ETV Bharat / state

'ನಿಮಗೆ ಅಗತ್ಯವಿಲ್ಲದಿದ್ದರೆ ಇಲ್ಲಿ ಇಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ': ಕೊಪ್ಪಳದಲ್ಲಿದೆ ಕರುಣೆಯ ಗೋಡೆ - 'ಕರುಣೆಯ ಗೋಡೆ' ಎಂಬ ಹೆಸರಿನ ಪೆಟ್ಟಿಗೆ

'ನಿಮಗೆ ಅಗತ್ಯವಿಲ್ಲದಿದ್ದರೆ ಇಲ್ಲಿ ಇಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ' ಈ ಬರಹವಿರುವ ಸಣ್ಣ ಪೆಟ್ಟಿಗೆಯೊಂದು ಗಮನ ಸೆಳೆಯುತ್ತಿದೆ.

The wall of kindness is in Koppal
ಕೊಪ್ಪಳದಲ್ಲಿದೆ ಕರುಣೆಯ ಗೋಡೆ
author img

By

Published : Dec 19, 2019, 7:05 PM IST

ಕೊಪ್ಪಳ: 'ನಿಮಗೆ ಅಗತ್ಯವಿಲ್ಲದಿದ್ದರೆ ಇಲ್ಲಿ ಇಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ', ಈ ಬರಹವಿರುವ ಸಣ್ಣ ಪೆಟ್ಟಿಗೆಯೊಂದು ನಗರದ ಸಿಂಪಿ ಲಿಂಗಣ್ಣ ರಸ್ತೆಯಲ್ಲಿ ಗಮನ ಸೆಳೆಯುತ್ತಿದೆ. 'ಕರುಣೆಯ ಗೋಡೆ' ಎಂಬ ಹೆಸರಿನ ಈ ಪೆಟ್ಟಿಗೆಯಲ್ಲಿ ಅಗತ್ಯವಿಲ್ಲದ ವಸ್ತುಗಳನ್ನಿಟ್ಟು ಹೋದರೆ, ಅದನ್ನು ಅಗತ್ಯವಿರುವವರು ತೆಗೆದುಕೊಂಡು ಹೋಗಿ ಉಪಯೋಗಿಸುತ್ತಾರೆ. ಈ ಮೂಲಕ ಸಹಾಯ ಮಾಡಲು ಅನುಕೂಲ ಮಾಡಿಕೊಡುತ್ತಿದೆ ಈ ಕರುಣೆಯ ಗೋಡೆ.

ಬಡವರಿಗೆ ಇದರಿಂದ ನೆರವಾಗುತ್ತದೆ ಎಂಬ ಉದ್ದೇಶದಿಂದ, ಯೂರೋಪ್ ಟೈಲರ್ ಶಾಪ್ ಮಾಲೀಕ ಅಯೂಬ್ ಹಾಗೂ ಸ್ನೇಹಿತರು ಸೇರಿಕೊಂಡು ಇದನ್ನು ಮಾಡಿಸಿಟ್ಟಿದ್ದಾರೆ. ಜನರು ತಾವು ಉಪಯೋಗಿಸಿದ ಅಥವಾ ಉಪಯೋಗಿಸದೇ ಇರುವ ಅಗತ್ಯವಿರದ ಬಟ್ಟೆಗಳು, ಪುಸ್ತಕಗಳು, ಮಕ್ಕಳ ಆಟಿಕೆಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಬಿಸಾಡದೆ ಈ ಕರುಣೆಯ ಗೋಡೆಯಲ್ಲಿ ತಂದಿಟ್ಟರೆ ಅದನ್ನು ಅಗತ್ಯವಿರುವ ಬಡವರು ತೆಗೆದುಕೊಂಡು ಹೋಗಿ ಬಳಸ್ತಾರೆ.

ಕೊಪ್ಪಳದಲ್ಲಿದೆ ಕರುಣೆಯ ಗೋಡೆ

ಸುಮಾರು ಎರಡು ತಿಂಗಳ ಹಿಂದೆ ಪ್ರಾರಂಭಿಸಲಾಗಿರುವ ಕರುಣೆಯ ಗೋಡೆಯಲ್ಲಿ, ಅನೇಕರು ತಮಗೆ ಅಗತ್ಯವೆನಿಸದ ವಸ್ತುಗಳನ್ನು ತಂದಿಟ್ಟು ಹೋಗುತ್ತಿದ್ದಾರೆ. ಅಗತ್ಯವಿರದ ವಸ್ತುಗಳನ್ನು ಎಲ್ಲೆಂದರಲ್ಲಿ ಸುಮ್ಮನೆ ಬಿಸಾಡುವ ಬದಲು, ಇಲ್ಲಿ ತಂದಿಟ್ಟರೆ ಅಗತ್ಯವಿರುವವರು ಬಳಸಿಕೊಳ್ಳುತ್ತಾರೆ ಎಂಬ ಉದ್ದೇಶ ಸಾರ್ಥಕ ಪಡೆಯುತ್ತಿದೆ.

