ETV Bharat / state

ಪ್ರವಾಸಿಗರಿಗೆ ಮುದ ನೀಡುವ ತುಂಗಭದ್ರಾ ನದಿಯಲ್ಲಿ ಸೃಷ್ಟಿಯಾಗುವ ಕಿರು ಜಲಪಾತಗಳು - ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ

ಒಂದು ಕಡೆ ನದಿಯ ಪ್ರಪಾತವಿದೆ. ನದಿಯ ನೀರು ಹರಿಯುವಾಗ ಕಲ್ಲುಗಳ ಮಧ್ಯೆ ಹರಿಯುವ ನಾದ, ಅಲ್ಲಿ ಸೃಷ್ಟಿಯಾಗುವ ಸೌಂದರ್ಯ ನೋಡಿ ಪ್ರವಾಸಿಗರು ಸಂಭ್ರಮಿಸುತ್ತಾರೆ. ನದಿಯ ನೀರು ಹರಿಯುದ ಕಲ್ಲುಗಳು ಸಹ ರಂಧ್ರಗಳಾಗಿವೆ. ಅವುಗಳ ಮಧ್ಯೆಯೇ ನೀರು ಹರಿಯುತ್ತಿದೆ. ಸ್ವಲ್ಪ ಎತ್ತರದಿಂದ ಹರಿಯುವ ನೀರು ನೋಡಿ ಆನಂದಿಸುತ್ತಾರೆ..

Water Falls In Koppal
ತುಂಗಭದ್ರಾ ನದಿಯಲ್ಲಿ ಸೃಷ್ಟಿಯಾಗುವ ಕಿರು ಜಲಪಾತ
author img

By

Published : Mar 29, 2022, 4:46 PM IST

ಕೊಪ್ಪಳ : ತುಂಗಭದ್ರಾ ಜಲಾಶಯ ಲಕ್ಷಾಂತರ ರೈತರ ಜೀವನಾಡಿ. ಜಿಲ್ಲೆಯಲ್ಲಿ ಹಾದು ಹೋಗುವ ಈ ನದಿ ರಮಣೀಯ ದೃಶ್ಯ ಸೃಷ್ಟಿಸುತ್ತದೆ. ಅದರಲ್ಲಿಯೂ ನದಿಯಲ್ಲಿ ನೀರಿದ್ದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಸಾಣಾಪುರ ಪರಿಸರದಲ್ಲಿ ಸೃಷ್ಟಿಯಾಗುವ ಕಿರು ಜಲಪಾತಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ವಿಶ್ವ ಪ್ರವಾಸೋದ್ಯಮದ ನಕ್ಷೆಯಲ್ಲಿ ಇವು 'ಹಂಪಿ ಜಲಪಾತ'ಗಳೆಂದೇ ದಾಖಲಾಗಿವೆ. ಆದರೆ, ಪ್ರವಾಸಕ್ಕೆ ಬಂದವರು ಈ ಕಿರು ಜಲಪಾತಗಳನ್ನು ಹುಡುಕಲು ಪ್ರಯಾಸ ಪಡುವಂತಾಗಿದೆ.

ತುಂಗಭದ್ರಾ ನದಿಯಲ್ಲಿ ಸೃಷ್ಟಿಯಾಗುವ ಕಿರು ಜಲಪಾತ..

ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳು, ಕೊಪ್ಪಳ ಜಿಲ್ಲೆಯ ಅಂಜನಾದ್ರಿ, ವಿಜಯನಗರ ಅರಸರ ಮೊದಲ ರಾಜಧಾನಿ ಆನೆಗೊಂದಿ ಹಾಗೂ ಇದೇ ಪ್ರದೇಶದಲ್ಲಿ ತುಂಗಭದ್ರಾ ನದಿಯಿಂದ ಸೃಷ್ಟಿಯಾಗುವ ಆಕರ್ಷಕ ಕಿರುಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇಲ್ಲಿಗೆ ದೇಶ ಹಾಗೂ ವಿದೇಶಿಗಳಿಂದ ಪ್ರವಾಸಿಗರು ಬರುತ್ತಾರೆ.

ಆದರೆ, ಹಂಪಿಗೆ ಬಂದವರು ಈ ಜಲಪಾತಗಳು ಎಲ್ಲಿವೆ ಎಂದು ಹುಡಕಬೇಕಾಗಿದೆ. ಮ್ಯಾಪ್ ನೋಡಿಕೊಂಡು ಬರುವ ಪ್ರವಾಸಿಗರಿಗೆ ಈ ಫಾಲ್ಸ್​​ಗಳು ಎಲ್ಲಿವೆ ಎಂಬ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕಾರಣ ಇಲ್ಲಿಗೆ ಬರಲು ಸರಿಯಾದ ರಸ್ತೆ ಹಾಗೂ ಪ್ರವಾಸಿಗರಿಗೆ ಮೂಲಸೌಲಭ್ಯಗಳಿಲ್ಲ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಕಿರು ಜಲಪಾತಗಳು ಸೃಷ್ಟಿಯಾಗುತ್ತವೆ.

