ಕೊಪ್ಪಳ: ಕಳೆದ ವರ್ಷ ಇದೇ ದಿನ ಅಂದರೆ 2019ರ ಆಗಸ್ಟ್ 12 ರಂದು ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹಕ್ಕೆ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ನೂರಾರು ಪ್ರವಾಸಿಗರು ಸಿಲುಕಿಕೊಂಡಿದ್ದರು. ಅಂದಿನ ಆ ಭಯಾನಕವಾದ ಘಟನೆ ನಡೆದು ಇಂದಿಗೆ 1 ವರ್ಷ. ಹಾಗಾದ್ರೆ ಈಗ ಹೇಗಿದೆ ಆ ಸ್ಥಳ ನೋಡೊಣ.
2019, ಆಗಸ್ಟ್ 12 ರಂದು ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 221067 ಕ್ಯೂಸೆಕ್ ನೀರನ್ನು ಹರಿಬಿಡಲಾಗಿತ್ತು. ಇದರಿಂದ ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಭೀತಿಯುಂಟಾಗಿತ್ತು. ಅಲ್ಲದೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ನೂರಾರು ಪ್ರವಾಸಿಗರು ಸಿಲುಕಿಕೊಂಡಿದ್ದರು. ಹೀಗಾಗಿ ಅವರನ್ನು ಸ್ಥಳಾಂತರಿಸುವ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿತ್ತು. ಪ್ರವಾಸಿಗರ ರಕ್ಷಣೆ ಕಾರ್ಯಕ್ಕೆ ಎನ್ಡಿಆರ್ಎಫ್ ತಂಡ, ಸಿವಿಲ್ ಡಿಫೆನ್ಸ್ ಸಿಬ್ಬಂದಿ ಸೇರಿದಂತೆ ಜಿಲ್ಲಾಡಳಿತ ಸಾಕಷ್ಟು ಶ್ರಮಿಸಿತ್ತು. ಈ ಸಂದರ್ಭ ರಕ್ಷಣಾ ತಂಡದ ಐದು ಜನರಿದ್ದ ಒಂದು ಬೋಟ್ ಮಗುಚಿ ಬಿದ್ದಿತ್ತು. ಹೀಗೆ ನೀರುಪಾಲಾಗುತ್ತಿದ್ದವರನ್ನು ಸೇನಾ ಹೆಲಿಕಾಫ್ಟರ್ ಮೂಲಕ ರಕ್ಷಿಸಲಾಗಿತ್ತು.
ಹೌದು ಆ ಮೈ ನಡುಗಿಸುವ ಘಟನೆ ನಡೆದು ಇಂದಿಗೆ ಒಂದು ವರ್ಷವಾಗಿದೆ. ಘಟನೆ ಸಂಬಂಧ ಜಿಲ್ಲಾಡಳಿತ ಕೈಗೊಂಡ ಮಹತ್ವದ ನಿರ್ಧಾರ ಪರಿಗಣನೀಯ. ಅಂದು ಪ್ರವಾಹ ಉಂಟಾಗಿದ್ದ ಸ್ಥಳ ಹೇಗಿದೆ? ಜಿಲ್ಲಾಡಳಿತ ತೆಗೆದುಕೊಂಡ ಆ ಘಟ್ಟಿ ನಿರ್ಧಾರವೇನು ಎಂಬುದರ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.