ETV Bharat / state

ಧಮ್ ಇದ್ದರೆ ಹನುಮಮಾಲಾಧಾರಿಗಳನ್ನು ತಡೆಯಿರಿ : ಕೊಪ್ಪಳ ಡಿಸಿಗೆ ಶ್ರೀರಾಮಚಂದ್ರ ಸೇನೆ ಸವಾಲು

author img

By

Published : Dec 12, 2021, 7:51 PM IST

ಚುನಾವಣೆ ವೇಳೆ ಪ್ರಚಾರ, ಮತದಾನ ಇವೆಲ್ಲದಕ್ಕೂ ಅವಕಾಶ ಕಲ್ಪಿಸುತ್ತೀರಿ. ಇದೇ ಡಿ.14ಕ್ಕೆ ವಿಧಾನ ಪರಿಷತ್ ಫಲಿತಾಂಶವಿದ್ದು, ಆ ವೇಳೆ ಬಿಜೆಪಿಯವರನ್ನು ತಡೆಯುತ್ತಿರೇನು, ಅವರೇ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ವಿಜಯೋತ್ಸವ ಆಚರಿಸುತ್ತಾರೆ. ಅದನ್ನು ತಡೆಯುತ್ತಿರೇನು? ಬರೀ ದೇವಸ್ಥಾನಗಳ ಮೇಲೆ ಟಾರ್ಗೆಟ್ ಯಾಕೆ ಎಂದು ಪ್ರಶ್ನಿಸಿದರು..

Sri ramachandra seene president challenged DC
ಜಿಲ್ಲಾಧಿಕಾರಿಗಳಿಗೆ ಶ್ರೀರಾಮಚಂದ್ರ ಸೇನೆ ಅಧ್ಯಕ್ಷ ಸವಾಲು

ಕುಷ್ಟಗಿ : ಅಂಜನಾದ್ರಿ ಬೆಟ್ಟಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟೆಯಿಂದ ಮೂರುವರೆ ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಬರುತ್ತಿದ್ದಾರೆ. ಬೆಟ್ಟ ಹತ್ತೇ ಹತ್ತುತ್ತೇವೆ. ಹೇಗೆ ತಡೆಯುತ್ತೀರಿ ನೋಡೋಣ ಎಂದು ಶ್ರೀರಾಮಚಂದ್ರ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ ಡಿಸಿಗೆ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲಾಧಿಕಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಅನ್ಯ ಜಿಲ್ಲೆಯ ಹನುಮ ಮಾಲಾಧಾರಿಗಳಿಗೆ ನಿರ್ಬಂಧ ಹೇರಿದ್ದಾರೆ. ಒಂದು ಜಿಲ್ಲೆಯ ಜಿಲ್ಲಾಧಿಕಾರಿ ಇನ್ನೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹನುಮ ಮಾಲಧಾರಿಗಳ ನಿರ್ಬಂಧದ ಬಗ್ಗೆ ಪತ್ರ ಬರೆದಿದ್ದು, ಯಾವ ಅರ್ಹ ಪತ್ರ ಅಲ್ಲ, ಬರೀ ಖಾಲಿ ಪತ್ರ ಮಾತ್ರ.

ಜಿಲ್ಲಾಧಿಕಾರಿಗಳು ಇತರೆ ಜಿಲ್ಲೆಗಳ ಜಿಲ್ಲಾಧಿಕಾರಿಗೆ ಮನವಿ ಮಾಡಬೇಕೆ ವಿನಃ ಆದೇಶ ಮಾಡಿರುವುದು ಸರಿ ಅಲ್ಲ. ಕೊಪ್ಪಳ ಜಿಲ್ಲಾಧಿಕಾರಿಗಳೆ ನೀವು ಜನ ಸೇವಕರಾಗಿದ್ದು, ಜನ ಸೇವೆ ಮಾಡಬೇಕು ಎಂದರು.

ಚುನಾವಣೆ ವೇಳೆ ಪ್ರಚಾರ, ಮತದಾನ ಇವೆಲ್ಲದಕ್ಕೂ ಅವಕಾಶ ಕಲ್ಪಿಸುತ್ತೀರಿ. ಇದೇ ಡಿ.14ಕ್ಕೆ ವಿಧಾನ ಪರಿಷತ್ ಫಲಿತಾಂಶವಿದ್ದು, ಆ ವೇಳೆ ಬಿಜೆಪಿಯವರನ್ನು ತಡೆಯುತ್ತಿರೇನು, ಅವರೇ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ವಿಜಯೋತ್ಸವ ಆಚರಿಸುತ್ತಾರೆ. ಅದನ್ನು ತಡೆಯುತ್ತಿರೇನು? ಬರೀ ದೇವಸ್ಥಾನಗಳ ಮೇಲೆ ಟಾರ್ಗೆಟ್ ಯಾಕೆ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿಗಳು ನಿರ್ಬಂಧ ಹೇರುವುದಾದರೆ ಕೋವಿಡ್ ಹೋಗುವವರೆಗೂ ಸಭೆ-ಸಮಾರಂಭ ಬೇಡ, ಚುನಾವಣೆಯೂ ಬೇಡ. ಇಲ್ಲ ರಾಜೀನಾಮೆ ನೀಡಿ ಹೋಗಿ. ಮೂರು ಜಿಲ್ಲೆಗಳಿಂದ ಹನುಮಮಾಲಾಧಾರಿಗಳು ಬರುತ್ತಿದ್ದು, ಧಮ್​ ಇದ್ದರೆ ತಡೆಯಿರಿ ಎಂದರು.

ಈ ವೇಳೆ ತಾಲೂಕು ಅಧ್ಯಕ್ಷ ಪ್ರಮೋದ್‌ ಬಡಿಗೇರ, ಯಮನೂರ ಕೋಮಾರ್ ಮೊದಲಾದವರು ಇದ್ದರು.

ಇದನ್ನೂ ಓದಿ: ಪರಿಷತ್ ಚುನಾವಣೆ : ಕನಕಪುರದ ನಾರಾಯಣಪುರ ಮತಗಟ್ಟೆಯಲ್ಲಿ ನಾಳೆ ಮರು ಮತದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.