ಕುಷ್ಠಗಿ(ಕೊಪ್ಪಳ): ಕೊರೊನಾ ತಡೆಗಟ್ಟಲು ಪರಿಸರ ಸಂರಕ್ಷಣೆಯಿಂದ ಸಾಧ್ಯ. ಸಸಿಗಳನ್ನು ಹೆಚ್ಚು ಬೆಳೆಸುವುದರಿಂದ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಠಾಣಾಧಿಕಾರಿ ಗೀತಾಂಜಲಿ ಶಿಂಧೆ ಅಭಿಪ್ರಾಯಪಟ್ಟರು
ವಿಶ್ವ ಪರಿಸರ ದಿನದ ನಿಮಿತ್ತ ಠಾಣೆಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಠಾಣೆ ಆವರಣದಲ್ಲಿ ಸುಮಾರು 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಈ ವೇಳೆ, ಪೊಲೀಸ್ ಸಿಬ್ಬಂದಿ ಬಸವರಾಜ, ಆನಂದ, ಸಾವಿತ್ರಮ್ಮ , ಪ್ರೇಮಾ ಗೌಡರ , ಗೀತಮ್ಮ, ವೀರೇಶ, ಮರಿಯಪ್ಪ ಬ್ಯಾಳಿ, ರಾಜಾಬಕ್ಷಿ ಮತ್ತು ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಶಂಕರಗೌಡ ಅಕ್ಕೇರಿ , ಅರಣ್ಯ ವೀಕ್ಷಕರಾದ ತಿಪ್ಪಣ್ಣ ,ಯಮನೂರಪ್ಪ ಗಂಗಾಧರ, ಲಕ್ಷ್ಮಣ, ಛತ್ರಪ್ಪ, ಹನುಮಂತ ಇದ್ದರು.