ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯತಿಯ ಹೇಮಗುಡ್ಡ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈತೋಟ ನಿರ್ಮಾಣ ಮಾಡಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದಂತಾಗಿದ್ದ ಕೂಲಿಕಾರಿಗಾಗಿಯೇ ಉದ್ಯೋಗ ಸೃಷ್ಟಿಸಿ, ಹತ್ತು ದಿನಗಳಲ್ಲಿ ಈ ಕೈತೋಟವನ್ನು ನಿರ್ಮಾಣ ಮಾಡಲಾಗಿದೆ. ಕೈತೋಟದಲ್ಲಿ ಈಗಾಗಲೇ ನಾನಾ ಬಗೆಯ ತರಕಾರಿ, ಸೊಪ್ಪುಗಳ ನಾಟಿ ಮಾಡಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಶಾಲೆಗಳು ಆರಂಭವಾಗಲಿದ್ದು, ಮಕ್ಕಳು ವಸತಿ ನಿಲಯಕ್ಕೆ ಬರುವ ಹೊತ್ತಿಗೆ ತಾಜಾ ಮತ್ತು ತರಕಾರಿ ಸಿಗಲಿ ಎಂಬ ಉದ್ದೇಶಕ್ಕೆ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಮೋಹನ್ ತಿಳಿಸಿದ್ದಾರೆ.