ಕೊಪ್ಪಳ: ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪಿ. ಸುನೀಲಕುಮಾರ್ ಅವರನ್ನು ಬೆಂಗಳೂರು ಬಿಬಿಎಂಪಿ ಸ್ಪೆಷಲ್ ಕಮೀಷನರ್ (ಹಣಕಾಸು - ಐಟಿ) ಆಗಿ ನೇಮಿಸಿ ವರ್ಗಾವಣೆಗೊಳಿಸಿದೆ.
![Sunilkumar](https://etvbharatimages.akamaized.net/etvbharat/prod-images/kn-kpl-06-29-dc-sunilkumar-transefar-photo-7202284_29062020215228_2906f_1593447748_719.jpg)
ಕೊಪ್ಪಳದ ನೂತನ ಜಿಲ್ಲಾಧಿಕಾರಿಯಾಗಿ 2012 ರ ಬ್ಯಾಚಿನ ಐಎಎಸ್ ಅಧಿಕಾರಿ ಸುರಾಲ್ಕರ್ ವಿಕಾಸ್ ಕಿಶೋರ್ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
![Koppal District](https://etvbharatimages.akamaized.net/etvbharat/prod-images/kn-kpl-06-29-dc-sunilkumar-transefar-photo-7202284_29062020215228_2906f_1593447748_17.jpg)
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಪಿ. ಸುನೀಲ್‌ಕುಮಾರ್ ಅವರು ಸಾಕಷ್ಟು ಎಫರ್ಟ್ ಹಾಕಿದ್ದರು. ದಕ್ಷ ಹಾಗೂ ಕಾಳಜಿಯುಳ್ಳ ಅಧಿಕಾರಿ ಎಂದು ಜಿಲ್ಲೆಯ ಜನರ ಮೆಚ್ಚುಗೆ ಗಳಿಸಿದ್ದ ಪಿ. ಸುನೀಲಕುಮಾರ್ ಅವರ ವರ್ಗಾವಣೆಯಾಗಿರೋದು ಜಿಲ್ಲೆಯ ಜನರಲ್ಲಿ ಬೇಸರ ಮೂಡಿಸಿದೆ. ಇಲ್ಲಿನ ರಾಜಕಾರಣಿಗಳು ದಕ್ಷ ಅಧಿಕಾರಿಗಳನ್ನು ಉಳಿಸಿಕೊಳ್ಳುವುದಿಲ್ಲ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ.