ETV Bharat / state

ಪೌರಾಣಿಕ ಹಿನ್ನೆಲೆಯ ವಾಲಿ ಪರ್ವತದಲ್ಲಿದೆ ನಕ್ಷತ್ರವನ... ರಾಶಿ-ನಕ್ಷತ್ರ ದೋಷಕ್ಕೆ ಇಲ್ಲಿದೆಯಂತೆ ಪರಿಹಾರ! - kannadanews

ರಾಶಿ ನಕ್ಷತ್ರ ದೋಷವಿರುವ ಜನರು ದೋಷ ಪರಿಹರಿಸಿಕೊಳ್ಳಲು ಕೊಪ್ಪಳ ಜಿಲ್ಲೆಯ ವಾಲಿ ಪರ್ವತದಲ್ಲಿರುವ ಮರಗಿಡಗಳಿಗೆ ಬಂದು ಪೂಜೆ ಮಾಡುತ್ತಾರೆ. ಇದರ ಹಿಂದೆ ಒಂದು ಬಲವಾದ ನಂಬಿಕೆ ಸಹ ಇದೆ.

ಒಂದೊಂದು ನಕ್ಷತ್ರ ಮತ್ತು ರಾಶಿಗೆ ಒಂದೊಂದು ಮರ
author img

By

Published : Jun 14, 2019, 2:38 PM IST

ಕೊಪ್ಪಳ:ಮೂಢ ನಂಬಿಕೆಗಳು ಇಂದಿಗೂ ಜೀವಂತವಾಗಿವೆ. ರಾಶಿ, ನಕ್ಷತ್ರ ನೋಡಿ ಮನುಷ್ಯನ ಬದುಕಿನ ಆಗುಹೋಗುಗಳ ಬಗ್ಗೆ ತಿಳಿಸುವ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವ ಜನರಿಗೇನು ಕೊರತೆ ಇಲ್ಲ. ಅಂತೆಯೇ ರಾಶಿ-ನಕ್ಷತ್ರಗಳಿಗೂ ಒಂದೊಂದು ಮರಗಳಿವೆ. ಇಂತಹ ರಾಶಿ ನಕ್ಷತ್ರಗಳ ಅಪರೂಪದ ವನವೊಂದು ಗಮನ ಸೆಳೆಯುತ್ತಿದೆ. ಅದರ ಕಂಪ್ಲೀಟ್​ ಮಾಹಿತಿಯನ್ನು ನಾವ್​ ನಿಮ್ಗೆ ತಿಳಿಸ್ತೇವೆ...

ಒಂದೊಂದು ನಕ್ಷತ್ರ ಮತ್ತು ರಾಶಿಗೆ ಒಂದೊಂದು ಮರ

ಜ್ಯೋತಿಷ್ಯ ಶಾಸ್ತ್ರವನ್ನು ನಂಬುವಂಥ ಜನರ ರಾಶಿ ನಕ್ಷತ್ರಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯಿರುವ ಪೌರಾಣಿಕ ಹಿನ್ನೆಲೆವುಳ್ಳ ವಾಲಿ ಪರ್ವತದಲ್ಲಿ ರಾಶಿ-ನಕ್ಷತ್ರ ಸಂಬಂಧಿತ ವನವಿದೆ. ರಾಶಿ- ನಕ್ಷತ್ರ ದೋಷವಿರುವ ಜನರು ದೋಷ ಪರಿಹಾರಕ್ಕಾಗಿ ನಾನಾ ರೀತಿಯಾದಂತಹ ಪೂಜೆ-ಪುನಸ್ಕಾರಗಳನ್ನು ಇಲ್ಲಿ ನೆರವೇರಿಸುತ್ತಾರೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 27 ನಕ್ಷತ್ರಗಳು ಹಾಗೂ 12 ರಾಶಿಗಳಿವೆ. 27 ನಕ್ಷತ್ರಗಳು ಹಾಗೂ ದ್ವಾದಶ ರಾಶಿಗಳಿಗೆ ಒಂದೊಂದು ಮರದಂತೆ ಇಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಅನ್ನೋದು ಜ್ಯೋತಿಶಾಸ್ತ್ರದ ನಂಬಿಕೆ. ಹೀಗಾಗಿ ಒಂದೊಂದು ನಕ್ಷತ್ರ ಮತ್ತು ರಾಶಿಗೆ ಒಂದೊಂದು ಮರವನ್ನ ವಾಲಿ ಪರ್ವತದಲ್ಲಿ ಬೆಳೆಸಲಾಗಿದೆ.

