ಗಂಗಾವತಿ: ಬೆಳ್ಳಂಬೆಳಗ್ಗೆ ನಗರದಲ್ಲಿ ಕಾರ್ಯಾಚರಣೆಗೆ ಇಳಿದಿದ್ದ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ಅವರು ಕೈಗೆ ಲಾಠಿ ಹಿಡಿದು ನೇರವಾಗಿ ರಸ್ತೆಗಿಳಿದಿದ್ರು.
ನಗರದಲ್ಲಿ ಬೆಳಗ್ಗೆ ಜನ ಸಂಚಾರ ದಟ್ಟವಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಸ್ವಯಂ ವೀಕ್ಷಣೆಯ ಉದ್ದೇಶಕ್ಕೆ ಬೆಳಗ್ಗೆ ಐದು ಗಂಟೆಗೆ ಸಿಟಿ ರೌಂಡಿಗೆ ತಹಶೀಲ್ದಾರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಜನ ಸಂಚಾರ ಕಂಡು ಬಂದ ಹಿನ್ನೆಲೆ ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿ ಕೊಂಡ ತಹಶೀಲ್ದಾರ್, ಲಾಠಿ ಹಿಡಿದು ಡಿವೈಎಸ್ಪಿ ಡಾ.ಬಿ.ಪಿ. ಚಂದ್ರಶೇಖರ ನೇತೃತ್ವದಲ್ಲಿ ನಗರದ ರಸ್ತೆಗಳಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಪೆಟ್ರೋಲಿಂಗ್ ನಡೆಸಿ ಗಮನ ಸೆಳೆದರು.