ಗಂಗಾವತಿ: ಜಿಲ್ಲಾ ಉಸ್ತುವಾರಿ ಬದಲಾವಣೆ ಕುರಿತು ಸರ್ಕಾರ ಮತ್ತು ಪಕ್ಷದ ವರಿಷ್ಠರು ನಿರ್ಧಾರ ತಾಳುತ್ತಾರೆ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಬಿಜೆಪಿ ಸರ್ಕಾರ ಭದ್ರವಾಗಿದೆ. ಆದರೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಲಕ್ಷ್ಮಣ ಸವದಿ ಅವರನ್ನು ಮುಂದುವರೆಸುವ ಅಥವಾ ಬೇರೊಬ್ಬರನ್ನು ನಿಯೋಜಿಸುವ ನಿರ್ಧಾರ ಸರ್ಕಾರದ್ದು ಎಂದರು.
ಯಾರೇ ಬರಲಿ ಜಿಲ್ಲೆ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ, ಅನುದಾನ ನೀಡುವಂತೆ ಮಾತ್ರ ಮನವಿ ಮಾಡುತ್ತೇವೆ. ಮಿಕ್ಕಿದ್ದು ಸರ್ಕಾರ, ಪಕ್ಷದ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಎಂದು ಪರಣ್ಣ ಮುನವಳ್ಳಿ ಹೇಳಿದರು.