ಗಂಗಾವತಿ : ಹದಗೆಟ್ಟ ರಸ್ತೆಯ ಬಗ್ಗೆ ಹತ್ತಾರು ಬಾರಿ ಶಾಸಕರ ಗಮನಕ್ಕ ತಂದರೂ ಕಿವಿಗೊಡದ ಹಿನ್ನೆಲೆ ಯುವಕರು ರಸ್ತೆಯಲ್ಲಿ ಸಸಿನೆಟ್ಟು ಅಣಕು ಮಾಡಿದ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಮೀಸಲು ಕ್ಷೇತ್ರವಾದ ಕನಕಗಿರಿ ವಿಧಾನಸಭಾ ವ್ಯಾಪ್ತಿಯ ಸಿದ್ದಾಪುರ ಕಂದಾಯ ಹೋಬಳಿಯ ಈಳಿಗೆನೂರು ರಸ್ತೆ ಮಳೆಯಿಂದ ಸಂಪೂರ್ಣವಾಗಿ ಹಾಳಾಗಿದೆ. ಇದೇ ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡಿದ್ದಾರೆ ಸ್ಥಳೀಯ ಯುವಕರು.
ಕಳೆದ ಹಲವು ವರ್ಷದಿಂದ ರಸ್ತೆಯ ಬಗ್ಗೆ ನಾವು ಸಂಬಂಧಿಸಿದವರಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ಯಾರೂ ಕಿವಿಗೊಟ್ಟಿಲ್ಲ. ಗ್ರಾಮೀಣ ಪ್ರದೇಶಕ್ಕೆ ಎಷ್ಟು ಬೇಜವಾಬ್ದಾರಿ ಇದೆ ಎಂಬುವುದಕ್ಕೆ ಇದೇ ಸಾಕ್ಷಿ ಅಂತಾ ಸ್ಥಳೀಯ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.