ಗಂಗಾವತಿ: ನಗರದ ವಿಶ್ವಬ್ರಾಹ್ಮಣ ಸಮುದಾಯದಿಂದ ಆನೆಗೊಂದಿ ರಸ್ತೆಯ ಪಿಕಾರ್ಡ್ ಬ್ಯಾಂಕ್ ಎದುರು ಇರುವ ವಿಶ್ವಕರ್ಮ ವೃತ್ತದಲ್ಲಿ ಭಗವಾನ್ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರದ ಕಾಳಿಕಾದೇವಿ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಪತ್ತಾರ್, ವಿಶ್ವ ಸೃಷ್ಟಿಗೆ ವಿಶ್ವಕರ್ಮನ ಕೊಡುಗೆ ಅತ್ಯಂತ ದೊಡ್ಡದಿದೆ. ಹಿಂದು ಧರ್ಮದ ಎಲ್ಲಾ ವೇದ, ಪುರಾಣಗಳಲ್ಲಿ ವಿಶ್ವಕರ್ಮನ ಕೊಡುಗೆಗಳನ್ನು ವಿವರಿಸಲಾಗಿದೆ.
ಆದರೆ ಕಾಲಘಟ್ಟದಲ್ಲಿ ಸಮುದಾಯದವರಿಗೆ ವಂಶಪಾರಂಪರ್ಯವಾಗಿ ಬಂದಿದ್ದ ಕುಲಕಸುಬುಗಳು ಅನ್ಯರಪಾಲಾಗಿವೆ. ಈ ಹಿನ್ನೆಲೆ ಸರ್ಕಾರ ಈ ಸಮುದಾಯಕ್ಕೆ ಪ್ರೋತ್ಸಾಹ ನೀಡಿ ಮತ್ತೆ ಮುನ್ನೆಲೆಗೆ ತರಬೇಕು ಎಂದು ಮನವಿ ಮಾಡಿದರು.