ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ 10 ಜನ ಕೊರೊನಾಗೆ ಬಲಿಯಾಗಿದ್ದು, ಈವರೆಗೆ ಒಟ್ಟು 333 ಮಂದಿ ಕೊರೊನಾಗೆ ಮೃತಪಟ್ಟಿದ್ದು ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿದೆ.
ಜಿಲ್ಲೆಯಲ್ಲಿಂದು 1,189 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 49,883 ಕ್ಕೆ ಏರಿಕೆಯಾಗಿದೆ. ಮಂಡ್ಯ ಜಿಲ್ಲೆಯಲ್ಲಿಂದು 1,202 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈವರೆಗೆ ಒಟ್ಟು 41,174 ಮಂದಿ ಚೇತರಿಗೊಂಡು ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,374 ಏರಿಕೆಯಾಗಿದೆ.
ತಾಲೂಕುವಾರು ಪ್ರಕರಣ:
ಮಂಡ್ಯ 295, ಮದ್ದೂರು 165, ಮಳವಳ್ಳಿ 156, ಪಾಂಡವಪುರ 104, ಶ್ರೀರಂಗಪಟ್ಟಣ 219, ಕೆ.ಆರ್.ಪೇಟೆ 119, ನಾಗಮಂಗಲ 127, ಹೊರ ಜಿಲ್ಲೆಯ 4 ಪ್ರಕರಣ ದಾಖಲಾಗಿವೆ.