ಜ್ಞಾನವಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆ.. ಶಿವನ ಅನುಯಾಯಿಗಳಿಗೆ ಸಂತೋಷದ ಸುದ್ದಿ ಎಂದ ಯುಪಿ ಡಿಸಿಎಂ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.