ETV Bharat / state

ದಾಖಲೆ ಇಲ್ಲದ ₹ 9 ಲಕ್ಷ ಹಣ ಚೆಕ್​ಪೋಸ್ಟ್​ನಲ್ಲಿ ಸೀಜ್ : ಎಸ್​ಪಿ ಎನ್ ಯತೀಶ್ - ಮಂಡ್ಯ ಜಿಲ್ಲೆಯಾದ್ಯಂತ 30 ಚೆಕ್​ಪೋಸ್ಟ್​ ನಿರ್ಮಾಣ

ಮಂಡ್ಯ ಜಿಲ್ಲೆಯಾದ್ಯಂತ ನಾವು ಸುಮಾರು 30 ಚೆಕ್​ಪೋಸ್ಟ್​ ನಿರ್ಮಾಣ ಮಾಡಿ ಕಳೆದ ಒಂದು ವಾರದಿಂದ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದೇವೆ ಎಂದು ಎಸ್​ಪಿ ಎನ್ ಯತೀಶ್ ಅವರು ಹೇಳಿದ್ದಾರೆ.

ಎಸ್​ಪಿ ಎನ್ ಯತೀಶ್
ಎಸ್​ಪಿ ಎನ್ ಯತೀಶ್
author img

By

Published : Mar 23, 2023, 3:27 PM IST

ಎಸ್​ಪಿ ಎನ್ ಯತೀಶ್

ಮಂಡ್ಯ: ನೀತಿ ಸಂಹಿತೆ ಜಾರಿಯಾಗುವ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಪೊಲೀಸ್ ಇಲಾಖೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮಂಡ್ಯ ಜಿಲ್ಲೆಯಾದ್ಯಂತ 30 ಚೆಕ್​ಪೋಸ್ಟ್ ತೆರೆದು ಮತದಾರರಿಗೆ ಹಂಚಲು ಗಿಫ್ಟ್ ಹಾಗೂ ದಾಖಲೆ ಇಲ್ಲದ ಹಣ ಸಾಗಿಸುತ್ತಿದ್ದರೆ ಅಂತಹ ಪ್ರಕರಣ ಸೀಜ್ ಮಾಡಲು ಪೊಲೀಸರು ಸಜ್ಜಾಗಿದ್ದಾರೆ.

ಪ್ರತಿ ಚೆಕ್​ಪೋಸ್ಟ್​ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಇದೀಗ ಪಕ್ಷವೊಂದರ ಬೆಂಬಲಿಗರು ಮತದಾರರಿಗೆ ಹಂಚುತ್ತಿದ್ದ ಗಿಫ್ಟ್​ ಬ್ಯಾಗ್​ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮತದಾರರಿಗೆ ಹಂಚಲು ತಂದಿದ್ದ ಸುಮಾರು 800 ಗಿಫ್ಟ್​ ಬ್ಯಾಗ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಒಂದು ವಾರದಿಂದ ಎಲ್ಲಾ ವಾಹನಗಳ ತಪಾಸಣೆ-ಯತೀಶ್​: ಈ ಕುರಿತು ಮಂಡ್ಯ ಎಸ್ಪಿ ಎನ್ ಯತೀಶ್ ಮಾತನಾಡಿ, ಮತದಾರರಿಗೆ ಹಂಚಲು ತಂದಿದ್ದ ವಸ್ತುಗಳ ಸೀಜ್ ಮಾಡಲಾಗಿದೆ. ಈಗಾಗಲೇ ನಾವು ಮಂಡ್ಯ ಜಿಲ್ಲೆಯಾದ್ಯಂತ 30 ಚೆಕ್​ಪೋಸ್ಟ್​ ನಿರ್ಮಾಣ ಮಾಡಿ ಕಳೆದ ಒಂದು ವಾರದಿಂದ ಬರುತ್ತಿರುವ ಎಲ್ಲಾ ರೀತಿಯ ವಾಹನಗಳನ್ನು ತಪಾಸಣೆ ಮಾಡುತ್ತಿದ್ದೇವೆ.

ಆಯಾ ಚೆಕ್​ಪೋಸ್ಟ್​ಗಳಲ್ಲಿ ಅಧಿಕಾರಿಗಳ ನೇಮಕ: ಇಂತಹ ವಾಹನಗಳಲ್ಲಿ ಯಾವುದೇ ದಾಖಲಾತಿಗಳಿಲ್ಲದಂತೆ ಏನಾದ್ರೂ ಹಣವನ್ನು ಸಾಗಿಸುತ್ತಿದ್ದರೆ ಅಥವಾ ಚುನಾವಣೆ ಸಮಯದಲ್ಲಿ ಮತದಾರರಿಗೆ ಹಂಚಲು ಯಾವುದಾದರೂ ವಸ್ತುಗಳನ್ನು ಸಾಗಿಸುತ್ತಿದ್ದರೆ ಅದನ್ನು ಸೀಜ್ ಮಾಡಲಾಗುತ್ತದೆ. ಹೀಗಾಗಿ, ಈಗಾಗಲೇ ಪ್ರಾಥಮಿಕ ಹಂತದಲ್ಲಿ ಚೆಕ್ ಪೋಸ್ಟ್​ಗಳನ್ನು ನಿರ್ಮಿಸಿ ಅಧಿಕಾರಿಗಳನ್ನು ನೇಮಿಸಿ ಅಲರ್ಟ್​ ಮಾಡಲಾಗಿದೆ ಎಂದರು.

