ಕೊಪ್ಪಳ: ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಬೆಂಗಳೂರಿನ ಗುರುಕುಲದಲ್ಲಿ ಮೂರು ತಿಂಗಳ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ನಡ್ಜ್ ಲೈಫ್ ಸ್ಕಿಲ್ ಫೌಂಡೇಷನ್ನ ವಿನಾಯಕ ಅರಸ್ ಮನವಿ ಮಾಡಿದ್ದಾರೆ.
ನಮ್ಮ ಗುರುಕುಲ ಬಡತನ ನಿರ್ಮೂಲನೆ ಹಾಗೂ ಉದ್ಯೋಗ ಸೃಷ್ಠಿಯ ಪ್ರಯೋಗ ಶಾಲೆಯಾಗಿದ್ದು, 2015ರಿಂದ ಇಲ್ಲಿಯವರೆಗೆ 5 ಸಾವಿರ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿದೆ. ಈ ಪೈಕಿ ಸುಮಾರು ನಾಲ್ಕೂವರೆ ಸಾವಿರದಷ್ಟು ಯುವಕ/ಯುವತಿಯರು ಬೇರೆ ಬೇರೆ ಕಡೆ ಉದ್ಯೋಗದಲ್ಲಿದ್ದಾರೆ. ಬಡತನ ನಿರ್ಮೂಲನೆ ಧ್ಯೇಯದೊಂದಿಗೆ ವ್ಯಕ್ತಿತ್ವ ವಿಕಸನ, ಕುಟುಂಬ ನಿರ್ವಹಣೆ ಸೇರಿದಂತೆ ವೃತ್ತಿ ಕೌಶಲ್ಯಗಳಾದ ಎಲೆಕ್ಟ್ರಿಷಿಯನ್, ಪ್ಲಂಬಿಂಗ್, ಬ್ಯೂಟಿಷಿಯನ್ ತರಬೇತಿ ನೀಡಲಾಗುತ್ತದೆ ಎಂದರು.
ಮೂರು ತಿಂಗಳ ಈ ತರಬೇತಿಗೆ ಕೇವಲ 500 ರೂಪಾಯಿ ಮಾತ್ರ ಶುಲ್ಕ ಪಡೆಯಲಾಗುತ್ತದೆ. ಉಚಿತ ಊಟ, ವಸತಿಯೊಂದಿಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕೇಶವ 8861882431 ಅಥವಾ ಯಾಸಿನ್ 6366345902 ಅವರನ್ನು ಸಂಪರ್ಕಿಸುವಂತೆ ವಿನಾಯಕ ಅರಸ್ ಮನವಿ ಮಾಡಿದರು.