ETV Bharat / state

ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆಯಲ್ಲಿ ಭಾಗಿಯಾದ್ರೆ ಕಠಿಣ ಕ್ರಮ: ಸಚಿವ ಚಲುವರಾಯಸ್ವಾಮಿ

ಮಳೆ ಕೊರತೆ, ಕೆಆರ್‌ಎಸ್‌ ಡ್ಯಾಂನಲ್ಲಿ ತಗ್ಗಿದ ನೀರು ಸಂಗ್ರಹ, ಪಡಿತರ ಮಾರಾಟ ದಂಧೆಯ ಕುರಿತು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿದರು.

Minister N Cheluvarayaswamy spoke to reporters.
ಸಚಿವ ಎನ್ ಚಲುವರಾಯಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By

Published : Jun 14, 2023, 7:27 PM IST

Updated : Jun 14, 2023, 7:48 PM IST

ಸಚಿವ ಎನ್ ಚಲುವರಾಯಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಇಂದು ನೂತನವಾಗಿ ನವೀಕೃತಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನಿಂದ ಕಚೇರಿ ಸಾರ್ವಜನಿಕರ ಸೇವೆಗಾಗಿ ಸಿದ್ಧಗೊಂಡಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಯಾರೇ ಬಂದರೂ ನಮ್ಮ ಆಪ್ತ ಸಹಾಯಕರು ಅವರ ಸಮಸ್ಯೆಗೆ ಸ್ಪಂದಿಸಲಿದ್ದಾರೆ. ನಾನೂ ಕೂಡ ಮಂಡ್ಯಕ್ಕೆ ಬಂದಾಗ ಕಚೇರಿಯಲ್ಲೇ ಲಭ್ಯವಿರುತ್ತೇನೆ ಎಂದು ಹೇಳಿದರು. ಇದೇ ವೇಳೆ ಪಡಿತರ ಅಕ್ಕಿ ದಂಧೆಕೋರರಿಗೂ ಎಚ್ಚರಿಕೆ ಸಂದೇಶ ರವಾನಿಸಿದರು.

ಕಚೇರಿ ಕುರಿತು ಮಾತನಾಡುತ್ತಾ, ಜನರ ಸೇವೆಗೆ ಕಚೇರಿ ಸದಾ ತೆರೆದಿರುತ್ತದೆ. ಯಾರೇ ಸಾರ್ವಜನಿಕರು ಬಂದು ಸಮಸ್ಯೆ ಹೇಳಿಕೊಂಡ್ರೂ ಪರಿಹಾರ ಹುಡುಕುವ ಕೆಲಸ ಮಾಡ್ತೇವೆ. ನಾನು ಮಂಡ್ಯಕ್ಕೆ ಬಂದಾಗ ಈ ಕಚೇರಿಗೆ ಬಂದು ಹೋಗ್ತೇನೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಿರಂತರ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕೆಆರ್‌ಎಸ್‌ ಡ್ಯಾಂನಿಂದ ನೀರು ಹರಿಸುವ ವಿಚಾರ: ಪ್ರಸ್ತುತ ಕೆಆರ್‌ಎಸ್‌ ಡ್ಯಾಂನಲ್ಲಿ ನೀರು ಬಹಳ ಕಡಿಮೆ ಇದೆ. ಅನಿರ್ವಾಯವಾಗಿ ಡ್ಯಾಂನಿಂದ ನಾಲೆಗೆ ನೀರು ಬಿಡುವ ಪ್ರಸಂಗ ಎದುರಾಯಿತು. ಹೀಗಾಗಿ ನಾಲೆಗೆ ನೀರು ಬಿಟ್ಟಿದ್ದೇವೆ. ಡ್ಯಾಂದಲ್ಲಿ ಸಂಗ್ರಹ ಆಗಿರುವ ಮೂರ್ನಾಲ್ಕು ಟಿಎಂಸಿ ಮಾತ್ರ ಬಳಸಿಕೊಳ್ಳಬಹುದು. ಎರಡು ಮೂರು ದಿವಸದಲ್ಲಿ ದೇವರು ಕರುಣೆ ತೋರಿಸಿದ್ರೆ ನಾವು ನೀವೆಲ್ಲ ನೆಮ್ಮದಿಯಾಗಿ ಇರಬಹುದು ಎಂದು ಸಲಹೆ ಕೊಟ್ಟರು.

