ಕೊಪ್ಪಳ: ತಾಲೂಕಿನ ಯಲಂಗೇರಿ ಗ್ರಾಮದಲ್ಲಿ ಮನೆ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಪಿ. ಸುನೀಲ್‍ಕುಮಾರ್ ಈ ಕುರಿತಾಗಿ ಕೊಪ್ಪಳ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ. ಸಿಆರ್‍ಎಫ್ ನಿಧಿಯಲ್ಲಿ ಪರಿಹಾರ ನೀಡುವಂತೆ ಹೇಳಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ತಲಾ ಐದು ಲಕ್ಷ ರೂಪಾಯಿಯಂತೆ, ಒಟ್ಟು 15 ಲಕ್ಷ ರೂ. ನೇರವಾಗಿ ಮೃತರ ಕುಟುಂಬಸ್ಥರಿಗೆ ಪರಿಹಾರವಾಗಿ ನೀಡಲು ಆದೇಶದಲ್ಲಿ ಸೂಚಿಸಿದ್ದಾರೆ.
ಇನ್ನು, ಯಲಂಗೇರಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮನೆ ಮಾಳಿಗೆ ಕುಸಿದು ಬಿದ್ದು, ಒಂದೇ ಮನೆಯಲ್ಲಿ ಸುಜಾತ,ಅಮರೇಶ ಹಾಗೂ ಗವಿಸಿದ್ದಪ್ಪ ಎಂಬ ಮೂವರು ಮಕ್ಕಳು ಸಾವನ್ನಪ್ಪಿದ್ದರು.