ETV Bharat / state

ಕೊರೊನಾ ನಿಯಂತ್ರಣಕ್ಕೆ ಸಂಪೂರ್ಣ ರಾಜ್ಯ ಲಾಕ್​ಡೌನ್​ ಮಾಡಬೇಕು : ಶಾಸಕ ಬಯ್ಯಾಪುರ - Corona control

ಅಂತಾರಾಜ್ಯ ಸರಕು ಸಾಗಾಣಿಕೆ ಹೊರತು ಪಡಿಸಿ, ಮಾನವ ಸಂಚಾರ ನಿಯಂತ್ರಿಸಬೇಕು. ಈ ಹಿಂದೆ ಎರಡು ತಿಂಗಳ ನಿರ್ಬಂಧಕ್ಕಿಂತಲೂ, ಕಠಿಣ ನಿರ್ಧಾರ ಕೈಗೊಂಡ್ರೆ ಮಾತ್ರ ಕೋವಿಡ್-19 ಹರಡುವಿಕೆ ನಿಯಂತ್ರಿಸಬಹುದಾಗಿದೆ..

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ
author img

By

Published : Jul 14, 2020, 4:56 PM IST

ಕುಷ್ಟಗಿ(ಕೊಪ್ಪಳ) : ಕೊರೊನಾ ವೈರಸ್ ನಿಯಂತ್ರಣದಲ್ಲಿಡಲು ಸಂಪೂರ್ಣ ರಾಜ್ಯವನ್ನು ಲಾಕ್​ಡೌನ್ ಮಾಡುವುದು ಅನಿವಾರ್ಯವೆನಿಸಿದೆ. ಲಾಕ್​ಡೌನ್ ಮಾಡುವುದಾದ್ರೆ ಇಡೀ ರಾಜ್ಯವನ್ನು ಮಾಡಿ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೊರೊನಾ ವೈರಸ್ ನಿಯಂತ್ರಿಸಲು 10 ರಿಂದ 12 ಜಿಲ್ಲೆಗಳ ಲಾಕ್​ಡೌನ್​ ಮಾಡುವ ಬದಲು ಇಡೀ ರಾಜ್ಯವನ್ನು ಲಾಕ್‌ಡೌನ್ ಮಾಡುವುದು ಅಗತ್ಯವಾಗಿದೆ. ಅಂತಾರಾಜ್ಯ ಸರಕು ಸಾಗಾಣಿಕೆ ಹೊರತು ಪಡಿಸಿ, ಮಾನವ ಸಂಚಾರ ನಿಯಂತ್ರಿಸಬೇಕು. ಈ ಹಿಂದೆ ಎರಡು ತಿಂಗಳ ನಿರ್ಬಂಧಕ್ಕಿಂತಲೂ, ಕಠಿಣ ನಿರ್ಧಾರ ಕೈಗೊಂಡ್ರೆ ಮಾತ್ರ ಕೋವಿಡ್-19 ಹರಡುವಿಕೆ ನಿಯಂತ್ರಿಸಬಹುದಾಗಿದೆ ಎಂದರು.

ಕೇವಲ 10 ರಿಂದ 12 ಜಿಲ್ಲೆಗಳ ಲಾಕ್​ಡೌನ್ ಮಾಡಿದ್ರೆ, ಉಳಿದ ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಲಿದೆ. ಈ ಹಿನ್ನೆಲೆ ರಾಜ್ಯವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ. ಈ ಕುರಿತು ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.