ಕಂದಾಯ -ಪೊಲೀಸ್​ ಇಲಾಖೆಯಿಂದ ಜಂಟಿ ಕಾರ್ಯಾಚರಣೆ: ಈಗಾಗಲೇ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 9 ಲಕ್ಷ ಹಣವನ್ನು ಸೀಜ್ ಮಾಡಿದ್ದೇವೆ. ಅಲ್ಲದೇ, ಹಣ ಸಾಗಿಸುತ್ತಿದ್ದವರ ಮೇಲೆ ಕೇಸ್ ಕೂಡಾ ದಾಖಲು ಮಾಡಿದ್ದೇವೆ. ಅದೇ ರೀತಿ ಇಂತಹ ಪ್ರಕರಣಗಳ ಬಗ್ಗೆ ಮಾಹಿತಿ ಬಂದಾಗ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸೇರಿ ಜಂಟಿ ಕಾರ್ಯಾಚರಣೆ ಮಾಡಿ ಎಲ್ಲಿ ಇಂತಹ ವಸ್ತುಗಳನ್ನು ಶೇಖರಿಸಿರುತ್ತಾರೋ ಅಲ್ಲಿಗೆ ಹೋಗಿ ಪರಿಶೀಲಿಸುತ್ತೇವೆ. ಅಂತಹ ವಸ್ತುಗಳು ಕಂಡುಬಂದಾಗ ಅಲ್ಲೂ ಕೂಡಾ ನಾವು ಪ್ರಕರಣವನ್ನು ದಾಖಲು ಮಾಡುತ್ತೇವೆ ಎಂದರು.

ಸ್ಥಳಕ್ಕೆ ತೆರಳಿ ಕೇಸ್​ ಬುಕ್ ಮಾಡಲಾಗುವುದು: ಮೊನ್ನೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕೊಡಿಯಾಲ ಹಾಗೂ ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯಲ್ಲಿ ಇದೇ ರೀತಿಯ ಎರಡು ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದೇವೆ. ಬೇರೆ ಬೇರೆ ಕಡೆಯಿಂದ ಬರುವ ಮಾಹಿತಿ ಹಾಗೂ ನಮ್ಮ ಇಲಾಖೆಯಿಂದ ಬರುವ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ತೆರಳಿ ಅಲ್ಲಿ ಕೇಸ್​​ ಬುಕ್​​ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದರು. ​

ಗಿಫ್ಟ್​ ಆಮಿಷ ಒಡ್ಡುವವರ ವಿರುದ್ಧ ಕ್ರಮ: ಕೊಡಿಯಾಲದಲ್ಲಿ ಸೀರೆ, ತಟ್ಟೆ, ಅರಿಶಿಣ ಕುಂಕುಮ ಬಟ್ಟಲುಗಳನ್ನು ಸೀಜ್ ಮಾಡಿದ್ದೇವೆ. ಅದಲ್ಲದೇ ಮತ್ತೆ ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯಲ್ಲಿ 45 ಸೀರೆ ಅದರಲ್ಲೂ ಅರಿಸಿಣ ಕುಂಕುಮ ಡಬ್ಬಿಗಳನ್ನು ಸೀಜ್ ಮಾಡಿದ್ದೇವೆ. ಎರಡೂ ಪ್ರಕರಣ ದಾಖಲು ಮಾಡಿದ್ದೇವೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಕೊಡಿಯಾಲದಲ್ಲಿ 180 ಬ್ಯಾಗ್, ಹಾಗೂ ಟೌನ್​ನಲ್ಲಿ 45 ಬ್ಯಾಗ್ ವಶಕ್ಕೆ ಪಡೆದಿದ್ದೇವೆ ಎಂದರು. ಜೊತೆಗೆ ಮತದಾರರಿಗೆ ಗಿಫ್ಟ್ ಆಮಿಷ ಒಡ್ಡುವವರ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಚುನಾವಣೆ ಘೋಷಣೆಗೂ ಮುನ್ನ ಅಖಾಡಕ್ಕಿಳಿದ ಪೊಲೀಸರು: 9 ಲಕ್ಷ ನಗದು, 16 ಲಕ್ಷ ಸೀರೆ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.