ಇಲ್ಲಿ ನಕ್ಷತ್ರವನ, ರಾಶಿವನ, ನವದುರ್ಗೆಯರ ವನ, ಅಷ್ಟದಿಕ್ಪಾಲಕರ ವನ, ಶಿವ ಪಂಚಾಯಿತಿ, ಸರಸ್ವತಿ ವನ, ನಂದನವನ, ನವಗ್ರಹ ವನ ಸೇರಿದಂತೆ ಒಟ್ಟು 11 ವನಗಳಿವೆ. ರಾಶಿ ಮತ್ತು ನಕ್ಷತ್ರ ದೋಷವಿರುವ ಜನರು ಈ ನಕ್ಷತ್ರ ಮತ್ತು ರಾಶಿ ವನಕ್ಕೆ ಬಂದು ತಮಗೆ ಸಂಬಂಧಿಸಿದ ರಾಶಿ ಮತ್ತು ನಕ್ಷತ್ರದ ಗಿಡಗಳಿಗೆ ನೀರು ಹಾಕಿ ನಮಿಸಿದರೆ ದೋಷ ಪರಿಹಾರವಾಗುತ್ತದೆ ಅಂತಾರೆ ಇಲ್ಲಿನ ಆಶ್ರಮದ ಶಂಕರ ಸ್ವಾಮೀಜಿ.
ವಾಲಿ ಪರ್ವತದಲ್ಲಿ ಈ 11 ವನಗಳನ್ನು ನಿರ್ಮಾಣದ ಹಿಂದಿರೋರು ಅಲ್ಲಿರುವ ಬ್ರಹ್ಮಯ್ಯ ಸ್ವಾಮೀಜಿ. ರಾಶಿ ನಕ್ಷತ್ರಕ್ಕೆ ಸಂಬಂಧಿಸಿದ ಎಲ್ಲ ಮರಗಳನ್ನು ರಾಜ್ಯಾದ್ಯಂತ ಹುಡುಕಾಡಿ ತಂದ ಅವರು ಬ್ರಹ್ಮಯ್ಯ ಈ ರಾಶಿನಕ್ಷತ್ರ ವನವನ್ನು ನಿರ್ಮಿಸದ್ದರು ಎನ್ನಲಾಗ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎಲ್ಲ ಮರಗಳು ರಾಶಿ, ನಕ್ಷತ್ರಕ್ಕೆ ಸಂಬಂಧಿಸಿದ್ದವು ಎಂದು ಹೇಳುತ್ತಾರೆ. ಇವುಗಳನ್ನು ಮೂಡನಂಬಿಕೆಯೆನ್ನಬೇಕೋ ಜನರ ಧಾರ್ಮಿಕ ನಂಬಿಕೆಗಳು ಎನ್ನಬೇಕೋ ಅದು ಅವರವರ ನಂಬಿಕೆ ಹಾಗೂ ದೃಷ್ಟಿಕೋನಗಳಿಗೆ ಬಿಟ್ಟ ವಿಚಾರ. ಅದೇನೆ ಇರಲಿ ನಮ್ಮ ಪೂರ್ವಜರು ಪ್ರಕೃತಿಯ ಆರಾಧಕರಾಗಿದ್ದರು. ಪ್ರಕೃತಿಯೇ ಎಲ್ಲದರ ಮೂಲ ಎಂಬುದನ್ನು ಮಾತ್ರ ತಳ್ಳಿ ಹಾಕುವಂತಿಲ್ಲ.

Intro:

Body:ಕೊಪ್ಪಳ:- ಬಹುಸಂಸ್ಕೃತಿಯ ನಾಡಾಗಿರುವ ನಮ್ಮ ದೇಶದಲ್ಲಿ ಮೂಢನಂಬಿಕೆಗಳ ಜೊತೆಗೆ ನಂಬಿಕೆಗಳು ಸಹ ಮನುಷ್ಯನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ರಾಶಿ, ನಕ್ಷತ್ರ ನೋಡಿ ಮನುಷ್ಯನ ಬದುಕಿನ ಆಗುಹೋಗುಗಳ ಬಗ್ಗೆ ಜ್ಯೋತಿಷ್ಯಾಸ್ತ್ರದ ಮೂಲಕ ವಿಶ್ಲೇಷಣೆ ಮಾಡಲಾಗುತ್ತದೆ. ಇಂತಹ ರಾಶಿ-ನಕ್ಷತ್ರಗಳಿಗೂ ಒಂದೊಂದು ಮರಗಳಿವೆ. ಇಂತಹ ರಾಶಿ ನಕ್ಷತ್ರಗಳ ಅಪರೂಪದ ವನವೊಂದು ಗಮನಸೆಳೆಯುತ್ತಿದೆ. ಹಾಗಾದ್ರೆ ಬನ್ನಿ, ಆ ರಾಶಿ ನಕ್ಷತ್ರವನ ಎಲ್ಲಿದೆ? ಅದರ ಹಿಂದಿರುವ ನಂಬಿಕೆ ಏನು ಎಂಬುದರ ಕುರಿತು ಒಂದು ವಿಶೇಷ ವರದಿ ನೋಡೋಣ...

