ಗಂಗಾವತಿ (ಕೊಪ್ಪಳ): ಖಾಸಗಿ ಆಸ್ತಿಯ ವಿವಾದ ಪ್ರಕರಣದಲ್ಲಿ ಅನಗತ್ಯವಾಗಿ ತಹಶೀಲ್ದಾರ್ ಮಧ್ಯ ಪ್ರವೇಶಿಸಿ, ತೊಂದರೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬರು ತಹಶೀಲ್ದಾರ್ ಅವರಿಗೆ ಏರು ಧ್ವನಿಯಲ್ಲಿ ಅವಾಜ್ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಕುಟುಂಬಕ್ಕೆ ಸೇರಿದ ಮಹಿಳೆ ಗಂಗಾವತಿಯ ತಹಶೀಲ್ದಾರ್ ಯು. ನಾಗರಾಜ್ ಅವರಿಗೆ ಅವಾಜ್ ಹಾಕಿದ್ದಾರೆ.
ರಾಣಾಪ್ರತಾಪ್ ಸಿಂಗ್ ವೃತ್ತದಲ್ಲಿರುವ ರಾಯಚೂರಿನ ಶಿವಯ್ಯ ಎಂಬುವವರಿಗೆ ಸೇರಿದ ಆಸ್ತಿ ವಿಚಾರದಲ್ಲಿ ವಾರಸುದಾರರ ಮಧ್ಯೆ ವಿವಾದವಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಮಧ್ಯೆ ಪ್ರಭಾವಿ ಸಚಿವರೊಬ್ಬರು ಆಸ್ತಿಯನ್ನು ಖರೀದಿಸಿದ್ದಾರೆ ಎನ್ನಲಾಗ್ತಿದೆ.
ಖರೀದಿಸಿದ ನಿವೇಶನದಲ್ಲಿ ಸ್ವಚ್ಛತೆ ಕೈಗೊಳ್ಳಲು ಬಳ್ಳಾರಿಯಿಂದ ಸುಮಾರು 20ಕ್ಕೂ ಹೆಚ್ಚು ಜನರು ಬಂದಿದ್ದರು. ಇದಕ್ಕೆ ಶಿವಯ್ಯನವರ ಕುಟುಂಬದ ಕೆಲವರು ವಿರೋಧಿಸಿದ್ದಾರೆ. ಹೀಗಾಗಿ ಮಧ್ಯೆ ಪ್ರವೇಶಿಸಿದ ತಹಶೀಲ್ದಾರ್, ಪೊಲೀಸರನ್ನು ನಿಯೋಜಿಸಿ ಸ್ವಚ್ಛತೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ತಹಶೀಲ್ದಾರ್ ಮೊದಲು ತಮಗೆ ನೋಟಿಸ್ ಕೊಡಬೇಕಿತ್ತು. ಯಾವುದೇ ಮುನ್ಸೂಚನೆ ಇಲ್ಲದೆ ಸ್ಥಳಕ್ಕೆ ಬಂದಿದ್ದಾರೆ ಎಂದು ಆರೋಪಿಸಿ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ ರಸ್ತೆ ಅಪಘಾತ.. ಅಗಲಿದ ತಾಯಿ, ಅನಾಥರಾದ ಮೂವರು ಮಕ್ಕಳು