Intro:

Body:ಕೊಪ್ಪಳ:- ''ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನು ಇಲ್ಲಿ ಇಡಿ, ಅಲ್ಲಿ ಇರುವುದರಲ್ಲಿ ನಿಮಗೆ ಅಗತ್ಯವಾದ ವಸ್ತುವನ್ನು ತೆಗೆದುಕೊಂಡು ಹೋಗಿ''....
ಕನ್ಫ್ಯೂಸ್ ಆಗಬೇಡಿ. ಇದು ಯಾವದೋ ಎಕ್ಸ್ಚೇಂಜ್ ಆಫರ್ ಅಲ್ಲ. ಇಂತಹ ಬರಹವಿರುವ ಸಣ್ಣ ಪಟ್ಟೆಗೆಯೊಂದು ಗಮನ ಸೆಳೆಯುತ್ತಿದೆ. ಇದು ಕೊಪ್ಪಳದಲ್ಲಿರುವ ಕರುಣೆಯ ಗೋಡೆ. ಇಂತಹ ಬರಹ ವಿರುವ ಈ ಪೆಟ್ಟಿಗೆ ಇರೋದು ಕೊಪ್ಪಳ‌ ನಗರದ ಸಿಂಪಿ ಲಿಂಗಣ್ಣ ರಸ್ತೆಯಲ್ಲಿ. "ಕರುಣೆಯ ಗೋಡೆ" ಎಂಬ ಹೆಸರಿನ ಈ ಪೆಟ್ಟಿಗೆಯಲ್ಲಿ ಅಗತ್ಯವಿಲ್ಲದ ವಸ್ತುಗಳನ್ನು ಪೆಟ್ಟಿಗೆಯಲ್ಲಿಟ್ಟು ಹೋದರೆ ಅದನ್ನು ಅಗತ್ಯವಿರುವವರು ತೆಗೆದುಕೊಂಡು ಹೋಗಿ ಉಪಯೋಗಿಸುತ್ತಾರೆ. ಈ ಮೂಲಕ ಸಹಾಯ ಮಾಡಲು ಅನುಕೂಲ ಮಾಡಿಕೊಡುತ್ತಿದೆ ಈ ಕರುಣೆಯ ಗೋಡೆ. ಯೂರೋಪ್ ಟೈಲರ್ ಶಾಪ್ ಮಾಲೀಕ ಅಯೂಬ್ ಹಾಗೂ ಸ್ನೇಹಿತರು ಸೇರಿಕೊಂಡು ಸುಮಾರು 20 ಸಾವಿರ ರುಪಾಯಿ ಖರ್ಚು ಮಾಡಿ ಈ ಕರಯಣೆಯ ಗೋಡೆಯನ್ನು ಮಾಡಿಸಿಟ್ಟಿದ್ದಾರೆ. ಬಡವರಿಗೆ ಇದರಿಂದ ನೆರವಾಗುತ್ತದೆ ಎಂಬ ಸದುದ್ದೇಶದಿಂದ. ಜನರು ತಾವು ಉಪಯೋಗಿಸಿದ ಅಥವಾ ಉಪಯೋಗಿಸದೆ ಇರುವ ಅಗತ್ಯವಿರದ ಬಟ್ಟೆಗಳು, ಪುಸ್ತಕಗಳು, ಮಕ್ಕಳ ಆಟಿಕೆಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಬಿಸಾಡದೆ ಈ ಕರುಣೆಯ ಗೋಡೆಯಲ್ಲಿ ತಂದಿಟ್ಟರೆ ಅದನ್ನು ಅಗತ್ಯ ವಿರುವ ಬಡವರು ತೆಗೆದುಕೊಂಡು ಹೋಗುತ್ತಾರೆ. ಸುಮಾರು ಎರಡು ತಿಂಗಳ ಹಿಂದೆ ಪ್ರಾರಂಭಿಸಲಾಗಿರುವ ಈ ಕರುಣೆಯ ಗೋಡೆಯಲಿ ಅನೇಕರು ತಮಗೆ ಅಗತ್ಯವೆನಿಸದ ವಸ್ತುಗಳನ್ನು ತಂದಿಟ್ಟು ಹೋಗುತ್ತಿದ್ದಾರೆ. ಕೆಲವರು ಊಟವನ್ನು ಇದರಲ್ಲಿ ಇಟ್ಟು ಹೋಗುತ್ತಿದ್ದು ಅಗತ್ಯವಿರುವವರು ಅಲ್ಲಿನ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಒಟ್ಟಾರೆಯಾಗಿ ಅಗತ್ಯವಿರದ ವಸ್ತುಗಳನ್ನು ಎಲ್ಲೆಂದರಲ್ಲಿ ಸುಮ್ಮನೆ ಬಿಸಾಡುವ ಬದಲು ಇಲ್ಲಿ ತಂದು ಇಟ್ಟರೆ ಅಗತ್ಯವಿರುವವರು ಬಳಸಿಕೊಳ್ತಾರಲ್ಲ ಅದೇ ಸಾರ್ಥಕತೆ ಎಂಬ ಭಾವ ಜನರಲ್ಲಿ ಮೂಡುತ್ತಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.