ಗಂಗಾವತಿ (ಕೊಪ್ಪಳ): ಜಿಲ್ಲೆಯಲ್ಲಿ ಮೇ 12 ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ಮುನ್ಸೂಚನೆ ನೀಡಿದೆ.
ಸೋಮವಾರ (ಮೇ.10) ರಂದು ಕುಷ್ಟಗಿ ಹಾಗೂ ಯಲಬುರ್ಗಾದಲ್ಲಿ ಒಂದು ಮಿಲಿ ಮೀಟರ್ನಷ್ಟು ಮಳೆಯಾಗುವ ಸಾಧ್ಯತೆ ಇದೆ. ಮೇ. 11 ರಂದು ಗಂಗಾವತಿಯಲ್ಲಿ 0.5, ಕೊಪ್ಪಳದಲ್ಲಿ 6.1, ಕುಷ್ಟಗಿ 12.6 ಹಾಗೂ ಯಲಬುರ್ಗಾದಲ್ಲಿ 16.1 ಮಿ.ಮೀ ಮಳೆಯಾಗುವ ಸಂಭವವಿದೆ.
ಇದನ್ನೂ ಓದಿ: ಆನೇಕಲ್: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಅದಲು-ಬದಲಾದ ಕೊರೊನಾ ಸೋಂಕಿತನ ಶವ
ಮೇ.12ರಂದು ಗಂಗಾವತಿಯಲ್ಲಿ 0.6, ಕೊಪ್ಪಳದಲ್ಲಿ 3.7, ಕುಷ್ಟಗಿಯಲ್ಲಿ 2.4 ಹಾಗೂ ಯಲಬುರ್ಗಾದಲ್ಲಿ 1.2 ಮಿ.ಮೀ ಮಳೆಯಾಗಬಹುದು. ಐದು ದಿನಗಳ ಕಾಲ ಮೋಡಕವಿದ ವಾತಾವರಣ ಇರಲಿದೆ. ಮಿಂಚು, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಘಟಕ ಮಾಹಿತಿ ನೀಡಿದೆ.