ETV Bharat / state

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ: ಸಚಿವ ಜಗದೀಶ್​ ಶೆಟ್ಟರ್​​ ಪ್ರತಿಕ್ರಿಯೆ ಏನು?

author img

By

Published : Oct 21, 2019, 4:39 PM IST

Updated : Oct 21, 2019, 6:05 PM IST

ಇಂದು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಹಾಗೂ ಈ ಕುರಿತು ಸಭೆ ನಡೆಸುತ್ತೇನೆ ಎಂದು ಸಚಿವ ಜಗದೀಶ್​​ ಶೆಟ್ಟರ್​ ತಿಳಿಸಿದ್ದಾರೆ. ಇನ್ನು, ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಒಂದು ಬಾರಿ ಇತಿಹಾಸವನ್ನು ಓದಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ಸಚಿವ ಜಗದೀಶ್​ ಶೆಟ್ಟರ್​​

ಕೊಪ್ಪಳ: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇಂದು ಸಂಭವಿಸಿದ ಸ್ಫೋಟ ಪ್ರಕರಣದ ಬಗ್ಗೆ ಅಧಿಕಾರಿಗಳೊಂದಿಗೆ ಇನ್ನೂ ನಾನು ಮಾತನಾಡಿಲ್ಲ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಚಿವ ಜಗದೀಶ್​ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ನಾನು ಸಹ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು. ಈಗಾಗಲೇ ಬಾಂಗ್ಲಾ ವಲಸಿಗರ ಬಗ್ಗೆ ನಾವು ಸದನದಲ್ಲಿ ಮಾತಾಡಿದ್ದೇವೆ. ಅಕ್ರಮವಾಗಿ ಬಾಂಗ್ಲಾ ನುಸುಳುಕೋರರು ಬಂದು ರಾಜ್ಯದಲ್ಲಿ ನೆಲೆಸಿದ್ದಾರೆ ಎಂದು ಸಹ ಹೇಳಿದ್ದೆವು. ಆದರೆ ಆಗ ಪರಮೇಶ್ವರ್ ಇದರ ಬಗ್ಗೆ ಗಂಭೀರವಾಗಿ ಆಗಿ ಯೋಚನೆ ಮಾಡಿರಲಿಲ್ಲ. ಈಗ ಅದರ ಪರಿಣಾಮ ಎದುರಿಸುತ್ತಿದ್ದೇವೆ ಎಂದರು.

ಸಚಿವ ಜಗದೀಶ್​ ಶೆಟ್ಟರ್​​

ಇನ್ನು, ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶೆಟ್ಟರ್​ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಅವರು ಸಾವರ್ಕರ್ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ನಾಳೆ ಟಿಪ್ಪು ಸುಲ್ತಾನ್ ಗೆ ಭಾರತ ರತ್ನ ಕೊಡಿ ಅಂತಾರೆ. ಟಿಪ್ಪು ಸುಲ್ತಾನ್​​ ಜಯಂತಿ ಆಚರಣೆ ಯಾರಿಗೂ ಇಷ್ಟವಿರಲಿಲ್ಲ. ವೋಟ್ ಬ್ಯಾಂಕ್​​ಗಾಗಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ ಎಂದು ಟೀಕಿಸಿದರು.

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಎಲ್ಲರೂ ಒತ್ತಾಯಿಸೋಣ. ಹಿಂದೆ ಯುಪಿಎ ಸರ್ಕಾರವಿದ್ದಾಗ ಕಾಂಗ್ರೆಸ್ ನವರು ಮಲಗಿಕೊಂಡಿದ್ರಾ ಎಂದು ಕಿಡಿಕಾರಿದರು. ಸಾವರ್ಕರ್ ಅವರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿ. ಅಂತಹ ಮಹನೀಯ ವ್ಯಕ್ತಿ ಬಗ್ಗೆ ಕೀಳಾಗಿ ಮಾತಾನಾಡಲು ನಿಮಗೆ ನಾಚಿಕೆ ಇಲ್ವಾ ಎಂದು ಶೆಟ್ಟರ್​ ಗುಡುಗಿದರು. ಅಲ್ಲದೆ ಸಿದ್ದರಾಮಯ್ಯ ಮೊದಲು ಇತಿಹಾಸ ತಿಳಿದುಕೊಳ್ಳಲಿ ಎಂದು ಕುಟುಕಿದರು.

