ETV Bharat / state

ಕಣ್ಮನ ಸೆಳೆಯುತ್ತಿರುವ ಕೊಪ್ಪಳದ ಗಣೇಶ ಮೂರ್ತಿಗಳು.. - ವಾರಕಾರ ಓಣಿ

ಪ್ರಚಲಿತ ವಿದ್ಯಮಾನಗಳು ಮತ್ತು ಟ್ರೆಂಡ್‌ಗೆ ತಕ್ಕಂತೆ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಸಲಾಗುತ್ತೆ. ಕೊಪ್ಪಳದಲ್ಲಂತೂ ಪ್ರತಿಷ್ಠಾಪಿಸಲಾಗುವ ಗಣೇಶಮೂರ್ತಿಗಳನ್ನ ನೋಡೋದೆ ಒಂದು ಸೊಬಗು.

ಕೊಪ್ಪಳದ ಕೋಟೆ ಮಾದರಿಯ ಗಣೇಶನ ಮಂಟಪ
author img

By

Published : Sep 4, 2019, 9:22 PM IST

ಕೊಪ್ಪಳ: ಡೊಳ್ಳು ಹೊಟ್ಟೆ ಗಣಪತಿಗೆ ಅದೇನೆ ಅಲಂಕಾರ ಮಾಡಿದರೂ ಚೆಂದ. ತಮ್ಮ ಭಕ್ತಿ ತೋರ್ಪಡಿಸಲು ಪಾರ್ವತಿಸುತನನ್ನ ಅದೆಷ್ಟು ವೇಷ-ಭೂಷಣಗಳಲ್ಲಿ ಕಾಣೋಕೆ ಇಷ್ಟಪಡ್ತಾರೆ. ಅದರಲ್ಲೂ ಪ್ರಚಲಿತ ವಿದ್ಯಮಾನಗಳು ಮತ್ತು ಟ್ರೆಂಡ್‌ಗೆ ತಕ್ಕಂತೆ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಸಲಾಗುತ್ತೆ. ಕೊಪ್ಪಳದಲ್ಲಂತೂ ಪ್ರತಿಷ್ಠಾಪಿಸಲಾಗುವ ಗಣೇಶಮೂರ್ತಿಗಳನ್ನ ನೋಡೋದೆ ಒಂದು ಸೊಬಗು.

ಕಣ್ಮನ ಸೆಳೆಯುತ್ತಿರುವ ಕೊಪ್ಪಳದ ಗಣೇಶ ಮೂರ್ತಿಗಳು..

ಸ್ವಾತಂತ್ರ್ಯ ಚಳವಳಿ ಗಟ್ಟಿಗೊಳಿಸಲು ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವ ಈಗ ವಿವಿಧ ರೂಪ ಪಡೆದಿದೆ. ಕೊಪ್ಪಳದಲ್ಲಂತೂ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವ ಮಂಡಳಿಗಳು ವೈಶಿಷ್ಟ್ಯತೆಗಳಿಂದ ಆದ್ಯತೆ ನೀಡ್ತಾರೆ.ಪ್ರತಿವರ್ಷಕ್ಕಿಂತಲೂ ಈ ಸಾರಿ ಕೆಲ ಗಣೇಶ ಮೂರ್ತಿಗಳು ವಿಶೇಷವೆನಿಸುತ್ತಿವೆ. ಕೋಟೆ ಪ್ರದೇಶ, ವಾರಕಾರ ಓಣಿ ಹಾಗೂ ನಗರದ ಜವಾಹರ ರಸ್ತೆಯಲ್ಲಿ ವಿಶಿಷ್ಟವಾಗಿ ಗಣಪತಿಯನ್ನ ಕೂರಿಸಿದ್ದಾರೆ.

