ಅಕ್ರಮ ಪಡಿತರ ಕಾರ್ಡ್ ಹೊಂದಿದವರ ವಿರುದ್ಧ ಕ್ರಮ: ತಹಶೀಲ್ದಾರ್ ಎಚ್ಚರಿಕೆ - ಕುಷ್ಟಗಿ ತಹಶೀಲ್ದಾರ್ ಎಂ. ಸಿದ್ದೇಶ ಸಭೆ ನ್ಯೂಸ್
ಅಕ್ರಮ ಪಡಿತರ ಕಾರ್ಡ್ ಹೊಂದಿದವರ ಬಗ್ಗೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಮಾಹಿತಿ ಇದ್ದೇ ಇರುತ್ತದೆ. ಕೂಡಲೇ ಅನರ್ಹರರ ಪಟ್ಟಿ ಸಿದ್ಧಪಡಿಸಿ ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್ ಎಂ. ಸಿದ್ದೇಶ ಸೂಚಿಸಿದ್ದಾರೆ.
ಕುಷ್ಟಗಿ/ಕೊಪ್ಪಳ : ಅಕ್ರಮ ಪಡಿತರ ಕಾರ್ಡ್ ಹೊಂದಿದವರ ಬಗ್ಗೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಮಾಹಿತಿ ಇದ್ದೇ ಇರುತ್ತದೆ. ಕೂಡಲೇ ಅನರ್ಹರರ ಪಟ್ಟಿ ಸಿದ್ಧಪಡಿಸಿ ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್ ಎಂ. ಸಿದ್ದೇಶ ಸೂಚಿಸಿದರು.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಪಡಿತರ ಕಾರ್ಡ್ ದುರುಪಯೋಗ ತಡೆಯಲು ಈ ಕ್ರಮ ಅನಿವಾರ್ಯವಾಗಿದೆ. ಅನರ್ಹರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜೀವನೋಪಾಯಕ್ಕಾಗಿ, ಸ್ವತಃ ವಾಣಿಜ್ಯ ಉದ್ದೇಶಕ್ಕಾಗಿ ( ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ) ಹೊಂದಿದ ವಾಹನ ಹೊರತು ಪಡಿಸಿ ನಾಲ್ಕ ಚಕ್ರದ ವಾಹನಗಳನ್ನು ಹೊಂದಿದ ಎಲ್ಲ ಕುಟುಂಬಗಳು ಮತ್ತು ವಾರ್ಷಿಕ ಆದಾಯವು 1.20 ಲಕ್ಷ ರೂ.ಗೂ ಹೆಚ್ಚು ಇರುವ ಕುಟುಂಬಗಳು ಪಡಿತರ ಚೀಟಿ (ಬಿಪಿಎಲ್ ಕಾರ್ಡ್) ಪಡೆಯಲು ಅರ್ಹ ಅಲ್ಲ ಎಂದು ತಿಳಿಸಿದರು.
ಇನ್ನು ಕೋವಿಡ್-19 ಹಿನ್ನೆಲೆಯಲ್ಲಿ ನವೆಂಬರ್ ತಿಂಗಳವರೆಗೂ ಉಚಿತ ಪಡಿತರ ವಿತರಿಸಲಾಗುತ್ತದೆ ಎಂದರು. ಈ ವೇಳೆ ಆಹಾರ ಇಲಾಖೆಯ ಶಿರಸ್ತೇದಾರ್ ರಜನಿಕಾಂತ್ ಕೆಂಗಾರಿ, ಶರಣಪ್ಪ ದಾಸರ್ ಮತ್ತಿತರರು ಉಪಸ್ಥಿತರಿದ್ದರು.
TAGGED:
ಅಕ್ರಮ ಪಡಿತರ ಕಾರ್ಡ್