Intro:Body:ಕೊಪ್ಪಳ:- ಹುಬ್ಬಳ್ಳಿ ರೇಲ್ವೆ ನಿಲ್ದಾಣದಲ್ಲಿ ಇಂದು ನಡೆದ ಸ್ಪೋಟ ಪ್ರಕರಣದ ಬಗ್ಗೆ ಇನ್ನೂ ಅಧಿಕಾರಿಗಳೊಂದಿಗೆ ಮಾತನಾಡಿಲ್ಲ. ಅಧಿಕಾರಿಳೊಂದಿಗೆ ಮಾತನಾಡುತ್ತೇನೆ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಸಚುವ ಜಗದೀಶ ಶೆಟ್ಟರ್ ಅವರು, ಈ‌ ಪ್ರಕರಣದ ಬಗ್ಗೆ ನಾನು ಇನ್ನು ಅಧಿಕಾರಿಗಳೊಂದಿಗೆ ಮಾತನಾಡಿಲ್ಲ. ಪ್ರಕರಣದ ಬಗ್ಗೆ ಅಧಿಕಾರಿಗಳು ತನಿಖೆ ಮಾಡ್ತಾರೆ.
ನನಗೆ ಮಾಹಿತಿ ಇದೆ. ಅಧಿಕಾರಿಗಳು ಕ್ರಮ ಕೈಗೊಳ್ತಾರೆ. ನಾನಿನ್ನು ಅಧಿಕಾರಿಗಳೊಂದಿಗೆ ಮಾತನಾಡಿಲ್ಲ ಎಂದರು. ಬಾಂಗ್ಲಾ ವಲಸಿಗರ ಬಗ್ಗೆ ನಾವು ಸದನದಲ್ಲಿ ಮಾತಾಡಿದ್ದೇವೆ. ಅಕ್ರಮವಾಗಿ ಬಾಂಗ್ಲಾನು ಸುಳುಕೋರರಿದ್ದಾರೆ ಎಂದು ಮಾತಾಡಿದ್ದೇವೆ. ಆದರೆ ಆಗ ಪರಮೇಶ್ವರ್ ಅದರ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡಲಿಲ್ಲ. ಈಗ ಅದರ ಪರಿಣಾಮ ಎದುರಿಸುತ್ತಿದ್ದೇವೆ. ಇನ್ನು ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿದ್ದರಾಮಯ್ಯ, ಕೃಷ್ಣ ಭೈರೇಗೌಡ ಸಾವರ್ಕರ್ ಬಗ್ಗೆ ಕೀಳಾಗಿ ಮಾತಾಡ್ತಿದಾರೆ. ಸಿದ್ದರಾಮಯ್ಯ ನಾಳೆ ಟಿಪ್ಪು ಸುಲ್ತಾನ್ ಗೆ ಭಾರತ ರತ್ನ ಕೊಡಿ ಅಂತಾರೆ. ಟಿಪ್ಪು ಸುಲ್ತಾನ ಜಯಂತಿ ಆಚರಣೆ ಯಾರಿಗೂ ಇಷ್ಟವಿರಲಿಲ್ಲ. ವೋಟ್ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ. ಸಿದ್ದರಾಮಯ್ಯ ನಾಳೆ ಟಿಪ್ಪುಗೂ ಭಾರತ ರತ್ನ ಕೊಡಿ ಅಂತಾರೆ ಎಂದು ಟೀಕಿಸಿದರು. ಇನ್ನು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಎಲ್ಲರೂ ಪ್ರಯತ್ನ ಮಾಡೋಣ. ಹಿಂದೆ ಯುಪಿಎ ಸರ್ಕಾರವಿದ್ದಾಗ ಕಾಂಗ್ರೆಸ್ ನವರು ಮಲಗಿಕೊಂಡಿದ್ರಾ ಎಂದರು. ಸಾವರ್ಕರ್ ಅವರು ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿ. ಅಂತಹ ಸಾವರ್ಕರ್ ಬಗ್ಗೆ ಕೀಳಾಗಿ ಮಾತಾನಾಡಲು ನಿಮಗೆ ಮಾನ, ಮರ್ಯಾದೆ, ನಾಚಿಕೆ ಇಲ್ವಾ ಎಂದು ಕಿಡಿಕಾರಿದರು‌. ಅಲ್ಲದೆ ಸಿದ್ದರಾಮಯ್ಯ ಇತಿಹಾಸ ತಿಳಿದುಕೊಳ್ಳಲಿ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಬೈಟ್1:- ಜಗದೀಶ ಶೆಟ್ಟರ್, ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ.Conclusion:
Last Updated : Oct 21, 2019, 6:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.