ವಾರಕಾರ ಓಣಿಯಲ್ಲಿ ಗಣೇಶಮೂರ್ತಿ ಇಸ್ರೋದ ರಾಕೆಟ್ ಚಂದ್ರಯಾನ-2 ಮಾದರಿ ರೂಪಿಸಲಾಗಿದೆ. ಅತ್ತ ಜವಾಹರ ರಸ್ತೆಯಲ್ಲಿ ಮೇದಾರ ಕೇತೇಶ್ವರ ಯುವಕ ಸಂಘ ಗಣೇಶಮೂರ್ತಿ ನೋಡುಗರ ಗಮನ ಸೆಳೆಯುತ್ತಿದೆ. ಐತಿಹಾಸಿಕ ಕೊಪ್ಪಳದ ಕೋಟೆ ಮಾದರಿಯನ್ನ ರೂಪಿಸಲಾಗಿದೆ. ಕೋಟೆಯೊಳಗೆ ಪ್ರವೇಶಿಸುತ್ತಿದ್ದೇವೇನೋ ಎಂಬ ಭಾವನೆ ಇಲ್ಲಿಗೆ ಹೋದವರಿಗೆ ಆಗುತ್ತದೆ.

ಇವೆರಡಕ್ಕಿಂತ ಭಿನ್ನವಾಗಿ ಗಮನ ಸೆಳೆಯುತ್ತಿರೋದು ಕೋಟೆ ಪ್ರದೇಶದ ಗಣೇಶ ಮೂರ್ತಿ. ಶ್ರೀ ವಿನಾಯಕ ಮಿತ್ರಮಂಡಳಿ ಸ್ಥಾಪನೆ ಮಾಡಿರುವ ಗಣೇಶ ವಿಭಿನ್ನತೆಯಿಂದ‌ ಕೂಡಿದೆ. ಗ್ರಾಮೀಣ ಸೊಗಡಿನ ಪರಿಸರದಲ್ಲಿ ಬೆಣ್ಣೆ ಕದಿಯುವ ಕೃಷ್ಣನನ್ನು ಯಶೋಧೆ ಕಂಬಕ್ಕೆ ಕಟ್ಟಿರುವುದನ್ನ ಕಣ್ಣಿಗೆ ಮುದ ನೀಡುತ್ತೆ. ಇದು ಜನರನ್ನು ಆಕರ್ಷಿಸುತ್ತಿದೆ ಎನ್ನುತ್ತಾರೆ ಶ್ರೀ ವಿನಾಯಕ ಮಿತ್ರ ಮಂಡಳಿಯ ನಿತೇಶ್ ಪುಲಸ್ಕರ್. ಗಣೇಶ ಹಬ್ಬದಲ್ಲಿ ಕೊಪ್ಪಳ ಈಗ ಕಂಗೊಳಿಸುತ್ತಿರೋದಂತೂ ನಿಜ.

Intro:

Body:ಕೊಪ್ಪಳ:- ನಾಡಿನಾದ್ಯಂತ ಗಣೇಶೋತ್ಸವ ಸಂಭ್ರಮದಿಂದ ನಡೆಯುತ್ತಿದ್ದು ಗಣೇಶ ಮೂರ್ತಿಗಳನ್ನು ನಿಮಜ್ಜನ ಸಹ ನಡೆಯುತ್ತಿದೆ. ಆಕರ್ಷಕವಾಗಿ ಪ್ರತಿಷ್ಠಾಪಿಸಲಾಗಿರುವ ಗಣೇಶಮೂರ್ತಿಗಳು ಜನರ ಗಮನ ಸೆಳೆಯುತ್ತಿವೆ. ಅದರಂತೆ ಕೊಪ್ಪಳ ನಗರದಲ್ಲಿ ಸ್ಥಾಪನೆ ಮಾಡಿರುವ ಸಾರ್ವಜನಿಕ ಗಣೇಶ ಮೂರ್ತಿಗಳು ಕೆಲ ವಿಶೇಷತೆಗಳಿಂದ ಆಕರ್ಷಿಸುತ್ತಿವೆ.

