ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ನವವೃಂದಾನದಲ್ಲಿ ಶ್ರೀ ವ್ಯಾಸರಾಜ ತೀರ್ಥರ ವೃಂದಾವನ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ರಾಯರ ಮಠ ಹಾಗೂ ಸೋಸಲೆ ಮಠದ ಯತಿಗಳು ನವವೃಂದಾವನಕ್ಕೆ ಭೇಟಿ ನೀಡಿದರು.
ಸೋಸಲೆ ವ್ಯಾಸರಾಯ ಮಠದ ಶ್ರೀ ವಿದ್ಯಾಮನೋಹರ ತೀರ್ಥರು ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಗಳ ಮಠದ ಶ್ರೀ ಸುಭುದೇಂದ್ರ ತೀರ್ಥರು ನವವೃಂದಾವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಉಭಯ ಶ್ರೀಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಅವರು ಸಹ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.
ಘಟನೆ ಕುರಿತಂತೆ ಬಹಳ ನೋವಿನಿಂದ ಮಾತನಾಡಿದ ಉಭಯ ಶ್ರೀಗಳು, ಘಟನೆಯನ್ನು ಬಲವಾಗಿ ಖಂಡಿಸಿದರು. ಅಲ್ಲದೆ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಬೇಕು. ನವವೃಂದಾವನಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.