ಗಂಗಾವತಿ (ಕೊಪ್ಪಳ): ಹೊಟ್ಟೆಪಾಡಿಗೆ ಗುಳೆಹೋಗಿ ಇದೀಗ ಲಾಕ್ಡೌನ್ ಸಡಿಲಿಕೆ ಬಳಿಕ ಗೂಡು ಸೇರಿಕೊಂಡಿರುವ ಕಾರ್ಮಿಕರಿಗಾಗಿ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡಲಾಗಿತ್ತು. ಇದೀಗ ಈ ಯೋಜನೆಯಡಿ ಮಂಗಳಮುಖಿಯರಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ. ನರೇಗಾದ ಮೂಲಕ ಮಂಗಳಮುಖಿಯರನ್ನು ಮುಖ್ಯ ವಾಹನಿಗೆ ತರುವ ಯತ್ನ ನಡೆದಿದೆ.
ಕೇವಲ ಭಿಕ್ಷಾಟನೆ ಮತ್ತು ಲೈಂಗಿಕ ಅಲ್ಪಸಂಖ್ಯಾತರಾಗಿರುವ ಬಹುತೇಕ ಮಂಗಳಮುಖಿಯರಿಗೆ ನರೇಗಾದಲ್ಲಿ ಕೂಲಿಕೆಲಸ ನೀಡುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ.
ಕೂಲಿ ಮಾಡಿ ಸ್ವಾಭಿಮಾನದ ಜೀವನ ಕಟ್ಟಿಕೊಳ್ಳುವಂತ ಪರಿಸರ ನಿರ್ಮಿಸಿ ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಆಶಯ ಸರ್ಕಾರದ್ದು ಎಂದು ಈ ಕೆಲಸದ ನೇತೃತ್ವ ವಹಿಸಿದ್ದ ತಾಲೂಕು ಪಂಚಾಯತ್ ಇಒ ಡಾ. ಡಿ. ಮೋಹನ್ ಹೇಳಿದರು.