ETV Bharat / state

ಆನೆಗೊಂದಿ ನಿರ್ಮಾಣ ಹಂತದ ಸೇತುವೆ ಕುಸಿತ ಪ್ರಕರಣ: ಗುತ್ತಿಗೆದಾರನಿಗೆ ಶಿಕ್ಷೆ ವಿಧಿಸಿದ ಕೋರ್ಟ್​ - gangavati Bridge collapse case

2009ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ತಳವಾರ ಘಟ್ಟದಲ್ಲಿ ಸಂಭವಿಸಿದ್ದ ನಿರ್ಮಾಣ ಹಂತದ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕಾಮಗಾರಿಯ ಗುತ್ತಿಗೆದಾರನಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಆನೆಗೊಂದಿ ನಿರ್ಮಾಣ ಹಂತದ ಸೇತುವೆ ಕುಸಿತ
author img

By

Published : Nov 25, 2019, 9:25 PM IST

Updated : Nov 26, 2019, 1:35 AM IST

ಗಂಗಾವತಿ (ಕೊಪ್ಪಳ): 2009ರಲ್ಲಿ ಗಂಗಾವತಿ ತಾಲೂಕಿನ ಆನೆಗೊಂದಿಯ ತಳವಾರ ಘಟ್ಟದಲ್ಲಿ ನಡೆದಿದ್ದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜೆಎಂಎಫ್​ಸಿ ನ್ಯಾಯಾಲಯವು ಗುತ್ತಿಗೆದಾರನಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.

ಆನೆಗೊಂದಿ ನಿರ್ಮಾಣ ಹಂತದ ಸೇತುವೆ ಕುಸಿತ ದುರಂತ

2009ರಲ್ಲಿ ಗಂಗಾವತಿ-ಹೊಸಪೇಟೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಹಂತದಲ್ಲಿದ್ದಾಗ ಕುಸಿದು ಬಿದ್ದು 8 ಜನ ಸಾವಿಗೀಡಾಗಿದ್ದರು. ಈ ಸಂಬಂಧ ಹೈದರಾಬಾದ್ ಮೂಲದ ಪ್ರಧಾನ ಗುತ್ತಿಗೆದಾರ ಬಿ.ಎಸ್.ರೆಡ್ಡಿಗೆ 21.60 ಲಕ್ಷ ರೂಪಾಯಿ ದಂಡ ಹಾಗೂ ಸೂಪರ್ ವೈಸರ್ ಆಗಿದ್ದ ಪ್ರತಾಪ್ ರೆಡ್ಡಿಗೆ ದಂಡ ಹಾಗೂ ವಿವಿಧ ಐಪಿಸಿ ಕಲಂಗಳಡಿ ಪ್ರತ್ಯೇಕ ಜೈಲು ಶಿಕ್ಷೆ ವಿಧಿಸಲಾಗಿದೆ. ಅಂದರೆ ಬಿ.ಎಸ್.ರೆಡ್ಡಿಗೆ ಐಪಿಸಿ ಕಲಂ 336ರಡಿ 2 ತಿಂಗಳು, ಕಲಂ 337ರಡಿ 3 ತಿಂಗಳು, ಕಲಂ 338ರಡಿ 6 ತಿಂಗಳು ಹಾಗೂ ಕಲಂ 304(A)ರಡಿ 1 ವರ್ಷ ಆರು ತಿಂಗಳು ಸಜೆ ವಿಧಿಸಲಾಗಿದೆ. ಸೂಪರ್ ವೈಸರ್ ಪ್ರತಾಪ ರೆಡ್ಡಿಗೆ ಕಲಂ 336ರಡಿ ಎರಡು ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿದೆ.

ಘಟನೆಯಲ್ಲಿ ಸಾವನ್ನಪ್ಪಿದ 8 ಜನರ ಕುಟುಂಬಕ್ಕೆ ತಲಾ ಎರಡೂವರೆ ಲಕ್ಷ ರೂ. ಪರಿಹಾರ, ಗಂಭೀರವಾಗಿ ಗಾಯಗೊಂಡ ಮೂವರಿಗೆ ತಲಾ 25 ಸಾವಿರ ರೂ. ಹಾಗೂ ಸಾಧಾರಣ ಗಾಯಗೊಂಡ 34 ಜನರಿಗೆ ತಲಾ ಎರಡೂವರೆ ಸಾವಿರ ರೂ.ನಂತೆ ಪರಿಹಾರ ನೀಡುವ ಸಂಬಂಧ ಗುತ್ತಿಗೆದಾರರಿಗೆ ಒಟ್ಟು 21.60 ಲಕ್ಷ ರೂ. ದಂಡ ವಿಧಿಸಲಾಗಿದೆ.

ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶರಾ ಆರ್.ಎಂ.ನದಾಫ್ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕ ವಿಜಯೇಂದ್ರ ಪ್ರಭು ವಾದ ಮಂಡಿಸಿದ್ದರು.

Intro:ತಾಲ್ಲೂಕಿನ ಆನೆಗೊಂದಿಯ ತಳವಾರ ಘಟ್ಟದಲ್ಲಿ ನಿಮರ್ಾಣ ಹಂತದಲ್ಲಿದ್ದ ಗಂಗಾವತಿ- ಹೊಸಪೇಟೆ ಸಂಪರ್ಕ ಕಲ್ಪಿಸುವ ಸೇತುವೆ 2013ಲ್ಲಿ ಕುಸಿದು ಬಿದ್ದು 8 ಜನರ ಸಾವಿಗೆ ಗುತ್ತಿಗೆದಾರ ಕಾರಣ ಎಂದು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಸೋಮವಾರ ಗುತ್ತಿಗೆದಾರನಿಗೆ ಶಿಕ್ಷೆ ಪ್ರಕಟಿಸಿದೆ.
Body:
ಸೇತುವೆ ಕುಸಿತ; 8 ಜನರ ಸಾವಿಗೆ ಕಾರಣವಾದ ಗುತ್ತಿಗೆದಾರನಿಗೆ 21 ಲಕ್ಷ ದಂಡ
ಗಂಗಾವತಿ:
ತಾಲ್ಲೂಕಿನ ಆನೆಗೊಂದಿಯ ತಳವಾರ ಘಟ್ಟದಲ್ಲಿ ನಿಮರ್ಾಣ ಹಂತದಲ್ಲಿದ್ದ ಗಂಗಾವತಿ- ಹೊಸಪೇಟೆ ಸಂಪರ್ಕ ಕಲ್ಪಿಸುವ ಸೇತುವೆ 2013ಲ್ಲಿ ಕುಸಿದು ಬಿದ್ದು 8 ಜನರ ಸಾವಿಗೆ ಗುತ್ತಿಗೆದಾರ ಕಾರಣ ಎಂದು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಸೋಮವಾರ ಗುತ್ತಿಗೆದಾರನಿಗೆ ಶಿಕ್ಷೆ ಪ್ರಕಟಿಸಿದೆ.
ಹೈದರಾಬಾದ್ ಮೂಲದ ಪ್ರಧಾನ ಗುತ್ತಿಗೆದಾರ ಬಿ.ಎಸ್. ರೆಡ್ಡಿಗೆ 21.60 ಲಕ್ಷ ರೂಪಾಯಿ ದಂಡ ಹಾಗೂ ಸೂಪರ್ ವೈಸರ್ ಆಗಿದ್ದ ಪ್ರತಾಪ್ ರೆಡ್ಡಿಗೆ ತಲಾ 250 ರೂಪಾಯಿ ದಂಡ ಹಾಗೂ ವಿವಿಧ ಐಪಿಸಿ ಕಲಂಗಳಗೆ ಪ್ರತ್ಯೇಕ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.
ಸಾವನ್ನಪ್ಪಿದ ಎಂಟು ಜನರ ಕುಟುಂಬಕ್ಕೆ ತಲಾ ಎರುವರೆ ಲಕ್ಷ ನಗದು ಪರಿಹಾರ, ಗಂಭಿರವಾಗಿ ಗಾಯಗೊಂಡ ಮೂರು ಜನರಿಗೆ ತಲಾ 25 ಸಾವಿರ ಹಾಗೂ ಸಾಧಾರಣ ಗಾಯಗೊಂಡ 34 ಜನರಿಗೆ ತಲಾ ಎರುವರೆ ಸಾವಿರದಂತೆ ಒಟ್ಟು 21.60 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ. ನದಾಫ್ ತೀಪರ್ು ವಿಧಿಸಿದ್ದಾರೆ. ಸಕರ್ಾರದ ಪರವಾಗಿ ಸಕರ್ಾರರ ಸಹಾಯಕ ಅಭಿಯೋಜ ವಿಜಯೇಂದ್ರ ಪ್ರಭು ವಾದ ಮಂಡಿಸಿದ್ದರು Conclusion:ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ. ನದಾಫ್ ತೀಪರ್ು ವಿಧಿಸಿದ್ದಾರೆ. ಸಕರ್ಾರದ ಪರವಾಗಿ ಸಕರ್ಾರರ ಸಹಾಯಕ ಅಭಿಯೋಜ ವಿಜಯೇಂದ್ರ ಪ್ರಭು ವಾದ ಮಂಡಿಸಿದ್ದರು
Last Updated : Nov 26, 2019, 1:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.