ಗಂಗಾವತಿ (ಕೊಪ್ಪಳ): ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ಶುಲ್ಕ ಪಡೆದು ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ನಗರದ ಸಿಟಿ ಸ್ಕ್ಯಾನ್ ಸೆಂಟರ್ಗಳ ಮೇಲೆ ಕಂದಾಯ ಅಧಿಕಾರಿಗಳು ದಾಳಿ ಮಾಡಿದರು.
ತಹಶೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ದಾಳಿ ಮಾಡಿದ ಅಧಿಕಾರಿಗಳು, ಸಾರ್ವಜನಿಕರಿಂದ ವ್ಯಕ್ತವದ ದೂರುಗಳ ಹಿನ್ನೆಲೆ ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ತಪಾಸಣೆ ನಡೆಸಿದರು. ಶುಲ್ಕ ಸಂಗ್ರಹಣೆಯ ಮಾಹಿತಿ, ಹಾಗೂ ರೆಜಿಸ್ಟ್ರಾರ್ ಪರಿಶೀಲಿಸಿದರು.
ಕೋವಿಡ್ ಸೋಂಕಿತರನ್ನು ಸ್ಕ್ಯಾನಿಂಗ್ ಮಾಡಲು ಸರ್ಕಾರ ದರ ನಿಗದಿ ಮಾಡಿದೆ. ಅದನ್ನು ಹೊರತುಪಡಿಸಿ ಹೆಚ್ಚುವರಿ ವಸೂಲಿ ಮಾಡಿದರೆ ಪರವಾನಿಗೆ ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಚ್ಚರಿಕೆ ನೀಡಿದರು.