ಜಲಪಾತಗಳ ನಯನ ಮನೋಹರ ದೃಶ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ವೀಕೆಂಡ್‌ ಬೆಸ್ಟ್ ಸ್ಪಾಟ್ ಆಗಿರುವ ಆನೆಗೊಂದಿ ಪ್ರದೇಶಕ್ಕೆ ಬರುವ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ತುಂಗಭದ್ರಾ ನದಿಯ ನೀರು ಹರಿಯುವಾಗ ಕಲ್ಲು ಬಂಡೆಗಳ ಮಧ್ಯೆ ಹಾಯ್ದು ಹೋಗುವಾಗ ಜಲಧಾರೆ ಧುಮ್ಮುಕ್ಕುತ್ತಿವೆ.

ಒಂದು ಕಡೆ ನದಿಯ ಪ್ರಪಾತವಿದೆ. ನದಿಯ ನೀರು ಹರಿಯುವಾಗ ಕಲ್ಲುಗಳ ಮಧ್ಯೆ ಹರಿಯುವ ನಾದ, ಅಲ್ಲಿ ಸೃಷ್ಟಿಯಾಗುವ ಸೌಂದರ್ಯ ನೋಡಿ ಪ್ರವಾಸಿಗರು ಸಂಭ್ರಮಿಸುತ್ತಾರೆ. ನದಿಯ ನೀರು ಹರಿಯುದ ಕಲ್ಲುಗಳು ಸಹ ರಂಧ್ರಗಳಾಗಿವೆ. ಅವುಗಳ ಮಧ್ಯೆಯೇ ನೀರು ಹರಿಯುತ್ತಿದೆ. ಸ್ವಲ್ಪ ಎತ್ತರದಿಂದ ಹರಿಯುವ ನೀರು ನೋಡಿ ಆನಂದಿಸುತ್ತಾರೆ.

ಮಾಹಿತಿ ತಿಳಿದ ಕೆಲವೇ ಮಂದಿ ಪ್ರವಾಸಿಗರು ಇಲ್ಲಿಯ ಕಿರುಜಲಪಾತಗಳಲ್ಲಿ ಮಿಂದು ಸಂಭ್ರಮಿಸುತ್ತಾರೆ. ಅಲ್ಲದೇ ಇಲ್ಲಿ ಸ್ಥಳೀಯ ನಾವಿಕರು ದೋಣಿಗಳನ್ನು ಹಾಕಿಕೊಂಡು ಸ್ವಲ್ಪ ದೂರದವರೆಗೂ ಸುತ್ತಾಡಿಸಿ ಇಲ್ಲಿ ಕಿರುಜಲಪಾತಗಳನ್ನು ತೋರಿಸುತ್ತಾರೆ. ದೋಣಿಯಲ್ಲಿ ಸುತ್ತಾಡುತ್ತಾ ಇಲ್ಲಿಯ ನದಿ ನಿರ್ಮಿತ ಕಿರುಜಲಪಾತಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಮೂಲಸೌಕರ್ಯ ಒದಗಿಸುವಂತೆ ಆಗ್ರಹ : ಈ ಮೊದಲು ಇಲ್ಲಿಗೆ ಬರುವ ಪ್ರವಾಸಿಗರು ಈಜಾಡಲು ಹೋಗಿ ನದಿಯ ಸುಳಿಯಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಆದರೆ, ಸ್ಥಳೀಯ ನಾವಿಕರು ದೋಣಿಗಳನ್ನು ಹಾಕುವುದು, ಕಿರುಜಲಪಾತಗಳ ಪ್ರದೇಶದಲ್ಲಿ ನದಿಯ ಆಳಕ್ಕೆ ಇಳಿಯದಂತೆ ಜನರಿಗೆ ಸೂಚನೆ ನೀಡುತ್ತಾ ಕಾವಲಿರುತ್ತಾರೆ. ಸರ್ಕಾರ ಹಾಗೂ ಜಿಲ್ಲಾಡಳಿತ ಈ ಸ್ಥಳವನ್ನು ಅಭಿವೃದ್ದಿಪಡಿಸಬೇಕು. ಇಲ್ಲಿಗೆ ಬರುವ ಪ್ರವಾಸಿಗರಿಗೆ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ‌.

ಇದನ್ನೂ ಓದಿ: ಕಾರವಾರದ ಬೈತಖೋಲ್ ವಾಣಿಜ್ಯ ಬಂದರು ವಿಸ್ತರಣೆಗೆ ತಡೆ: ಸುಪ್ರೀಂಕೋರ್ಟ್ ಮೌಖಿಕ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.