ಮಂಡ್ಯ:ಜಿಲ್ಲೆಯಲ್ಲಿ ರಾಜಕೀಯ ಕೆಸರೆರಚಾಟದ ಮಧ್ಯೆ ಜಾತಿ ರಾಜಕಾರಣ ಸಹ ನಡೆಯುತ್ತಿದೆ. ಮತ್ತೊಮ್ಮೆ ಸುಮಲತಾ ಅವರ ಜಾತಿ ಕೆದಕಿ ದಳಪತಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.
ನಿನ್ನೆಯಷ್ಟೇ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸಂಸದ ಶಿವರಾಮೇಗೌಡ, ಸುಮಲತಾ ಜಾತಿ ವಿಚಾರ ಎತ್ತಿದ್ದರು. ಇಂದು ಮತ್ತೆ ಜೆಡಿಎಸ್ ಸಭೆಯಲ್ಲಿ ಮಾತನಾಡುತ್ತಾ, ಗೌಡ್ತಿ ಗೌಡ್ತಿ ಅಂದ್ರೆ, ಯಾವ್ ತರ ಗೌಡ್ತಿ ಹೇಳಬೇಕಲ್ಲ. ಜಾತಿ ಬಿಟ್ಟು ಬೇರೆ ಜಾತಿಯವರನ್ನ ಮದುವೆ ಆದ ಮೇಲೆ ಹೇಗೆ ಗೌಡ್ತಿ ಆಗ್ತಾರೆ ಎಂದು ಸುಮಲತಾಗೆ ಪ್ರಶ್ನಿಸಿದ್ದಾರೆ.
ಅಂಬರೀಶ್ ನಮ್ಮ ಗೌಡ್ರು ಓಕೆ, ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ನಮ್ಮ ಸಿಎಂ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ರೂ ಇಲ್ಲಸಲ್ಲದ ಆರೋಪ ಮಾಡ್ತಿದ್ರೆ ಕೈಕಟ್ಟಿ ಕೂರೋಕೆ ಆಗುತ್ತಾ.ಇವರೆಲ್ಲಾ ಬೆಂಗಳೂರು ಸುತ್ತಮುತ್ತ ಆವರಿಸಿದ್ದಾರೆ. ಮಂಡ್ಯವನ್ನೂ ನಾಯ್ಡುಮಯ ಮಾಡಲು ಹೊರಟಿದ್ದಾರೆ ಎಂದು ಸಂಸದ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ.
ದರ್ಶನ್ಗೆ ಟಾಂಗ್:
ಇದೇ ವೇಳೆ ಸುಮಲತಾ ಪರ ನಿಂತಿರುವ ದರ್ಶನ್ಗೆ ಟಾಂಗ್ ನೀಡಿರುವ ಶಿವರಾಮೇಗೌಡ, ನಟರು ಸಿನಿಮಾಗೆ ಮಾತ್ರ ಸೀಮಿತವಾಗಿರಬೇಕು. ಅದನ್ನ ಬಿಟ್ಟು ಇಡೀ ಒಕ್ಕಲಿಗ ಸಮುದಾಯದ ವಿರುದ್ಧ, ಒಂದು ಪಕ್ಷದ ವಿರುದ್ಧ, ರೈತ ಸಮುದಾಯದ ವಿರುದ್ಧ ತೊಡೆ ತಟ್ಟಿ ನಿಂತಿರುವ ನಿಮ್ಮನ್ನ ನೋಡ್ತಾ ಸುಮ್ಮನೆ ಕೂರೋಕೆ ಆಗಲ್ಲವೆಂದು ಗುಡುಗಿದರು.