ETV Bharat / state

18 ಶಂಕಿತರ ವರದಿ ನೆಗೆಟಿವ್.. ಕುಣಿದು ಕುಪ್ಪಳಿಸಿದ ಕುಷ್ಟಗಿಯ ನಿಲೋಗಲ್ ಗ್ರಾಮದ‌ ಜನರು.. - ನಿಲೋಗಲ್​ನ 18 ಜನರ ಕೊರೊನಾ ಲ್ಯಾಬ್ ರಿಪೋರ್ಟ್​

ಬಹುತೇಕ ಜನರಲ್ಲಿ ನಿಲೋಗಲ್ ಶಂಕಿತರು, ಸೋಂಕಿತರಾದರೆ? ಕೊಪ್ಪಳ ಜಿಲ್ಲೆ ಗ್ರೀನ್ ಝೋನ್​ನಿಂದ ಕೈ ತಪ್ಪುವ ಆತಂಕವಿತ್ತು. ಜೊತೆಗೆ ಈ ಗ್ರಾಮ ಅಪಖ್ಯಾತಿಗೆ ಗುರಿಯಾಗುವ ಸಾಧ್ಯತೆಗಳಿದ್ದವು.

The report of the corona suspects is negative at koppala
ಶಂಕಿತರ ವರದಿ ನೆಗೆಟಿವ್
author img

By

Published : May 10, 2020, 8:20 PM IST

ಕುಷ್ಟಗಿ(ಕೊಪ್ಪಳ) : ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಢಾಣಕಶಿರೂರು ಗ್ರಾಮದ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ನಿಲೋಗಲ್​ನ 18 ಜನರ ಕೊರೊನಾ ಲ್ಯಾಬ್ ರಿಪೋರ್ಟ್​ ನೆಗೆಟಿವ್​​​ ಎಂದು ಬಂದಿದೆ.

ಈ 18 ಜನರ ಕೊರೊನಾ ವರದಿ ತಾಂತ್ರಿಕ ಸಮಸ್ಯೆಯಿಂದಾಗಿ ಎರಡು ದಿನ ವಿಳಂಬವಾದ ಹಿನ್ನೆಲೆ ಮುಂದೆ ಏನಾಗಲಿದೆಯೋ ಎನ್ನುವ ಆತಂಕದ ಕಾರ್ಮೋಡ ಜಿಲ್ಲಾಡಳಿತ ಪ್ರಕಟಿಸಿದ ವರದಿಯಿಂದ ಕೋಲ್ಮಿಂಚಿನಂತೆ ಮಾಯವಾಗಿದೆ.

ಈ ಕುರಿತು ಮಾತನಾಡಿದ ಗ್ರಾಮದ ಮಹಾಂತೇಶ ಶೆಟ್ಟರ್, 18 ಜನರ ಕೊರೊನಾ ಲ್ಯಾಬ್ ರಿಪೋರ್ಟ್​ ನೆಗಟಿವ್​​ ಬಂದಿದೆ. ಇದಕ್ಕಿಂತ ಸಂತೋಷದ ಸಂಗತಿ ಇನ್ನೇನಿದೆ. ಒಂದು ವೇಳೆ ಒಂದೇ ಒಂದು ಪಾಸಿಟಿವ್​​​ ಬಂದಿದ್ದರೂ ಇಡೀ ಗ್ರಾಮ ಸೀಲ್​ಡೌನ್​ ಆಗಿ, ಕುಷ್ಟಗಿ ತಾಲೂಕು ಲಾಕ್​ಡೌನ್​ ಆಗುವ ಸಾಧ್ಯತೆ ಇತ್ತು. ಆದಾಗ್ಯೂ ಈ ವರದಿ ಗ್ರಾಮಸ್ಥರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಹೀಗಾಗಿ ಗ್ರಾಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್​ ಧರಿಸುವುದು ಕಟ್ಟು ನಿಟ್ಟಾಗಿ ಪಾಲಿಸುವ ಕುರಿತು ಸ್ವಯಂ ಪ್ರೇರಿತರಾಗಿದ್ದಾರೆಂದರು.

ಬಹುತೇಕ ಜನರಲ್ಲಿ ನಿಲೋಗಲ್ ಶಂಕಿತರು, ಸೋಂಕಿತರಾದರೆ? ಕೊಪ್ಪಳ ಜಿಲ್ಲೆ ಗ್ರೀನ್ ಝೋನ್​ನಿಂದ ಕೈ ತಪ್ಪುವ ಆತಂಕವಿತ್ತು. ಜೊತೆಗೆ ಈ ಗ್ರಾಮ ಅಪಖ್ಯಾತಿಗೆ ಗುರಿಯಾಗುವ ಸಾಧ್ಯತೆಗಳಿದ್ದವು. ಇದೀಗ ಕೊರೊನಾ ಲ್ಯಾಬ್ ರಿಪೋರ್ಟ್​ ವರದಿ ಖುಷಿ ತಂದಿದೆ ಎಂದು ಗ್ರಾಪಂ ಅಧ್ಯಕ್ಷ ಯಮನಪ್ಪ ಗಾಜಿ ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.