ETV Bharat / state

ವಂಚಿತ ಸಮಾಜಕ್ಕೆ ನ್ಯಾಯ ಒದಗಿಸಿದ್ದೇವೆ, ಇದು ಬಿಜೆಪಿಗೆ ಧನಾತ್ಮಕವಾಗಲಿದೆ: ಕೇಂದ್ರ ಸಚಿವ ಭಗವಂತ ಖೂಬಾ - ಇದು ಬಿಜೆಪಿಗೆ ಧನಾತ್ಮಕವಾಗಲಿದೆ

ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ್ದಾರೆ.

koppal
ಕೊಪ್ಪಳ
author img

By

Published : Mar 31, 2023, 5:44 PM IST

ಕೇಂದ್ರ ಸಚಿವ ಭಗವಂತ ಖೂಬಾ

ಕೊಪ್ಪಳ: ಮೀಸಲಾತಿ ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ. ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಧನಾತ್ಮಕವಾಗಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕೊಪ್ಪಳದಲ್ಲಿ ಹೇಳಿದರು. ಕೊಪ್ಳದ ಗವಿಮಠಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಘೋಷಿಸಿದ ಮೀಸಲಾತಿಯಿಂದ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ.

ಮೀಸಲಾತಿ ಕುರಿತು ಮುಸ್ಲಿಂ ಹಾಗೂ ಬಂಜಾರ ಸಮಾಜ ಸಹ ವಿರೋದ ಮಾಡಿಲ್ಲ: ತುಳಿತಕ್ಕೊಳಗಾದ ಸಮಾಜ ಬಸವರಾಜ ಬೊಮ್ಮಾಯಿ ಮೀಸಲಾತಿಯಿಂದ ಸಂತೋಷಪಟ್ಟಿದ್ದಾರೆ. ನಾವು ಯಾವುದೇ ಯೋಜನೆ ಕಾರ್ಯ ರೂಪಕ್ಕೆ ತಂದರೂ ಅದು ಜನರ ಹಿತಕ್ಕಾಗಿ ಇರುತ್ತದೆ. ರಾಜಕೀಯ ಮಾಡಲು ಅಥವಾ ನಮ್ಮ ಪಕ್ಷಕ್ಕೆ ಒಳಿತಾಗಲಿ ಎಂಬ ಉದ್ದೇಶ ನಮ್ಮದಲ್ಲ. ಸಮುದಾಯದ ಬೇಡಿಕೆ ಈಡೇರಿಸಿದಾಗ ಆ ಸಮಾಜ ಕೃತಜ್ಞತೆ ಸಲ್ಲಿಸುವುದು ಸಹಜ. ಮೀಸಲಾತಿಯ ಬಗ್ಗೆ ಮುಸ್ಲಿಂ ಹಾಗೂ ಬಂಜಾರ ಸಮಾಜ ಸಹ ವಿರೋದ ಮಾಡಿಲ್ಲ ಎಂದರು.

ಇದನ್ನೂ ಓದಿ: ಶಶಿಕಲಾ ಜೊಲ್ಲೆ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ​ ದಾಖಲು

ಶಿಕಾರಿಪುರದಲ್ಲಿಯ ಘಟನೆಯಲ್ಲಿ ಕಾಂಗ್ರೆಸ್​ನವರ ಕುತಂತ್ರವಿದೆ-ಕೇಂದ್ರ ಸಚಿವ ಭಗವಂತ ಖೂಬಾ: ಕಾಂಗ್ರೆಸ್ ಎಲ್ಲಾ ಸಮುದಾಯಗಳಲ್ಲಿ ಕೀಳರಿಮೆ ಮೂಡಿಸಿದೆ. ಕೆಲವು ಸಮುದಾಯದವರನ್ನು ಬಿಜೆಪಿ ಮೇಲೆ ಎತ್ತಿಕಟ್ಟಿದೆ. ರಾಜ್ಯದ ಜನರಿಗೆ ಈಗಾಗಲೇ ಕಾಂಗ್ರೆಸ್ ಧೋರಣೆ ಅರ್ಥವಾಗಿದೆ. ನಾವು ಸಹ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಶಿಕಾರಿಪುರದಲ್ಲಿಯ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ವಿವರಣೆ ನೀಡಲಾಗಿದೆ. ಅದರಲ್ಲಿ ಕಾಂಗ್ರೆಸ್​ನವರ ಕುತಂತ್ರವಿದೆ. ಅಲ್ಲಿನ ಗಲಾಟೆಗೆ ಕಾರಣರಾದವರು ಮೂರು ಜನರು ಕಾಂಗ್ರೆಸ್ ಹಿಂಬಾಲಕರು. ಮೀಸಲಾತಿಯನ್ನು ವಿರೋಧಿಸಿಲ್ಲ ಆದರೆ, ಕಾಂಗ್ರೆಸ್ ನವರು ಕೃತ್ಯವೆಸಗಿರುವುದು ಸ್ಪಷ್ಠವಾಗಿದೆ ಎಂದು ದೂರಿದರು.

ಹೊಸ ನಿಯಮದಲ್ಲಿ ಮುಸ್ಲಿಂ ಜನಾಂಗದವರಿಗೆ ಮತ್ತಷ್ಟು ಅವಕಾಶವಿರಲಿದೆ : ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಟಿಕೆಟ್ ಹಂಚಿಕೆ ಕುರಿತು ಪ್ರತ್ರಿಕ್ರಿಯಿಸಿ, ಬಿಜೆಪಿ ಟಿಕೆಟ್ ಹಂಚಿಕೆ ಏಪ್ರಿಲ್ 7 ಮತ್ತು 8 ರಂದು ಫೈನಲ್ ಆಗಲಿದೆ. ಮೊದಲ ಪಟ್ಟಿಯಲ್ಲಿ ಎಷ್ಟು ಜನರಿಗೆ ಟಿಕೆಟ್ ನೀಡುಲಾಗುತ್ತದೆ ಎಂಬುದನ್ನು ಪಾರ್ಲಿಮೆಂಟರಿ ಬೋರ್ಡ್ ನಿರ್ಧರಿಸಲಿದೆ. 2ಬಿ ಮೀಸಲಾತಿ ರದ್ದತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡಿದ್ದು ಅಸಂವಿಧಾನಿಕ. ಅದನ್ನು ತೆಗೆದು ಈಗ ಇಡಬ್ಲ್ಯೂಎಸ್​​ ಗೆ ಸೇರಿಸಲಾಗಿದೆ. ಈ ಹೊಸ ನಿಯಮದಲ್ಲಿ ಮುಸ್ಲಿಂ ಜನಾಂಗದವರಿಗೆ ಮತ್ತಷ್ಟು ಅವಕಾಶವಿರಲಿದೆ ಎಂದರು.

ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಎ ಟಿ ರಾಮಸ್ವಾಮಿ ರಾಜೀನಾಮೆ... ಜೆಡಿಎಸ್​ಗೂ ಗುಡ್​ ಬೈ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.