ಗಂಗಾವತಿ(ಕೊಪ್ಪಳ): 'ಸಾಮಾಜಿಕ ಜಾಲತಾಣಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಅದರ ಪರಿಣಾಮವಿದೆ. ನನಗಂತೂ ವಾಟ್ಸ್ಆ್ಯಪ್ ವರವಾಗಿ ಪರಿಣಮಿಸಿತು' ಎಂದು ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 191ನೇ ರ‍್ಯಾಂಕ್ ಪಡೆದ ಅಪೂರ್ವ ಬಾಸೂರು ಹೇಳಿದರು.
'ಬಹುತೇಕರು ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ನಾನಾ ಕಾರಣಕ್ಕೆ ಉಪಯೋಗಿಸಿಕೊಳ್ತಾರೆ. ನಾನು ಕ್ಲಿಷ್ಟಕರ ವಿಷಯವನ್ನು ಸ್ಟೇಟಸ್ಗೆ ಹಾಕಿ ಆಗಾಗ ಕಣ್ಣಾಡಿಸುತ್ತಿದ್ದೆ. ಈ ರೀತಿ ನಡೆಸಿದ ಪರೀಕ್ಷಾ ತಯಾರಿಯೂ ನನ್ನ ಸಹಾಯಕ್ಕೆ ಬಂತು. ನಾನು ಮಾತ್ರವಲ್ಲ, ನನ್ನ ಸಹಪಾಠಿಗಳಿಗೂ ಸ್ಟೇಟಸ್ನಲ್ಲಿ ಪರೀಕ್ಷಾ ಪೂರಕ ಅಂಶಗಳನ್ನೇ ಇಡುವಂತೆ ಪ್ರೇರೇಪಿಸುತ್ತಿದ್ದೆ. ದೊಡ್ಡ ಗುರಿ, ಸತತ ಪರಿಶ್ರಮ ನಮ್ಮನ್ನು ಯಶಸ್ಸಿನ ಮಾರ್ಗಕ್ಕೆ ಕೊಂಡೊಯ್ಯುತ್ತದೆ' ಎಂದು ಅಪೂರ್ವ ಬಾಸೂರು ಕಿವಿಮಾತು ಹೇಳಿದರು.
ಇದನ್ನೂ ಓದಿ: 'ಇದು ನಾಚಿಕೆಗೇಡು' ಬೆಂಗಳೂರಿನ ರಸ್ತೆ ದುರವಸ್ಥೆ ಬಗ್ಗೆ ಕಿರಣ್ ಮಂಜುಂದಾರ್ ಷಾ ಕಿಡಿ