ಹೌದು..., ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯಿರುವ ಪೌರಾಣಿಕ ಹಿನ್ನೆಲೆ ಇರುವ ವಾಲಿ ಪರ್ವತದಲ್ಲಿ ರಾಶಿ-ನಕ್ಷತ್ರ ಸಂಬಂಧಿತ ವನವಿದೆ. ಜ್ಯೋತಿಷ್ಯ ಶಾಸ್ತ್ರವನ್ನು ನಂಬುವಂಥ ಜನರ ರಾಶಿ ನಕ್ಷತ್ರಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ ರಾಶಿ ನಕ್ಷತ್ರ ದೋಷವಿರುವ ಜನರು ದೋಷವನ್ನು ಪರಿಹರಿಸಿಕೊಳ್ಳಲು ನಾನಾ ರೀತಿಯಾದಂತಹ ಪೂಜೆ-ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ಜ್ಯೋತಿಷ್ಯಾಸ್ತ್ರದ ಪ್ರಕಾರ 27 ನಕ್ಷತ್ರಗಳು ಹಾಗೂ 12 ರಾಶಿಗಳು ಇವೆ ತಾವು ಹುಟ್ಟಿದ ರಾಶಿ ನಕ್ಷತ್ರದ ಆಧಾರದ ಮೇಲೆ ಅವರವರ ಬದುಕಿನ ಫಲಾಫಲಗಳನ್ನು ಲೆಕ್ಕಾಚಾರ ಹಾಕಲಾಗುತ್ತದೆ. 27 ನಕ್ಷತ್ರಗಳು ಹಾಗೂ ದ್ವಾದಶ ರಾಶಿಗಳು ಗಳಿಗೆ ಒಂದೊಂದು ಮರದಂತೆ ಈ ಮರಗಳು ದೇವತೆಗಳು ಈ ಮರದ ರೂಪದಲ್ಲಿ ನೆಲೆಸಿರುತ್ತಾರೆ ಎಂಬುದು ಜ್ಯೋತಿಶಾಸ್ತ್ರದ ನಂಬಿಕೆ ಹೀಗಾಗಿ ಒಂದೊಂದು ನಕ್ಷತ್ರ ಮತ್ತು ರಾಶಿಗೆ ಒಂದೊಂದು ಮರವನ್ನ ಪೌರಾಣಿಕ ಮಹ್ವದ ವಾಲಿ ಪರ್ವತದಲ್ಲಿ ಬೆಳೆಸಲಾಗಿದೆ. ಇಲ್ಲಿ ಒಟ್ಟು ಹನ್ನೊಂದು ವನಗಳನ್ನು ನಿರ್ಮಾಣ ಮಾಡಲಾಗಿದೆ. ನಕ್ಷತ್ರವನ, ರಾಶಿವನ, ನವದುರ್ಗೆಯರ ವನ,ಅಷ್ಟದಿಕ್ಪಾಲಕರ ವನ, ಶಿವ ಪಂಚಾಯಿತಿ, ಸರಸ್ವತಿ ವನ, ನಂದನವನ, ನವಗ್ರಹ ವನ ಸೇರಿದಂತೆ ಒಟ್ಟು 11 ವನಗಳು ಇಲ್ಲಿವೆ. ಈ 11 ವನಗಳ ಪೈಕಿ ರಾಶಿ ಮತ್ತು ನಕ್ಷತ್ರವನ ಜನರಿಗೆ ಹೆಚ್ಚು ಉಪಯುಕ್ತವಾಗಿದೆ. ರಾಶಿ ಮತ್ತು ನಕ್ಷತ್ರ ದೋಷವಿರುವ ಜನರು ಈ ನಕ್ಷತ್ರ ಮತ್ತು ರಾಶಿ ವನಕ್ಕೆ ಬಂದು ತಮಗೆ ಸಂಬಂಧಿಸಿದ ರಾಶಿ ಮತ್ತು ನಕ್ಷತ್ರದ ಗಿಡಗಳಿಗೆ ನೀರು ಹಾಕಿ ನಮಿಸಿದರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ. ರಾಶಿ ಮತ್ತು ನಕ್ಷತ್ರ ದೋಷವಿರುವ ಜನರು ಇಲ್ಲಿಗೆ ಬರುತ್ತಾರೆ ಎನ್ನುತ್ತಾರೆ ಅಲ್ಲಿನ ಆಶ್ರಮದ ಶಂಕರ ಸ್ವಾಮೀಜಿಯವರು.

