ಮಂಡ್ಯ: ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯೋರ್ವನ 7 ಲಕ್ಷ ಹಣವನ್ನು ಸಿನಿಮೀಯ ರೀತಿಯಲ್ಲಿ ಎಗರಿಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಇಲ್ಲಿನ ಕೆ ಆರ್ ಪೇಟೆಯಲ್ಲಿ ನಡೆದಿದೆ.
ನಾಗರಾಜು ಹಣ ಕಳೆದುಕೊಂಡಿರುವ ವ್ಯಕ್ತಿ. ಇಂದು ಪಟ್ಟಣದ ಕೆನರಾ ಬ್ಯಾಂಕ್ ನಿಂದ 7 ಲಕ್ಷ ಹಣ ಡ್ರಾ ಮಾಡಿಕೊಂಡು ತಮ್ಮ ಕಾರಿನ ಒಳಗೆ ಇಟ್ಟುಕೊಂಡು ಮನೆಗೆ ತೆರಳಿದ್ದಾರೆ. ಕಾರ್ ಪಾರ್ಕ್ ಮಾಡಿ ಮನೆಯ ಬಾಗಿಲು ತೆರೆದು ಬರುವಷ್ಟರಲ್ಲಿ ಕಾರಿನ ಗಾಜು ಒಡೆದು ಖದೀಮರು ಹಣ ಕಳವು ಮಾಡಿದ್ದಾರೆ.
ಹಣ ಕದ್ದ ದುಷ್ಕರ್ಮಿಗಳು ಪಲ್ಸರ್ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ತಕ್ಷಣವೇ ಕಾರಿನಲ್ಲಿ ಅವರನ್ನು ಹಿಂಬಾಲಿಸಿದ್ರೂ, ಪಟ್ಟಣದ ಹೇಮಾವತಿ ಬಡಾವಣೆಯ ಗಲ್ಲಿಯಲ್ಲಿ ತಪ್ಪಿಸಿಕೊಂಡಿದ್ದಾರೆ. ಈ ಸಂಬಂಧ ಹಣ ಕಳೆದುಕೊಂಡ ಶಿಕ್ಷಕ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪಟ್ಟಣದ ಹಲವು ಕಡೆಯ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.
ಓದಿ: ಪಿಎಫ್ ಹಣ ಎಗರಿಸ್ತಾರೆ ಎಚ್ಚರ: 71 ವರ್ಷದ ವೃದ್ಧನಿಂದ 20 ಲಕ್ಷ ಹಣ ಲಪಟಾಯಿಸಿದ ಖದೀಮ