ETV Bharat / state

ನಾಪತ್ತೆಯಾಗಿದ್ದ ತಾಯಿ - ಮಗಳು ಶವವಾಗಿ ಪತ್ತೆ - ತಾಯಿ-ಮಗಳ ಶವ ಪತ್ತೆ ನ್ಯೂಸ್​

ನಾಗಮಂಗಲ ತಾಲೂಕಿನ ಗಂಗವಾಡಿ ಸಮೀಪದ ನಾಲೆಯಲ್ಲಿ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ, ಮಗಳಿಬ್ಬರ ಮೃತ ದೇಹಗಳು ಪತ್ತೆಯಾಗಿವೆ.

ತಾಯಿ-ಮಗಳ ಶವ ಪತ್ತೆ
ತಾಯಿ-ಮಗಳ ಶವ ಪತ್ತೆ
author img

By

Published : Dec 16, 2020, 5:44 PM IST

Updated : Dec 16, 2020, 7:06 PM IST

ಮಂಡ್ಯ: ನಾಪತ್ತೆಯಾಗಿದ್ದ ತಾಯಿ, ಮಗಳು ನಾಲೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದಲ್ಲಿ ನಡೆದಿದೆ.

ಅಮೃತಿ ಗ್ರಾಮದ ಸಲಿಮಾ (36) ಮತ್ತು ಸಬಾನ (17) ಮೃತ ತಾಯಿ - ಮಗಳು. ಕೌಟುಂಬಿಕ ಕಲಹಕ್ಕೆ ಮನನೊಂದು ನಾಲೆಗೆ ಹಾರಿರಬಹುದು ಎಂದು ಶಂಕಿಸಲಾಗಿದೆ. ಮೃತಳ ಪತಿ ಖಾದರ್, ಕಾಣೆಯಾದ ಬಗ್ಗೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಡಿ.14 ರಂದು ದೂರು ನೀಡಿದ್ದರು.

ಚಾಮರಾಜನಗರ - ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ನ್ಯಾಮನಹಳ್ಳಿ ಸಮೀಪದ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ನಾಗಮಂಗಲ ತಾಲೂಕಿನ ಗಂಗವಾಡಿ ಸಮೀಪದ ನಾಲೆಯಲ್ಲಿ ಮೃತ ದೇಹಗಳು ಪತ್ತೆಯಾಗಿವೆ.

ಸ್ಥಳಕ್ಕೆ ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

Last Updated : Dec 16, 2020, 7:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.