ಹೌದು...., ಸ್ವಾತಂತ್ರ್ಯ ಚಳುವಳಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡ ಸಾರ್ವಜನಿಕ ಗಣೇಶೋತ್ಸವ ಇಂದು ವಿವಿಧ ರೂಪಗಳನ್ನು ಪಡೆದುಕೊಂಡಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡುವ ಮಂಡಳಿಗಳು ಭಿನ್ನ ವಿಭಿನ್ನವಾಗಿ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾ ಬರುತ್ತಿದ್ದಾರೆ. ನಗರದಲ್ಲಿ ಪ್ರತಿವರ್ಷವೂ ಬೇರೆಬೇರೆ ರೀತಿಯಲ್ಲಿ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶಮೂರ್ತಿಗಳಲ್ಲಿ ಕೆಲವೊಂದಿಷ್ಟು ಗಣೇಶ ಮೂರ್ತಿಗಳು ವಿಶೇಷವೆನಿಸುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರುವುದು ಕೋಟೆ ಪ್ರದೇಶ, ವಾರಕಾರ ಓಣಿ ಹಾಗೂ ನಗರದ ಜವಾಹರ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳು. ವಾರಕಾರ ಓಣಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶಮೂರ್ತಿ ಇಸ್ರೋದ ರಾಕೇಟ್ ನಲ್ಲಿ ಚಂದ್ರಯಾನ ಮಾಡುವಂತೆ ಪ್ರತಿಷ್ಠಾಪಿಸಲಾಗಿದೆ. ಅದರಂತೆ ಜವಾಹರ ರಸ್ತೆಯಲ್ಲಿ ಮೇದಾರ ಕೇತೇಶ್ವರ ಯುವಕ ಸಂಘ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿಯೂ ನೋಡುಗರ ಗಮನ ಸೆಳೆಯುತ್ತಿದೆ. ಐತಿಹಾಸಿಕ ಕೊಪ್ಪಳದ ಕೋಟೆಯ ಮಾದರಿಯನ್ನು ಗಣೇಶ ಪ್ರತಿಷ್ಠಾಪನೆಯ ಮಂಟಪದ ಹೊರಭಾಗದಲ್ಲಿ ಅಳವಡಿಸಲಾಗಿದೆ. ಕೋಟೆಯೊಳಗೆ ಪ್ರವೇಶ ಮಾಡುತ್ತಿದ್ದೇವೇನೋ ಎಂಬ ಫೀಲ್ ಆಗುತ್ತದೆ. ಇವೆರಡಕ್ಕಿಂತ ಭಿನ್ನವಾಗಿ ಗಮನ ಸೆಳೆಯುತ್ತಿರೋದು ಕೋಟೆ ಪ್ರದೇಶದಲ್ಲಿರುವ ಗಣೇಶ ಮೂರ್ತಿ. ಶ್ರೀ ವಿನಾಯಕ ಮಿತ್ರಮಂಡಳಿ ಸ್ಥಾಪನೆ ಮಾಡಿರುವ ಗಣೇಶ ವಿಭಿನ್ನತೆಯಿಂದ‌ ಕೂಡಿದೆ. ಗ್ರಾಮೀಣ ಸೊಗಡಿನ ಪರಿಸರದಲ್ಲಿ ಬೆಣ್ಣೆ ಕದಿಯುವ ಕೃಷ್ಣನನ್ನು ಯಶೋಧೆ ಕಂಬಕ್ಕೆ ಕಟ್ಟಿರುವ ಮಾದರಿಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನು ಗ್ರಾಮೀಣ ಜನರ ಬದುಕಿನ ಹಳೆಯ ಹಾಗೂ ರೈತರ ಬದುಕಿನ ಪರಿಕರಗಳನ್ನು ಇಲ್ಲಿ ತಂದಿಡಲಾಗಿದೆ. ಹೀಗಾಗಿ, ಇಲ್ಲಿ ಒಂದು ರೀತಿಯಲ್ಲಿ ಗಣೇಶನ ದರ್ಶನದ ಜೊತೆಗೆ ಗ್ರಾಮೀಣ ಸೊಗಡಿನ ಪರಿಚಯ ಹಾಗೂ ಪರಿಕರಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಒಟ್ನಲ್ಲಿ ಗಜಾನನ ಆಚರಣೆಯಲ್ಲಿ ವಿಭಿನ್ನ ದೃಷ್ಠಿಕೋನದಲ್ಲಿ ಆಚರಣೆ ಮಾಡುತ್ತಿರೋದು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಂಡಳಿಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೈಟ್1:- ನಿತೇಶ್ ಪುಲಸ್ಕರ್, ಮುಖಂಡ, ಶ್ರೀ ವಿನಾಯಕ ಮಿತ್ರ ಮಂಡಳಿ ಕೋಟೆ ಪ್ರದೇಶ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.