ಮಂಡ್ಯ : ಕೊರೊನಾ ವಾರಿಯರ್ಸ್ ಪೌರ ಕಾರ್ಮಿಕರು ಸೇರಿ 10 ಮಂದಿಗೆ ಇಂದು ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಎಲ್ಲಾ ಆರು ಮಂದಿ ಪೌರ ಕಾರ್ಮಿಕರು ಕೆ ಆರ್ ಪೇಟೆ ಪುರಸಭೆಯವರೇ ಆಗಿದ್ದಾರೆ. ಪುರಸಭೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೂ 518 ಮಂದಿಗೆ ಸೋಂಕು ಕಾಣಿಸಿದೆ.
ಈವರೆಗೂ 367 ಮಂದಿ ಗುಣಮುಖರಾಗಿದ್ದಾರೆ. ಇಂದು 13 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.