ETV Bharat / state

ಭಾರತದ ಇತಿಹಾಸ ಅರಿಯಲು ಪ್ರತಿಯೊಬ್ಬರೂ 'ದಿ ಕಾಶ್ಮೀರ್​ ಫೈಲ್ಸ್' ನೋಡಿ: ಸುಬುಧೇಂದ್ರ ಶ್ರೀ ಕರೆ - The Kashmir Files

ಕಾಶ್ಮೀರದಲ್ಲಿ ಪಂಡಿತರು ಅನುಭವಿಸಿದ ನೈಜ ಚಿತ್ರಣವನ್ನು 'ದಿ ಕಾಶ್ಮೀರ್​ ಫೈಲ್ಸ್'​ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ನಮ್ಮ ದೇಶದ ಶಿರೋಭಾಗ ಉಳಿಸಿಕೊಳ್ಳಲು ಎಲ್ಲರೂ ಈ ಚಿತ್ರ ನೋಡಲೇಬೇಕು ಎಂದು ಮಂತ್ರಾಲಯದ ಸುಬುಧೇಂದ್ರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಬುಧೇಂದ್ರ ಶ್ರೀ
ಸುಬುಧೇಂದ್ರ ಶ್ರೀ
author img

By

Published : Mar 21, 2022, 7:48 AM IST

ಗಂಗಾವತಿ: ಕಾಶ್ಮೀರದಲ್ಲಿ ನಡೆದ ನೈಜ ಘಟನೆಗಳನ್ನು 'ದಿ ಕಾಶ್ಮೀರ್​ ಫೈಲ್ಸ್'​ ಸಿನಿಮಾದಲ್ಲಿ ತೋರಿಸಲಾಗಿದ್ದು, ಭಾರತದ ಸಮಗ್ರ ಇತಿಹಾಸ ಅರಿಯಲು ಪ್ರತಿಯೊಬ್ಬರು ಚಿತ್ರ ವೀಕ್ಷಣೆ ಮಾಡಬೇಕು ಎಂದು ಮಂತ್ರಾಲಯದ ಸುಬುಧೇಂದ್ರ ಶ್ರೀಗಳು ಹೇಳಿದರು.

ನಗರದ ಕನಕ ದುರ್ಗ ಚಿತ್ರಮಂದಿರದಲ್ಲಿ ಭಕ್ತಗಣದೊಂದಿಗೆ 'ದಿ ಕಾಶ್ಮೀರ್​ ಫೈಲ್ಸ್' ಸಿನಿಮಾ ವೀಕ್ಷಿಸಿ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಪಂಡಿತರು ಅನುಭವಿಸಿದ ನೈಜ ಚಿತ್ರಣವನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ನಮ್ಮ ದೇಶದ ಶಿರೋಭಾಗ ಉಳಿಸಿಕೊಳ್ಳಲು ಎಲ್ಲರೂ ಈ ಚಿತ್ರ ನೋಡಲೇಬೇಕು ಎಂದು ಕರೆ ಕೊಟ್ಟರು.

'ದಿ ಕಾಶ್ಮೀರ್​ ಫೈಲ್ಸ್' ಕುರಿತು ಅಭಿಪ್ರಾಯ ಹಂಚಿಕೊಂಡ ಸುಬುಧೇಂದ್ರ ಶ್ರೀ

ಜಗತ್ತಿನ ಸಮಸ್ತ ಆಗು-ಹೋಗುಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀಗಳು, ಜಗತ್ತಿನ ಸಕಲ ಸಮಸ್ಯೆಗಳಿಗೆ ಜಗದ್ಗುರು ಶ್ರೀಕೃಷ್ಣ ಪರಿಹಾರ ರೂಪವಾಗಿ ಗೀತೋಪದೇಶ ನೀಡಿದ್ದಾರೆ. ಇಂತಹ ವಿಶಿಷ್ಟ ಗ್ರಂಥವನ್ನು ಎಲ್ಲ ರಾಜ್ಯಗಳು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಇದನ್ನೂ ಓದಿ: ಮತ್ತೊಮ್ಮೆ ಮಣಿಪುರ ಸಿಎಂ ಆಗಿ ಬಿರೇನ್​ ಸಿಂಗ್ ಅವಿರೋಧ ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.