ETV Bharat / state

ಗಂಗಾವತಿ: ಲಸಿಕೆ ಪಡೆಯಲು ಹಿಂದೇಟು, ಮನೆಮುಂದೆ ಅಧಿಕಾರಿಗಳ ಧರಣಿ - ಮನೆಯ ಮುಂದೆ ಅಧಿಕಾರಿಗಳ ಧರಣಿ

ಗಂಗಾವತಿ ತಾಲೂಕಿನ ಸಮೀಪದ ಡಗ್ಗಿ ಗ್ರಾಮದಲ್ಲಿ ಲಸಿಕೆ ಪಡಯಲು ಹಿಂದೇಟು ಹಾಕಿದ ವ್ಯಕ್ತಿಯ ಮನೆಯ ಮುಂದೆ ನಾನಾ ಇಲಾಖೆ ಅಧಿಕಾರಿಗಳು ಧರಣಿ ನಡೆಸಿದರು.

Various department officers protested  in Gangavathi
ಮನೆಯ ಮುಂದೆ ಅಧಿಕಾರಿಗಳ ಧರಣಿ
author img

By

Published : Sep 8, 2021, 8:47 PM IST

ಗಂಗಾವತಿ: ಕೋವಿಡ್ ಲಸಿಕೆ ಪಡಯಲು ಹಿಂದೇಟು ಹಾಕಿದ ವ್ಯಕ್ತಿಯ ಮನೆಯ ಮುಂದೆ ನಾನಾ ಇಲಾಖೆ ಅಧಿಕಾರಿಗಳು ಧರಣಿ ನಡೆಸಿದ ಘಟನೆ ತಾಲೂಕಿನ ಹೊಸಕೇರಾ ಸಮೀಪದ ಡಗ್ಗಿ ಗ್ರಾಮದಲ್ಲಿ ನಡೆದಿದೆ.

ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ ವ್ಯಕ್ತಿ ಮನೆ ಮುಂದೆ ಧರಣಿ ನಡೆಸಿದ ಅಧಿಕಾರಿಗಳು

ಗ್ರಾಮದ ದೇವಪ್ಪ ಎಂಬ ವ್ಯಕ್ತಿಯ ಕುಟುಂಬ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಎಷ್ಟೇ ಬಾರಿ ಮನೆಗೆ ಬಂದು ಮನವೊಲಿಸಿದರೂ ದೇವಪ್ಪ ಹಾಗೂ ಕುಟುಂಬ ಮನಸ್ಸು ಮಾಡಲಿಲ್ಲ. ಈ ಬಗ್ಗೆ ಮಾಹಿತಿ ಅರಿತ ತಾಲೂಕು ಪಂಚಾಯಿತಿ ಇಒ ಮೋಹನ್ ನೇತೃತ್ವದ ಅಧಿಕಾರಿಗಳ ತಂಡ, ಲಸಿಕೆ ಹಾಕಿಸಿಕೊಳ್ಳುವವರೆಗೂ ಮನೆಯಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದು ಸಾಂಕೇತಿಕ ಧರಣಿಗೆ ಮುಂದಾದರು.

ಈ ವೇಳೆ ಅಧಿಕಾರಿಗಳು ದೇವಪ್ಪ ಹಾಗೂ ಆತನ ಕುಟುಂಬವನ್ನು ಪರಿಪರಿಯಾಗಿ ಮನವೊಲಿಸಿದರು. ಪರಿಣಾಮ ದೇವಪ್ಪ ಲಸಿಕೆ ಪಡೆಯಲು ಮುಂದಾದರು. ಆಗ ಸಿಬ್ಬಂದಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಇದನ್ನೂ ಓದಿ: ವಿಜಯಪುರ: ಜೆಸಿಬಿ ಯಂತ್ರದಲ್ಲಿ ಸಿಲುಕಿ ಚಾಲಕ, ಪೌರ ಕಾರ್ಮಿಕ ದಾರುಣ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.