ಬೈಟ್೧:- ಶಂಕರ ಸ್ವಾಮೀಜಿ, ಬ್ರಹ್ಮಯ್ಯ ಸ್ವಾಮೀಜಿಯವರ ಶಿಷ್ಯರು.

ಇನ್ನು ವಾಲಿ ಪರ್ವತದಲ್ಲಿ ಈ 11 ವನಗಳನ್ನು ನಿರ್ಮಾಣದ ಹಿಂದಿರೋರು ಅಲ್ಲಿರುವ ಬ್ರಹ್ಮಯ್ಯ ಸ್ವಾಮೀಜಿ ಎಂಬುವವರು. ವಾಲಿ ಪರ್ವತದಲ್ಲಿನ ಈ 11 ವನಗಳಿರುವ ಜಾಗದಲ್ಲಿ ಈ ಹಿಂದೆ ಗಿಡಗಂಟೆಗಳು ಇದ್ದವು. ಇದನ್ನೆಲ್ಲವನ್ನು ಸ್ವಚ್ಛಮಾಡಿ ರಾಶಿ ನಕ್ಷತ್ರಕ್ಕೆ ಸಂಬಂಧಿಸಿದ ಎಲ್ಲ ಮರಗಳನ್ನು ರಾಜ್ಯಾದ್ಯಂತ ಹುಡುಕಾಡಿ ತಂದ ಬ್ರಹ್ಮಯ್ಯ ಸ್ವಾಮಿಯವರು ಆಸ್ತೆವಹಿಸಿ ನಿರ್ಮಾಣ ಮಾಡಿದ್ದಾರೆ ಎನ್ನುತ್ತಾರೆ ಶಂಕರ ಸ್ವಾಮೀಜಿ ಅವರು.

ಬೈಟ್೨:- ಶಂಕರ ಸ್ವಾಮೀಜಿ, ಬ್ರಹ್ಮಯ್ಯ ಸ್ವಾಮೀಜಿಯವರ ಶಿಷ್ಯರು.