ಪಡಿತರ ಅಕ್ಕಿ ಅಕ್ರಮ ಮಾರಾಟಕ್ಕೆ ಕಡಿವಾಣ: ಮಂಡ್ಯದಲ್ಲಿ ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಮುಲಾಜಿಲ್ಲದೆ ಅದಕ್ಕೆಲ್ಲ ಕಡಿವಾಣ ಹಾಕ್ತೇವೆ. ಘಟನೆ ನಡೆಯದಂತೆ ಡಿಸಿ, ಎಸ್ಪಿಗೆ ಸೂಚನೆ ಕೊಡ್ತೇನೆ. ಅಧಿಕಾರಿಗಳು ಆ ಅಕ್ರಮದಲ್ಲಿ ಭಾಗಿಯಾಗಿದ್ದರೆ ಅವರ ಮೇಲಾಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.

'ಸುರ್ಜೇವಾಲಾ ಶಾಸಕರ ಸಭೆಯಲ್ಲಿ ಭಾಗವಹಿಸುವುದು ತಪ್ಪಲ್ಲ': ಕಾಂಗ್ರೆಸ್-ಬಿಜೆಪಿ ನಾಯಕರ ಅಡ್ಜೆಸ್ಟ್‌ಮೆಂಟ್ ರಾಜಕಾರಣದ ಬಗ್ಗೆ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿ, ಅಧಿಕೃತ ಮೀಟಿಂಗ್‌ನಲ್ಲಿ ಭಾಗಿಯಾಗೋದು ಸರಿಯಲ್ಲ. ಆದ್ರೆ ಖಾಸಗಿ ಮೀಟಿಂಗ್ ಸಮಯದಲ್ಲಿ ನಮ್ಮ ಪಕ್ಷದ ಲೀಡರ್ ಇದ್ದರೆ ಅದು ಅಪರಾಧ ಅಲ್ಲ. ಸುರ್ಜೇವಾಲ ಮಾಜಿ ಸಂಸದರು ಹಾಗೂ ಹಾಲಿ ರಾಜ್ಯಸಭಾ ಸದಸ್ಯ. ಶಾಸಕರ ಸಭೆಯಲ್ಲಿ ಕುಳಿತುಕೊಳ್ಳೋದು ಅಪರಾಧವಲ್ಲ ಎಂದರು.

ಜಮೀರ್ ಖಾನ್ ಪೋಸ್ಟ್ ಡಿಲೀಟ್ ವಿಚಾರ: ಜಮೀರ್ ಯಾಕೆ ಪೋಸ್ಟ್ ಡಿಲೀಟ್ ಮಾಡಿದ್ರೋ ಗೊತ್ತಿಲ್ಲ. ಎಲ್ಲ ಮಂತ್ರಿಗಳ ವಿಚಾರಕ್ಕೂ ನಾನೇ ಉತ್ತರ ಕೊಡೋಕೆ ಆಗುತ್ತಾ? ಜಮೀರ್ ನನ್ನ ಸ್ನೇಹಿತರಾದ್ರೂ ಅವರಿಗೆ ಅವರದೇ ಆದ ಜವಾಬ್ದಾರಿ ಇದೆ. ಅವರೇ ಉತ್ತರ ಕೊಡ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ : Congress Guarantee Scheme: ಅನ್ನಭಾಗ್ಯ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ

Last Updated : Jun 14, 2023, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.