ವಾಲಿ ಪರ್ವತದಲ್ಲಿರುವ ಶಂಕರ ಸ್ವಾಮೀಜಿ ಅವರು ಹೇಳುವ ಪ್ರಕಾರ 27 ನಕ್ಷತ್ರಕ್ಕೆ ಹಾಗೂ 12 ರಾಶಿಗಳಿಗೆ ಒಂದೊಂದು ಮರವಿದೆ. ಅವುಗಳಲ್ಲಿ ನಕ್ಷತ್ರಗಳಿಗೆ ಸಂಬಂಧಪಟ್ಟಂತೆ ನೋಡುವುದಾದರೆ ಅಶ್ವಿನಿ ನಕ್ಷತ್ರಕ್ಕೆ ಕಾಸಗರಕಾಂತ ಮರ, ಭರಣಿ ನಕ್ಷತ್ರಕ್ಕೆ ಕಾಡುನೆಲ್ಲಿಮರ, ಆರಿದ್ರ ನಕ್ಷತ್ರಕ್ಕೆ ಶಿವಾನಿ ಮರ, ಪುನರ್ವಸು ನಕ್ಷತ್ರಕ್ಕೆ ಬಿದಿರು, ಹುಬ್ಬ ನಕ್ಷತ್ರಕ್ಕೆ ಬಿಳಿ ಮುತ್ತುಗದ ಮರ, ಮಘ ನಕ್ಷತ್ರಕ್ಕೆ ಆಲದಮರ, ಕೃತಿಕಾ ನಕ್ಷತ್ರಕ್ಕೆ ಅತ್ತಿಮರ, ಉತ್ತರಾಷಾಡ ನಕ್ಷತ್ರಕ್ಕೆ ಹಲಸಿನಮರ, ರೋಹಿಣಿ ನಕ್ಷತ್ರಕ್ಕೆ ನೇರಳೆಮರ, ಮೃಗಶಿರಾ ಮಳೆ ನಕ್ಷತ್ರಕ್ಕೆ ಕಗ್ಗಲಿ ಮರ, ಪೂರ್ವಾಷಾಡ ನಕ್ಷತ್ರಕ್ಕೆ ಕರಿ ಮುತ್ತುಗದ ಮರ, ಶ್ರವಣ ನಕ್ಷತ್ರಕ್ಕೆ ಬಿಳಿ ಎಕ್ಕೆಮರ, ಮೂಲಾ ನಕ್ಷತ್ರಕ್ಕೆ ಶ್ರೀಗಂಧ ಮರ, ಆಶ್ಲೇಷ ನಕ್ಷತ್ರಕ್ಕೆ ನಾಗಸಂಪಿಗೆ, ಶತತಾರ ನಕ್ಷತ್ರಕ್ಕೆ ಕದಂಬಮರ, ಧನಿಷ್ಠಾ ನಕ್ಷತ್ರಕ್ಕೆ ಬನ್ನಿಮರ, ಉತ್ತರ ನಕ್ಷತ್ರಕ್ಕೆ ಬಸರಿಮರ, ಹಸ್ತ ನಕ್ಷತ್ರಕ್ಕೆ ಅವಟೆ ಮರ, ಸ್ವಾತಿ ನಕ್ಷತ್ರಕ್ಕೆ ಬಿಳಿ ಮತ್ತಿಮರ, ಪುಷ್ಯಾ ನಕ್ಷತ್ರಕ್ಕೆ ಅರಳಿ ಮರ, ಉತ್ತರಭಾದ್ರಪದ ನಕ್ಷತ್ರಕ್ಕೆ ಮಾವಿನಮರ, ಪೂರ್ವಭಾದ್ರ ನಕ್ಷತ್ರಕ್ಕೆ ಬೇವಿನ ಮರ ರೇವತಿ ನಕ್ಷತ್ರಕ್ಕೆ ಹಿಪ್ಪೆಮರ, ಅನುರಾಧ ನಕ್ಷತ್ರಕ್ಕೆ ರಂಜೋಲಾ ಮರ, ವಿಶಾಖಾ ನಕ್ಷತ್ರಕ್ಕೆ ಮುಳ್ಳುಸಂಪಿಗೆ, ಚಿತ್ತ ನಕ್ಷತ್ರಕ್ಕೆ ಬಿಲ್ವಪತ್ರೆ ಮರ, ಜೇಷ್ಠ ನಕ್ಷತ್ರಕ್ಕೆ ಬರೋಲ ಮರ.

ಇನ್ನು ದ್ವಾದಶ ರಾಶಿಗಳಾದ ಮೇಷ ರಾಶಿಗೆ ರಕ್ತಚಂದನ ಮರ, ಋಷಭ ರಾಶಿಗೆ ಮದ್ದಾಲೆಮರ, ಮಿಥುನ ರಾಶಿಗೆ ಹಲಸು, ಕಟಕರಾಶಿಗೆ ಮುತ್ತುಗದಮರ, ಸಿಂಹ ರಾಶಿಗೆ ಪಾದರಿಮರ, ಕನ್ಯಾರಾಶಿಗೆ ಮಾವಿನ ಮರ, ತುಲಾ ರಾಶಿಗೆ ರಂಜೋಲಮರ, ವೃಶ್ಚಿಕರಾಶಿಗೆ ಕಗ್ಗಲಿಮರ, ಧನುರ್ರಾಶಿಗೆ ಅರಳಿಮರ, ಮಕರ ರಾಶಿಗೆ ಬೀಟೆ, ಕುಂಭ ರಾಶಿಗೆ ಬನ್ನಿಮರ ಹಾಗೂ ಮೀನರಾಶಿಗೆ ಆಲದ ಮರ ಎಂದು ಶಂಕರಸ್ವಾಮಿ ವಿವರಿಸುತ್ತಾರೆ.

ಜ್ಯೋತಿಷ್ಯಾಸ್ತ್ರದ ಪ್ರಕಾರ ಈ ಎಲ್ಲ ಮರಗಳು ರಾಶಿ, ನಕ್ಷತ್ರಕ್ಕೆ ಸಂಬಂಧಿಸಿದ್ದವು ಎಂದು ಹೇಳುತ್ತಾರೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದರೆ, ನಮ್ಮ ಪೂರ್ವಜರು ಪ್ರಕೃತಿಯ ಆರಾಧಕರಾಗಿದ್ದರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.